ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NEET UG 2022: 1ನೇ ಸುತ್ತಿನ ಸೀಟು ಹಂಚಿಕೆ ಪಟ್ಟಿ ಬಿಡುಗಡೆ

|
Google Oneindia Kannada News

ಬೆಂಗಳೂರು, ನವೆಂಬರ್ 11: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಪ್ರವಿಪೂರ್ವ) 2022 ಕೌನ್ಸೆಲಿಂಗ್ ಮೊದಲ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಕೆಇಎ ಅಧಿಕೃತ ಸೈಟ್ kea.kar.nic.in ನಲ್ಲಿ ಸಂಪೂರ್ಣ ವೇಳಾಪಟ್ಟಿ ಪರಿಶೀಲಿಸಬಹುದು.

ಕೆಇಎ ವೇಳಾಪಟ್ಟಿ ಪ್ರಕಾರ, ಸೀಟು ಹಂಚಿಕೆಯಾದ ಅಭ್ಯರ್ಥಿಗಳು ವೆಬ್‌ಸೈಟ್‌ ನಲ್ಲಿ ಸೀಟು ಹಂಚಿಕೆಯನ್ನು ನವೆಂಬರ್ 11 ರಿಂದ ನವೆಂಬರ್ 13ರವರೆಗೆ ಮಧ್ಯಾಹ್ನ 1 ಗಂಟೆಗೆ ಸಕ್ರಿಯವಾಗಿರುವ ಅವಧಿಯಲ್ಲಿ ನೋಡಬಹದು. ಬಳಿಕ ಶುಲ್ಕ ಸಹಿತವಾಗಿ

ಸೀಟು ಹಂಚಿಕೆಯನ್ನು ನವೆಂಬರ್ 14 ಮತ್ತು 15ರವರೆಗೆ ಇರಲಿದ್ದು, ನಂತರ ಸೀಟು ಹಂಚಿಕೆ ನೋಡಲು ಅವಕಾಶ ಇರುವುದಿಲ್ಲ.

NEET UG 2022 1st Round Counselling Seat Allotment List Released

ಅಭ್ಯರ್ಥಿಗಳು ನವೆಂಬರ್ 15 ಮತ್ತು 16, 2022 ರಂದು ಪ್ರವೇಶದ ಆದೇಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ನಿಗದಿಪಡಿಸಿದ ವೈದ್ಯಕೀಯ, ದಂತ ಕಾಲೇಜಿನಲ್ಲಿ ನವೆಂಬರ್ 17ರೊಳಗೆ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

NEET UG 2022 1st Round Counselling Seat Allotment List Released

ವೈದ್ಯಕೀಯ ಅಥವಾ ದಂತ ವೈದ್ಯಕೀಯ ಸೀಟು ಪಡೆದ ಅಭ್ಯರ್ಥಿಗಳು ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದಲ್ಲಿ ಮೂಲ ದಾಖಲೆ ಸಲ್ಲಿಸಬೇಕಾಗಿಲ್ಲ. ಆದರೆ ಅಭ್ಯರ್ಥಿಗಳು ಪ್ರವೇಶದ ಸಮಯದಲ್ಲಿ ಆಯಾ ಕಾಲೇಜುಗಳಲ್ಲಿ ಮೂಲ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಸೀಟು ಹಂಚಿಕೆಯ ಒಂದು ಪ್ರತಿ, ಪರಿಶೀಲನಾ (ವೆರಿಫಿಕೇಶನ್) ಸ್ಲಿಪ್, ಶುಲ್ಕ ಪಾವತಿಸಿದ ರಶೀದಿ ಒಳಗೊಂಡಂತೆ ಎಲ್ಲ ಮೂಲ ದಾಖಲೆಗಳನ್ನು ಕೊಂಡೊಯ್ಯ ಬೇಕು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಭ್ಯರ್ಥಿಗಳು ಪ್ರಾಧಿಕಾರಿಗಳ ಅಧಿಕೃತ ವೈಬ್‌ಸೈಟ್‌ಗೆ ಭೇಟಿ ನೀಡಬೇಕು ಎಂದು ತಿಳಿಸಲಾಗಿದೆ.

English summary
National Eligibility and Entrance Test Undergraduate 2022 1st Round Counselling Seat Allotment List Released.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X