ಬೀದರ್ : ಬ್ರಿಮ್ಸ್ ಸಿಬ್ಬಂದಿ ವರ್ತನೆಗೆ ಜನರ ಆಕ್ರೋಶ

Posted By: Gururaj
Subscribe to Oneindia Kannada

ಬೀದರ್, ಅಕ್ಟೋಬರ್ 24 : ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ರೋಗಿಯೊಬ್ಬರು ಪರದಾಡುವಂತಾಗಿದೆ.

ಭಾಲ್ಕಿ ತಾಲೂಕಿನ ಉಚ್ಚಾ ಗ್ರಾಮದ ಸಂಗಪ್ಪ ಭೀಮಣ್ಣ ಬಿರಾದಾರ (97) ಮಂಗಳವಾರ ಚಿಕಿತ್ಸೆಗೆಂದು ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್)ಗೆ ಬಂದಿದ್ದರು. ಭೀಮಣ್ಣ ಅವರಿಗೆ ಎರಡು ಕಣ್ಣು ಕಾಣುವುದಿಲ್ಲ, ನಡೆಯಲೂ ಸಾಧ್ಯವಿಲ್ಲ.

ಸಚಿವರ ಸಮ್ಮುಖದಲ್ಲೇ ಕಿಮ್ಸ್ ಆಸ್ಪತ್ರೆ ಸಿಬ್ಬಂದಿ ಯಡವಟ್ಟು

Negligence case reported at BIMS hospital

ಆದರೆ, ಆಸ್ಪತ್ರೆಗೆ ಬಂದ ವೃದ್ಧನಿಗೆ ಆಸ್ಪತ್ರೆ ಸಿಬ್ಬಂದಿ ವೀಲ್ ಚೇರ್ ನೀಡಿಲ್ಲ. ಆಸ್ಪತ್ರೆಯ ಸಿಬ್ಬಂದಿಗಳು ವೃದ್ಧನನ್ನು ದಾಖಲು ಮಾಡಲು ಯಾವುದೇ ಸಹಕಾರ ನೀಡಿಲ್ಲ. ಇದರಿಂದಾಗಿ ಮೊಮ್ಮಗ ಕೈಲಾಸ ಬಿರಾದಾರ ಆಸ್ಪತ್ರೆಯ ಹೊರಗಡೆಯಿಂದ ಅಜ್ಜನನ್ನು ಎತ್ತಿಕೊಂಡು ಬಂದು ಮೊದಲನೇ ಅಂತಸ್ತಿನ ಕಟ್ಟಡಕ್ಕೆ ಕರೆದುಕೊಂಡು ಬಂದಿದ್ದಾರೆ.

ಹುಬ್ಬಳ್ಳಿ : ಕಿಮ್ಸ್‌ನಲ್ಲಿ ಬೈಕ್, ಮೊಬೈಲ್ ಕಳ್ಳರ ಪಾಲು

ಈ ಸಮಯದಲ್ಲಿ ಆಸ್ಪತ್ರೆಯ ಎಲ್ಲಾ ಸಿಬ್ಬಂದಿಗಳು ಇದನ್ನು ನೋಡುತ್ತಾ ನಿಂತಿದ್ದರು. ಆದರೆ, ಯಾರೂ ಸಹಾಯಕ್ಕೆ ಬರಲಿಲ್ಲ. ಆಸ್ಪತ್ರೆಯ ಸಿಬ್ಬಂದಿಗಳ ವರ್ತನೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲವು ದಿನಗಳ ಹಿಂದೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿಯೂ ಇಂತಹ ಘಟನೆ ನಡೆದಿತ್ತು. ಆಕ್ಸಿಜನ್ ಸಿಲಿಂಡರ್ ತೆಗೆದುಕೊಂಡು ಹೋಗಲು ಸಹಕಾರ ನೀಡದ ಸಿಬ್ಬಂದಿ ಕೈಕಟ್ಟಿ ಕೂತಿದ್ದ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Hospital administration negligence case reported at Bidar Institute of Medical Sciences hospital. Hospital administration not responded for patient to admit hospital.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ