ಕಾಂಗ್ರೆಸಿಗೆ ಹೋಗಲ್ಲ ಎಂದ 'ಅತೃಪ್ತ' ಸೋಮಣ್ಣ

Subscribe to Oneindia Kannada

ಬೆಂಗಳೂರು, ಜನವರಿ 20: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಅಸಮಧಾನಗೊಂಡವರ ಸಾಲಿಗೆ ವಿ. ಸೋಮಣ್ಣ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ರಾಜ್ಯ ಬಿಜೆಪಿಯ 'ರಾಯಣ್ಣ ಬ್ರಿಗೇಡ್' ವಿವಾದದ ಬೆಂಕಿಗೆ ಸೋಮಣ್ನ ಅತೃಪ್ತಿ ತುಪ್ಪ ಸುರಿದಂತಾಗಿದೆ.

ಹಿರಿಯ ಮುಖಂಡ ಹಾಗೂ ಲಿಂಗಾಯುತರ ನಾಯಕ ವಿ. ಸೋಮಣ್ಣ ಯಡಿಯೂರಪ್ಪ ವಿರುದ್ಧ ಅಸಮಧಾನಗೊಂಡಿದ್ದಾರೆ. ತಮ್ಮನ್ನು ಬಿಜೆಪಿಗೆ ಕರೆ ತಂದು ಈಗ ಕೀಳಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂಬುದು ಅವರ ದೂರು ಎನ್ನಲಾಗಿದೆ. ಈ ವಿಚಾರವಾಗಿ ಇಂದು ಸೋಮಣ್ಣ ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿಗಳು ರಾಜಕೀಯ ಪಡಸಾಲೆಯಿಂದ ಕೇಳಿ ಬರುತ್ತಿದ್ದವು.[ಕಿತ್ತಾಡುತ್ತಿರುವ ಬಿಜೆಪಿ ನಾಯಕರಿಗೆ ನೊಂದ ಕಾರ್ಯಕರ್ತನ ಮುಕ್ತಪತ್ರ]

Never leave BJP -V Somanna

ಆದರೆ ಇಂದು ಆರ್. ಅಶೋಕ್ ಜತೆ ಮಾತನಾಡಿರುವ "ಸೋಮಣ್ಣ ನಾನು ಕಾಂಗ್ರೆಸ್ಸಿಗೆ ಸೇರುವುದಿಲ್ಲ. ನನಗೆ ಬಿಜೆಪಿ ಎಲ್ಲಾ ಕೊಟ್ಟಿದೆ ನಾನ್ಯಾಕೆ ಬಿಜೆಪಿ ಬಿಡಲಿ. ನನಗೆ ಅಸಮಧಾನ ಇರುವುದು ಯಡಿಯೂರಪ್ಪ ಜತೆಗೆ ಮಾತ್ರ. ನನಗೆ ಹಳೆ ಯಡಿಯೂರಪ್ಪ ಬೇಕು. ಈಗಿನ ಹೊಸ ಯಡಿಯೂರಪ್ಪ ಬೇಡ," ಎಂದಿದ್ದಾರೆ.

ಭೇಟಿ ವೇಳೆ ಆರ್. ಅಶೋಕ್ ಪಕ್ಷ ಬಿಡದಂತೆ ಸೋಮಣ್ಣ ನವರಿಗೆ ಮನವೊಲಿಸಿದ್ದಾರೆ. ತಮ್ಮ ಗೆಳೆಯ ಅಶೋಕ್ ಮಾತಿಗೆ ಸೋಮಣ್ಣ ಒಪ್ಪಿಕೊಂಡು ಬಿಜೆಪಿಯಲ್ಲೇ ಇರಲು ಒಪ್ಪಿದ್ದಾರೆ ಎನ್ನಲಾಗಿದೆ.[ಯಡಿಯೂರಪ್ಪನವರೇ ಹೆಣ್ಣಿನ ಮಾತನ್ನು ಕೇಳಿದ್ರೆ ಸರ್ವನಾಶವಾಗ್ತೀರಾ]

ಮೂಲಗಳ ಪ್ರಕಾರ ಶೋಭಾ ಕರಂದ್ಲಾಜೆ ಮತ್ತು ಸೋಮಣ್ಣ ಇಬ್ಬರ ನಡುವೆ ಸಂಘರ್ಷ ನಡೆದಿದೆ. ಈ ಕಾರಣಕ್ಕೆ ಯಡಿಯೂರಪ್ಪ ಸೋಮಣ್ಣರನ್ನು ಕಡೆಗಣಿಸುತ್ತಿದ್ದಾರೆ ಎನ್ನಲಾಗಿದೆ. ಏನೇ ಆದರೂ ಚುನಾವಣಾ ಸಮಯದಲ್ಲಿಯೇ ಬಿಜೆಪಿ ಒಂದಾದ ಮೇಲೊಂದು ಭಿನ್ನಮತಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವುದು ಮಾತ್ರ ವಿಪರ್ಯಾಸ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After resignation rumor, BJP prominent leader V Somanna clarify that, he will not join congress and never leave BJP
Please Wait while comments are loading...