ಮೈತ್ರಿ ಸರಕಾರ 'ತಾತ್ಕಾಲಿಕ' ಎಂದ ಅನಂತ್ ಕುಮಾರ್ ಮಾತಿನ ಅರ್ಥವೇನು?

Dubbing the current political situation in Karnataka as 'ludicrous,' Union Minister for Parliamentary Affairs Ananth Kumar said the new JDS-Congress coalition government was direction less and only t

ಬೆಂಗಳೂರು, ಜೂನ್ 8: ಕರ್ನಾಟಕದಲ್ಲಿರುವ ಸದ್ಯದ ರಾಜಕೀಯವನ್ನು ಹಾಸ್ಯಾಸ್ಪದ ಎಂದಿರುವ ಕೇಂದ್ರ ಸಚಿವ ಅನಂತ್ ಕುಮಾರ್, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ತಾತ್ಕಾಲಿಕ ಎಂದು ಹೇಳಿದ್ದಾರೆ.

ಮಾಧ್ಯಮಗಳ ಜೊತೆಗೆ ಇಲ್ಲಿ ಮಾತನಾಡಿದ ಅವರು, ಸದ್ಯದ ಸರಕಾರಕ್ಕೆ ಗುರಿಗಳೇ ಇಲ್ಲ ಎಂದು ದೂರಿದ್ದಾರೆ.

"ರಾಜ್ಯದ ಜನರು ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ನೀಡಿದ್ದರೂ, ಜೆಡಿಎಸ್ ಮತ್ತು ಕಾಂಗ್ರೆಸ್ ಹಿಂದಿನ ಬಾಗಿಲಿನ ಮೂಲಕ ಅಧಿಕಾರ ಹಿಡಿದಿವೆ. ಇದು ಕೇವಲ ತಾತ್ಕಾಲಿಕ," ಎಂದು ಅನಂತ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

New govt in Karnataka will be temporary; Ananth Kumar

ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಅಸಮಧಾನ ಮತ್ತು ಬಂಡಾಯ ಹೊಗೆಯಾಡುತ್ತಿದೆ ಎಂದು ಅವರು ವಿವರಿಸಿದ್ದಾರೆ. ಮೈತ್ರಿಗೆ ಕಾರ್ಯಕರ್ತರಲ್ಲಿ ಅಸಮಧಾನವಿದ್ದು, ಇದು ಸಣ್ಣ ಅವಧಿಯ ಮೈತ್ರಿ ಎಂದು ಅವರು ತಿಳಿಸಿದ್ದಾರೆ.

ಸದ್ಯದಲ್ಲೇ ಸರಕಾರ ಬೀಳಲಿದೆ ಎಂಬುದನ್ನು ಅನಂತ್ ಕುಮಾರ್ ಪರೋಕ್ಷವಾಗಿಯಾದರೂ ಸ್ಪಷ್ಟವಾಗಿಯೇ ಹೇಳಿದ್ದಾರೆ. ಹಾಗಿದ್ದರೆ ಸರಕಾರವನ್ನು ಬಿಜೆಪಿ ಬೀಳಿಸಲು ತಂತ್ರ ಹೂಡಿದೆಯಾ? ಅಥವಾ ಕಾಂಗ್ರೆಸ್ ಜೆಡಿಎಸ್ ಮೈತ್ರಿಯಲ್ಲೇ ಒಡಕು ಉಂಟಾಗಿ ಸರಕಾರ ಬೀಳಲಿದೆಯಾ ಎಂಬುದಕ್ಕೆ ಕಾಲವೇ ಉತ್ತರ ಹೇಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+