ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವರಾತ್ರಿ ವಿಶೇಷ: ಕಾರವಾರದಲ್ಲಿ ಗುಜರಾತಿಗರ ನವರಾತ್ರಿ ದಾಂಡಿಯಾ ನೃತ್ಯ

By ಕಾರವಾರ ಪ್ರತಿನಿಧಿ
|
Google Oneindia Kannada News

ಕಾರವಾರ, ಸೆಪ್ಟೆಂಬರ್ 24: ನವರಾತ್ರಿಯ ಸಂಭ್ರಮ ಉತ್ತರಕನ್ನಡ ಜಿಲ್ಲೆಯಾದ್ಯಂತ ಈಗ ಮನೆ ಮಾಡಿದೆ. ವಿವಿಧ ಅವತಾರದಲ್ಲಿ 9 ದಿನಗಳೂ ವೈಭವೋಪೇತವಾಗಿ ಪೂಜಿಸಲ್ಪಡುವ ದೇವಿಗೆ ಭಕ್ತರು ವಿವಿಧ ಹರಕೆ ಹೊತ್ತು, ಪೂಜೆ ಪುನಸ್ಕಾರಗಳನ್ನು ನೆರವೇರಿಸುತ್ತಿದ್ದಾರೆ.

ಮೈಸೂರು ದಸರಾ: ಯದುವೀರ್ ಖಾಸಗಿ ದರ್ಬಾರ್ ವಿಶೇಷ ಕ್ಷಣಗಳುಮೈಸೂರು ದಸರಾ: ಯದುವೀರ್ ಖಾಸಗಿ ದರ್ಬಾರ್ ವಿಶೇಷ ಕ್ಷಣಗಳು

ಇನ್ನೊಂದೆಡೆ ರಾಜಸ್ತಾನಿ, ಗುಜರಾತಿಗರ 'ದಾಂಡಿಯಾ ನೃತ್ಯ’ ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ಬಟ್ಟೆ ವ್ಯಾಪಾರ, ಫಾಸ್ಟ್‌ ಫುಡ್‌ ಅಂಗಡಿಗಳು, ಬಂಗಾರದ ಅಂಗಡಿ ಸೇರಿದಂತೆ ಹಲವು ಉದ್ಯೋಗವನ್ನು ಅರಸಿ ಕಾರವಾರದಲ್ಲಿ ನೆಲೆಯೂರಿರುವ ರಾಜಸ್ತಾನಿ, ಗುಜರಾತಿಗರಿಗೆ ನವರಾತ್ರಿ ವಿಶೇಷ ಹಬ್ಬ.

Durga Pooja

ದಸರೆಯ 9 ರಾತ್ರಿಯೂ ನೃತ್ಯದ ಮೂಲಕ ದುರ್ಗಾ ದೇವಿಗೆ ನಮನ ಸಲ್ಲಿಸುವುದು ಸಂಪ್ರದಾಯ. ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡುವ ದೇವಸ್ಥಾನ ಅಥವಾ ಮಂಟಪದ ಮುಂಭಾಗದಲ್ಲಿ ಸುಮಾರು ರಾತ್ರಿ 10 ಗಂಟೆಗೆ ಆರಂಭಗೊಳ್ಳುವ ಇವರ ನೃತ್ಯ ಮಧ್ಯರಾತ್ರಿಯವರೆಗೂ ಮುಂದುವರಿಯುತ್ತದೆ.

ಕಾರವಾರದ ಕುಂಠಿ ಮಹಾಮಾಯೆ ದೇವಸ್ಥಾನ, ಸಂತೋಷಿಮಾತಾ ದೇವಸ್ಥಾನ, ಕೆಎಚ್‌ಬಿ ಗಣಪತಿ ದೇವಸ್ಥಾನದ ಸಭಾಂಗಣ, ಕಳಸಾವಾಡದ ಬಯಲು ಜಾಗ, ಗುನಗಿವಾಡಾ, ಖಾರ್ವಿವಾಡಾ, ಸಾಯಿಕಟ್ಟಾ, ಕೋಡಿಬಾಗ, ಸದಾಶಿವಗಡ ಸೇರಿದಂತೆ ಹಲವು ಕಡೆ ರಾತ್ರಿಯಾದರೆ ಸಾಕು ದಾಂಡಿಯಾ ನೃತ್ಯದ ಕುಣಿತ ಪ್ರಾರಂಭವಾಗಿಬಿಡುತ್ತಿದೆ.

ಕೋಲನ್ನು ಬಳಸಿ ಹಾಡಿಗೆ ಹೆಜ್ಜೆ ಹಾಕುವ ಮೂಲಕ ದಾಂಡಿಯಾ ಆಡುವ ಸಂಪ್ರದಾಯವನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿರುವ ಇವರ ಜತೆ ಸ್ಥಳೀಯರು ಇತ್ತೀಚಿಗೆ ಸಾಥ್ ನೀಡುತ್ತಿದ್ದಾರೆ.

ದಸರಾ, ದೀಪಾವಳಿಗಾಗಿ ವಿಶೇಷ ರೈಲುಗಳ ಸಂಚಾರದಸರಾ, ದೀಪಾವಳಿಗಾಗಿ ವಿಶೇಷ ರೈಲುಗಳ ಸಂಚಾರ

ಕುಟುಂಬಗಳ ಎಲ್ಲ ಸದಸ್ಯರು ಹೆಣ್ಣು– ಗಂಡು ಭೇದ ಭಾವ ಮರೆತು, ಹಿರಿಯರು– ಕಿರಿಯರು ಎನ್ನದೇ ಒಟ್ಟಿಗೆ ಬೆರೆತು ದಾಂಡಿಯಾ ನೃತ್ಯಕ್ಕೆ ಹೆಜ್ಜೆ ಹಾಕುವುದು ವಿಶೇಷ.

ಜಾತಿ ಭೇದ ಮರೆತು ಕನ್ನಡಿಗರೂ ಸಾಥ್ ನೀಡುವುದು ಅವರಿಗೂ ಖುಷಿ ತಂದಿದೆ. ಈಗಷ್ಟೇ ಮದುವೆಯಾದ ನವ ದಂಪತಿ, ಪ್ರೀತಿಸಿದ ಯುವಕ– ಯುವತಿಯರು, ಚಿಕ್ಕ ಮಕ್ಕಳ ದಾಂಡಿಯಾ ನೃತ್ಯ ನೋಡುವುದೇ ಒಂದು ರೀತಿಯ ಮನೋರಂಜನೆ.

English summary
On the occasion of Navaratri Gujarat Dandiya dance attracting Karwar, Uttara Kannada people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X