ಕೊಳವೆ ಬಾವಿ ದುರಂತ ತಪ್ಪಿಸಲು ಹೊಸ ಮಾರ್ಗ ಸೂಚಿ
ಬೆಂಗಳೂರು, ಆ.4 : ಕೊಳವೆ ಬಾವಿ ದುರಂತಗಳಿಂದ ಎಚ್ಚೆತ್ತ ಸರ್ಕಾರ ದುರಂತಗಳನ್ನು ತಡೆಯಲು ಹೊಸ ಮಾರ್ಗ ಸೂಚಿಯನ್ನು ಸಿದ್ಧಪಡಿಸಿದೆ. ಭಾನುವಾರ ಬಾಗಲಕೋಟೆಯ ಸೂಳೀಕೇರಿಯಲ್ಲಿ ನಡೆದ ದುರಂತಕ್ಕೆ ಸಂಬಂಧಿಸಿದಂತೆ ಪಿಡಿಓ ಮತ್ತು ಎಇಇ ಅವರನ್ನು ಅಮಾನತು ಮಾಡಿದೆ.
ಸೋಮವಾರ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದು, ಬಾದಾಮಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಶೆಟ್ಟಿ ಮತ್ತು ಸೂಳಿಕೇರಿ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಶೌಖತ್ ಅಲಿ ಅವರನ್ನು ಅಮಾನತು ಮಾಡಲಾಗಿದೆ.

ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿಚ ಎಚ್.ಕೆ.ಪಾಟೀಲ್ ಕೊಳವೆ ಬಾವಿ ದುರಂತಗಳನ್ನು ತಡೆಯುವ ಸಂಬಂಧ ಹೊಸ ಮಾರ್ಗಸೂಚಿಯನ್ನು ಹೊರಡಿಸಿದ್ದಾರೆ. ಹೊಸ ಮಾರ್ಗಸೂಚಿ ಅನ್ವಯ ನಿರುಪಯುಕ್ತ ಕೊಳವೆ ಬಾವಿ ಮುಚ್ಚದಿದ್ದರೆ, ಬಾವಿ ಕೊರೆದ ಮಾಲೀಕ ಹಾಗೂ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. [ಬಾವಿ ಕೊರೆತ : ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳು]
ಮಾರ್ಗ ಸೂಚಿಯ ಅಂಶಗಳು
* ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಕೊಳವೆ ಬಾವಿಗಳ ಸರ್ವೆಗೆ ಆದೇಶ [ತಿಮ್ಮಣ್ಣ ರಕ್ಷಣೆ ಹೇಗೆ ನಡೆಯುತ್ತಿದೆ?]
* 10 ದಿನದಲ್ಲಿ ಎಲ್ಲಾ ನಿರುಪಯುಕ್ತ ಕೊಳವೆ ಬಾವಿಗಳ ಮುಚ್ಚಲು ಆದೇಶ
* ಖಾಸಗಿ ಕೊಳವೆ ಬಾವಿ ಮುಚ್ಚಿಸದಿದ್ದರೆ ಮಾಲೀಕ ಹಾಗೂ ಬಾವಿ ಕೊರೆದ ಕಂಪನಿಯ ವಿರುದ್ಧ ಪ್ರಕರಣ ದಾಖಲು
* ಖಾಸಗಿಯಾಗಿ ಕೊಳವೆ ಬಾವಿ ಕೊರೆಯುವ ಮುನ್ನ ಸ್ಥಳೀಯ ಅಧಿಕಾರಿಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು












Click it and Unblock the Notifications