ಕರ್ನಾಟಕದಲ್ಲಿನ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು..Karnataka New Highways
Karnataka New Highways: ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ದೊಡ್ಡ ಕ್ರಾಂತಿಯೇ ಆಗುತ್ತಿದೆ. ಈಗಾಗಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಹೊರತುಪಡಿಸಿ, ಕೆಲವು ಉದ್ಘಾಟನೆ ಹಂತದಲ್ಲಿದ್ದರೆ, ಇನ್ನೂ ಹಲವು ಕಾಮಗಾರಿ ಹಂತದಲ್ಲಿವೆ. ಅದರಲ್ಲೂ ಪ್ರಮುಖವಾಗಿ ನೋಡೋದಾದ್ರೆ, ರಾಜ್ಯದಲ್ಲಿ ಕಳೆದ ಒಂದು ದಶಕದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಕಿಲೋ ಮೀಟರ್ ರಸ್ತೆ ರಾಷ್ಟ್ರೀಯ ಹೆದ್ದಾರಿಗೆ ಸೇರ್ಪಡೆ ಆಗಿವೆ ಹಾಗೂ ಇದರಿಂದ ಯಾವೆಲ್ಲಾ ಜಿಲ್ಲೆಗಳಿಗೆ ಅನುಕೂಲ ಎನ್ನುವ ಪ್ರಶ್ನೆಗೆ ಸಂಪೂರ್ಣ ಉತ್ತರ ಇಲ್ಲಿ ನೀಡಲಾಗಿದೆ.
ಕಳೆದ 10 ವರ್ಷಗಳಲ್ಲಿ 2015-2025ರ ವರೆಗೆ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಯಲ್ಲಿ ಭಾರಿ ಹೂಡಿಕೆ ಆಗಿದೆ. 2025ರ ವೇಳೆಗೆ 9,000 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ಕೈಗೊಳ್ಳಲಾದ ಪ್ರಮುಖ ಹೆದ್ದಾರಿ ಯೋಜನೆಗಳು
* ಹಾಸನ-ರಾಯಚೂರು 4-ಪಥದ ಹೆದ್ದಾರಿ
* ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ
* ಹುಬ್ಬಳ್ಳಿ-ಧಾರವಾಡ ಹೆದ್ದಾರಿ
* ಮೈಸೂರು-ಮಡಿಕೇರಿ ಹೆದ್ದಾರಿ
* ಶಿರಾಡಿ ಘಾಟ್ ರಸ್ತೆ ಅಭಿವೃದ್ಧಿ (ಮಂಗಳೂರು-ಬೆಂಗಳೂರು ಕಾರಿಡಾರ್)
* ಬೀದರ್-ಹುಮ್ನಾಬಾದ್ ಹೆದ್ದಾರಿ (NH-367)
* ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ
* ಸಿಗಂದೂರು ಚೌಡೇಶ್ವರಿ ಸೇತುವೆ
* ಕಲಬುರಗಿ-ಯಾದಗಿರಿ ನಡುವೆ ರಸ್ತೆ ಮೇಲ್ಸೇತುವೆ
ಈಗಾಗಲೇ ರಾಜ್ಯದಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಲೋಕಾರ್ಪಣೆಯಾಗಿದ್ದು, ವಾಹನ ಸಂಚಾರ ಕೂಡ ಮಾಡುತ್ತಿದೆ. ಅಲ್ಲದೆ, ಇತ್ತೀಚೆಗಷ್ಟೇ ಶಿವಮೊಗ್ಗದ ಅಂಬಾರಗೋಡ್ಲು- ಕಳಸವಳ್ಳಿ ಸೇತುವೆಯನ್ನು ಕೂಡ ಉದ್ಘಾಟನೆ ಮಾಡಲಾಗಿದ್ದು, ಇದಕ್ಕೆ ಸಿಗಂದೂರು ಚೌಡೇಶ್ವರಿ ಸೇತುವೆ ಎಂದು ಹೆಸರಿಡಲಾಗಿದೆ.
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ವೇ ಕೂ ಕೆಲವೇ ದಿನಗಳಲ್ಲಿ ಉದ್ಘಾನೆಯಾಗಲಿದೆ ಎನ್ನುವ ಮಾಹಿತಿ ಇದೆ. ಈಗಾಗಲೇ ಕರ್ನಾಟಕ ಭಾಗದಲ್ಲಿ ಪೂರ್ಣಗೊಂಡಿದ್ದು, ವಾಹನ ಸಂಚಾರ ಕೂಡ ಮಾಡುತ್ತಿವೆ. ಇತ್ತೀಚೆಗಷ್ಟೇ ಟೋಲ್ ದರ ಕೂಡ ನಿಗದಿ ಮಾಡಲಾಗಿದ್ದು, ಈ ಶುಲ್ಕಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುಮೋದನೆ ಬಳಿಕ ಜಾರಿಯಾಗಲಿವೆ ಎಂದು ತಿಳಿದುಬಂದಿದೆ. ಇನ್ನೂ ತಮಿಳುನಾಡು, ಆಂಧ್ರ ಪ್ರದೇಶದಲ್ಲಿ ಕಾಮಗಾರಿ ಬಾಕಿ ಉಳಿದ ಕಾರಣ ಇಷ್ಟು ದಿನದವರೆಗೂ ಲೋಕಾರ್ಪಣೆಯನ್ನು ಮುಂದೂಡಿಕೆ ಮಾಡುತ್ತಲೇ ಬಂದಿದ್ದಾರೆ.
ಯಾವ್ಯಾವ ನಗರಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಕಾರಿ?: ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಶಿವಮೊಗ್ಗ, ತುಮಕೂರು, ಕೊಡಗು, ಬೀದರ್, ಕಾಗಿಣಾ, ಕಲಬುರಗಿ, ಶಿರಾಡಿ ಘಾಟ್, ಸಿಗಂದೂರು, ರಾಯಚೂರು, ಹಾಸನ ಇನ್ನಿತರ ಪ್ರದೇಶಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಯೋಜನೆಗಳು ಆಗಿವೆ. ಇದರಿಂದ ಈ ಭಾಗಗಲ್ಲಿ ಆರ್ಥಿಕ ಅಭಿವೃದ್ಧಿ, ಪ್ರವಾಸೋದ್ಯಮದ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ತುಂಬಾ ಪ್ತಯೋಜನೆಗಳಿ ಆಗಿವೆ.
ರಾಜ್ಯದಲ್ಲಿ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಅವುಗಳ ಮಾರ್ಗಗಳು ರಾಜ್ಯದ ವಿವಿಧ ಭಾಗಗಳನ್ನು ಹಾಗೂ ಪ್ರಮುಖ ನಗರಗಳನ್ನು ಸಂಪರ್ಕಿಸುತ್ತವೆ. ಹಾಗಾದ್ರೆ ಯಾವೆಲ್ಲಾ ಪ್ರಮುಖ ಹೆದ್ದಾರಿಗಳು ಯಾವೆಲ್ಲಾ ಯಾವೆಲ್ಲಾ ನಗರಗಳಿಗೆ ಸಂಪರ್ಕ ಕಲ್ಪಿಸಲಿವೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿ ನೀಡಲಾಗಿದೆ ತಿಳಿಯಿರಿ.
ಯಾವ ಮಾರ್ಗಗಳಲ್ಲಿ ಹಾದುಹೋಗಲಿವೆ?
* ಬೆಂಗಳೂರು-ಪುಣೆ (NH-4): ಬೆಂಗಳೂರು, ತುಮಕೂರು, ಚಿತ್ತಾಪುರ, ಧಾರವಾಡ, ಹುಬ್ಬಳ್ಳಿ, ಮಹಾರಾಷ್ಟ್ರ
* ಬೆಂಗಳೂರು-ಮೈಸೂರು-ಮಡಿಕೇರಿ-ಮಂಗಳೂರು (NH-275/75): ಬೆಂಗಳೂರು, ಮೈಸೂರು, ಮಡಿಕೇರಿ, ಸುಳ್ಯ, ಮಂಗಳೂರು, ಪಶ್ಚಿಮ ಕರಾವಳಿ.
* ಹಾಸನ-ಮಂಗಳೂರು (ಶಿರಾಡಿ ಘಾಟ್, NH-75): ಬೆಂಗಳೂರು, ಕನಕಪುರ, ಚನ್ನರಾಯಪಟ್ಟಣ, ಹಾಸನ, ಶಿರಾಡಿ ಘಾಟ್, ಮಂಗಳೂರು
* ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್‌ವೇ (NH-48/44): ಹೊಸಕೋಟೆ, ಮುಳಬಾಗಲು, ಚಿತ್ತೂರು, ರಾಣಿಪೇಟೆ, ವಾಲಾಜಪೇಟೆ, ಶ್ರೀಪೆರಂಬದೂರು, ಪೊನ್ನಮಲ್ಲೆ, ಕೋಯಂಬೆಡು ಮೂಲಕ ಹಾದುಹೋಗಲಿದೆ. ಈ ಹೆದ್ದಾರಿ ಬೆಂಗಳೂರಿನ ಹೊರವಲಯದಲ್ಲಿರುವ ಹೊಸಕೋಟೆಯಿಂದ ಆರಂಭವಾಗಿ ಮಾಲೂರು, ಬಂಗಾರಪೇಟೆ, ಕೋಲಾರ, ಪಲಮನೇರ್, ಚಿತ್ತೂರು, ರಾಣಿಪೇಟೆ ಪಟ್ಟಣಗಳ ಮೂಲಕ ಸಾಗಲಿದ್ದು, ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ ಶ್ರೀಪೆರಂಬದೂರಿನಲ್ಲಿ ಕೊನೆಗೊಳ್ಳಲಿದೆ.
* ಹುಬ್ಬಳ್ಳಿ-ಧಾರವಾಡ-ಬಳ್ಳಾರಿ-ಹೈದರಾಬಾದ್ (NH-67/50): ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ಗಣಿಗೇರಿ, ಹೈದರಾಬಾದ್
* ಬೆಂಗಳೂರು-ಶಿವಮೊಗ್ಗ-ಹೊನ್ನಾವರ (NH-206/69): ಬೆಂಗಳೂರು, ತುಮಕೂರು, ಶಿವಮೊಗ್ಗ, ಸಾಗರ, ಹೊನ್ನಾವರ, ಕಡಲತಡಿ.
* ಬೀದರ್-ಕಲಬುರಗಿ-ವಿಜಯಪುರ-ಬುಧಗುಂಟಾ (NH-50): ಉತ್ತರ ಕರ್ನಾಟಕದಿಂದ ಪಶ್ಚಿಮಕ್ಕೆ ವಿಜಯಪುರಕ್ಕೆ ಸಂಪರ್ಕ
ಅದರಲ್ಲೂ ಈಗಾಗಲೇ ನಿರ್ಮಾಣ ಆಗಿರುವ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಮತ್ತಷ್ಟು ಅಭಿವೃದ್ಧಿಯಿಂದ ಕೇರಳದ ಜೊತೆ ವ್ಯಾಪಾರ ಇನ್ನೂ ಸುಧಾರಿಸಲಿದೆ. ಇದರಿಂದ ಸಮುದ್ರದ ಕಡೆಯಿಂದ ಒಳನಾಡಿನ ಜಿಲ್ಲೆಗಳಿಗೆ ಕೈಗಾರಿಕಾ ಸಾಮಗ್ರಿಗಳು, ಸೇರಿದಂತೆ ಇನ್ನಿತರ ವಸ್ತುಗಳ ಸಾಗಾಣಿಕೆ ಸುಲಭ ಆಗುತ್ತದೆ.
ಇನ್ನು ಜುಲೈ 2025ರಲ್ಲಿ ಒಟ್ಟು ₹2,041 ಕೋಟಿಗಳ ಮೊತ್ತದ 9 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಘೋಷಣೆ ನೀಡಲಾಗಿದೆ. ಇವುಗಳಲ್ಲಿ ಸೇತುವೆಗಳು, ಬ್ರಿಡ್ಜ್ ಅಳವಡಿಕೆ, ರಸ್ತೆ ಪುನಾರಾಭಿವೃದ್ಧಿಗಳಿ ಸೇರಿವೆ. ಒಟ್ಟಿನಲ್ಲಿ ಇವೆಲ್ಲಾ ಯೋಜನೆಗಳಿಂದ ಆಸ್ತಿದಾರರಿಗೆ ತುಂಬಾ ಅನುಕೂಲ ಆದಂತಾಗಲಿದ್ದು, ಸುತ್ತಮುತ್ತಲಿನ ಪ್ರದೇಶಗಳು ಅಭಿವೃದ್ಧಿಯತ್ತ ಸಾಗಲಿವೆ. ಅದರಲ್ಲೂ ಹೆದ್ದಾರಿ ಪಕ್ಕದಲ್ಲಿನ ರೈತರು ಕೋಟ್ಯಾಧಿಪತಿಗಳು ಆಗುವುದರಲ್ಲಿ ಆಶ್ಚರ್ಯವಿಲ್ಲ. ಯಾಕಂದ್ರೆ ಈ ಭಾಗದ ಭೂಮಿಗೆ ಚಿನ್ನವನ್ನೂ ಮೀರಿಸುವ ಬೆಲೆ ಹೆಚ್ಚಾಗಿದೆ. ಅಲ್ಲದೆ, ದಿನದಿಂದ ದಿನಕ್ಕೆ ಭೂಮಿ ಬೆಲೆ ಹೆಚ್ಚಳ ಆಗುತ್ತಲಿವೆ.












Click it and Unblock the Notifications