ರಾಷ್ಟ್ರೀಯ ಪಿಂಚಣಿ ಯೋಜನೆ: ಮೃತ ನೌಕರನ ಪಿಂಚಣಿ ಪಡೆಯಲು ಮಾರ್ಗಸೂಚಿ ಬಿಡುಗಡೆ
ಬೆಂಗಳೂರು, ಮೇ. 30: ರಾಷ್ಟ್ರೀಯ ಪಿಂಚಣಿ ಯೋಜನೆ ವ್ಯಾಪ್ತಿಗೆ ಬರುವ ಸರ್ಕಾರಿ ನೌಕರರು 2018 ರ ನಂತರ ಸೇವೆಯಲ್ಲಿರುವಾಗಲೇ ಮೃತಪಟ್ಟಲ್ಲಿ ನಾಮ ನಿರ್ದೇಶಿತರಿಗೆ ಮೃತ ನೌಕರನ ಖಾತೆಯಲ್ಲಿರುವ ಸಂಪೂರ್ಣ ಮೊತ್ತವನ್ನು ಪಾವತಿ ಮಾಡಲು ಸರ್ಕಾರ ಆದೇಶಿಸಿತ್ತು ಈ ಕುರಿತ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಈ ಕುರಿತು ಸಲ್ಲಿಸಿದ್ದ ಪ್ರಸ್ತಾವನೆಗೆ ಅನುಮೋದನೆ ನೀಡಿರುವ ಆರ್ಥಿಕ ಇಲಾಖೆ ಮೇ. 30 ರಂದು ಅಧಿಕೃತ ಆದೇಶ ಹೊರಡಿಸಿದೆ. ಏ. 1, 2018 ರ ಬಳಿಕ ಸರ್ಕಾರಿ ಸೇವೆಯಲ್ಲಿರುವ ಎನ್‌ಪಿಎಸ್ ನೌಕರರ ನಾಮ ನಿರ್ದೇಶಿತರ ಆಯ್ಕೆ ಮೇರೆಗೆ ಕುಟುಂಬ ಪಿಂಚಣಿ ಮಂಜೂರು ಮಾಡುವ ಸಂಬಂಧ ಸರ್ಕಾರ 2018 ರಲ್ಲಿಯೇ ಆದೇಶ ಹೊರಡಿಸಿತ್ತು. 2018 ಏ. 1 ರ ನಂತರ ಎನ್‌ಪಿಎಸ್ ನೌಕರರು ಸೇವೆಯಲ್ಲಿರುವಾಗ ಮೃತಪಟ್ಟರೆ ನೌಕರನ ವಂತಿಗೆ ಮತ್ತು ಅದರ ಮೇಲಿನ ಆದಾಯವನ್ನು ಮೃತರ ನಾಮ ನಿರ್ದೇಶಿತರಿಗೆ ನೀಡುವಂತೆ ಆದೇಶಿಸಿತ್ತು.
ಈ ಕುರಿತ ಪ್ರಸ್ತಾವನೆಯನ್ನು ಪರಿಶೀಲಿಸಿದ ಆರ್ಥಿಕ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. 2018 ರ ನಂತರ ಸರ್ಕಾರಿ ಸೇವೆಯಲ್ಲಿರುವ ಎನ್‌ಪಿಎಸ್ ನೌಕರ ಮೃತಪಟ್ಟರೆ, ಅವರ ನಾಮ ನಿರ್ದೇಶಿತರ ಕೋರಿಕೆ ಮೇರೆಗೆ ಪಿಂಚಣಿ ಸಂಪೂರ್ಣ ಮೊತ್ತವನ್ನು ಪಡೆಯಬಹುದು. ಅದನ್ನು ಪಡೆಯಲು ಈ ಕೆಳಕಂಡಂಗೆ ಆರ್ಥಿಕ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಪ್ರಸ್ತುತ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ನೌಕರರು 2018 ಏ.1 ರಿಂದ ಸೇವೆಯಲ್ಲಿರುವಾಗಲೇ ಮೃತಪಟ್ಟ ಸಂದರ್ಭದಲ್ಲಿ ನಾಮ ನಿರ್ದೇಶಿತರು ಕುಂಟುಂಬ ಪಿಂಚಣಿ ಆಯ್ಕೆ ಮಾಡಿಕೊಂಡಲ್ಲಿ, ಪ್ರಾನ್ (ಪರ್ಮನೆಂಟ್ ರಿಟೈರ್‌ಮೆಂಟ್ ಅಕೌಂಟ್ ನಂಬರ್) ಖಾತೆಯಲ್ಲಿ ಶೇಖರಣೆಗೊಂಡಿರುವ ಮೊತ್ತದಲ್ಲಿ ಮೃತ ನೌಕರನ ವಂತಿಗೆ ಮತ್ತು ಅದರ ಖಾತೆಯಲ್ಲಿ ಶೇಖರಣೆಗೊಂಡಿರುವ ಮೊತ್ತದಲ್ಲಿ ಮೃತ ನೌಕರನ ವಂತಿಗೆ ಮತ್ತು ಅದರ ಆದಾಯದವನ್ನು ಮೃತನ ನಾಮ ನಿರ್ದೇಶಿತರಿಗೆ ಇತ್ಯರ್ಥ ಪಡಿಸಲು ಸರ್ಕಾರದ ಲೆಕ್ಕ ಶೀರ್ಷಿಕೆ 0071-01-800-4-01-251 ಖಜಾನೆ - 2 ಚಲನ್ ಮೂಲಕ ಜಮೆ ಮಾಡಲು ಆದೇಶಿಸಲಾಗಿದೆ.

ಖಜಾನೆಯಲ್ಲಿರುವ ಮೃತ ನೌಕರನ ಪ್ರಾನ್ ಖಾತೆಯಲ್ಲಿರುವ ಸಂಪೂರ್ಣ ಮೊತ್ತವನ್ನು ಹಿಂಪಡೆಯಲು ಮೃತರ ನಾಮ ನಿರ್ದೇಶಿತರ ಕೋರಿಕೆ ಮೇರೆಗೆ ಕ್ಲೇಮ್ ಐಡಿ ಮತ್ತು ಅಂಗೀಕಾರ ಮಾಡುವುದು. ಪ್ರಾನ್ ಖಾತೆಯಲ್ಲಿ ಶೇಖರಣೆಗೊಂಡಿರುವ ಸಮಪೂರ್ಣ ಮೊತ್ತವನ್ನು ಖಜಾನೆ ಅಯುಕ್ತರ ಪದನಾಮದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಿವಾಜಿನಗರ ಖಾತೆಯಲ್ಲಿ ತೆರೆದಿರುವ ಪ್ರೋಕ್ಸಿ ಪೂಲ್ ಖಾತೆಗೆ ಜಮೆ ಮಾಡುವುದು ಜಮೆಯಾದ ಮೊತ್ತದ ವಿವರವನ್ನು ಸಿಆರ್ಎ ರವರು ಎನ್ಪಿಎಸ್ ಘಟಕಕ್ಕೆ ಇ ಮೇಲ್ ಮೂಲಕ ಮಾಹಿತಿ ನೀಡುವುದು.
ಪ್ರಾಕ್ಸಿ ಪೂಲ್ ಬ್ಯಾಂಕ್ ಖಾತೆಗೆ ಜಮೆಯಾಗಿರುವ ಮೊತ್ತವನ್ನು ಖಜಾನೆ 2 ಚಲನ್ ಮೂಲಕ ಲೆಕ್ಕ ಶೀರ್ಷಿಕೆ ಖಾತೆಗೆ ಜಮೆ ಮಾಡುವುದು.
ಪ್ರಾನ್ ಖಾತೆಯಲ್ಲಿರುವ ನೌಕರರ ವಂತಿಗೆ ಮತ್ತು ಅದರ ಮೇಲಿನ ಆದಾಯವನ್ನು ಮೃತ ನೌಕರರ ನಾಮ ನಿರ್ದೇಶಿತರಿಗೆ ಇ ಪಾವತಿ ಮೂಲಕ ಪಾವತಿ ಸಲುವಾಗಿ ನಾಮ ನಿರ್ದೇಶಿತರ ದೃಢೀಕೃತ ಐಡಿ ವಿವರಗಳನ್ನು ಕುಟುಂಬ ಪಿಂಚಣಿ ಪ್ರಸ್ತಾವನೆಯೊಂದಿಗೆ ಖಜಾನೆಗೆ ನೀಡುವುದು ಡಿಡಿಓ ಜವಾಬ್ಧಾರಿ ಆಗಿರುತ್ತದೆ. ಸರ್ಕಾರದ ವಂತಿಗೆ ಮತ್ತು ಅದರ ಮೇಲಿನ ಆದಾಯವನ್ನು ಸರ್ಕಾರದ ಲೆಕ್ಕ ಶೀರ್ಷಿಕೆಗೆ ಜಮೆ ಮಾಡಲು ಹಾಗೂ ನೌಕರನ ವಂತಿಗೆ ಮತ್ತು ಅದರ ಮೇಲಿನ ಆದಾಯವನ್ನು ಮೃತ ನೌಕರನ ನಾಮ ನಿರ್ದೇಶಿತರಿಗೆ ಇ ಪಾವತಿ ಮೂಲಕ ಪಾವತಿಸಲು ಆದೇಶಿಸಿ ಅಧಿಕೃತ ಜ್ಞಾಪನವನ್ನು ಎನ್‌ಪಿಎಸ್ ಘಟಕದಿಂದ ಬೆಂಗಳೂರು ನಗರ ಜಿಲ್ಲಾ ಖಜಾನೆ ಪಾವತಿಗಾಗಿ ಕಳುಹಿಸುವುದು.

ನಗರ ಜಿಲ್ಲಾ ಖಜಾನೆಯಲ್ಲಿ ಸಿಟಿಎಸ್ -8 ಬಿಲ್ ನ್ನು ಸಿದ್ದಪಡಿಸಿ ನೌಕರರ ವಂತಿಗೆ ಮತ್ತು ಅದರ ಮೇಲಿನ ಆದಾಯವನ್ನು ಮೃತ ನೌಕರನ ನಾಮ ನಿರ್ದೇಶಿತರಿಗೆ ಇ ಪಾವತಿ ಮೂಲಕ ಪಾವತಿಸುವುದು. ಜಿಲ್ಲಾ ಖಜಾನೆಯಿಂದ ಸರ್ಕಾರದ ವಂತಿಗೆ ಹಾಗೂ ಅದರ ಮೇಲಿನ ಆದಾಯವನ್ನು ಲೆಕ್ಕ ಶೀರ್ಷಿಕೆಗೆ ಟಿಟಿಆರ್ ಮೂಲಕ ಹೊಂದಾಣಿಕೆ ಮಾಡಿರುವ ಚಲನ್ ಪ್ರತಿ ಕೆಟಿಸಿ- 25 ವಿವರ ನೌಕರರ ವಂತಿಗೆ ಮತ್ತು ಅದರ ಮೇಲಿನ ಆದಾಯವನ್ನು ಸಂಬಂಧಪಟ್ಟವರಿಗೆ ಪಾವತಿ ಮಾಡಿರುವ ಯುಟಿಅರ್ ವಿವರಗಳನ್ನು ಎನ್ ಪಿಎಸ್ ಘಟಕಕ್ಕೆ ನೀಡುವುದು. ಸದರಿ ಮಾಹಿತಿಯನ್ನು ಎನ್‌ಪಿಎಸ್ ಘಟಕದಿಂಡ ಡಿಡಿಓ ರವರಿಗೆ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.











Click it and Unblock the Notifications