ಮನ್-ಕೀ-ಬಾತ್‌ನಲ್ಲಿ ಸೂಲಗಿತ್ತಿ ನರಸಮ್ಮನಿಗೆ ಮೋದಿ ನಮನ
ನವದೆಹಲಿ, ಡಿಸೆಂಬರ್ 30: ಇತ್ತೀಚಿಗಷ್ಟೆ ನಿಧನರಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ಅವರಿಗೆ ಪ್ರಧಾನಿ ಮೋದಿ ಅವರು ತಮ್ಮ ಮನ್-ಕೀ-ಬಾತ್‌ನಲ್ಲಿ ಮನಮ ಸಲ್ಲಿಸಿದ್ದಾರೆ.
ಸಾವಿರಾರು ಹೆರಿಗೆಗಳನ್ನು ಮಾಡಿಸಿ ದಾಖಲೆ ನಿರ್ಮಿನಿಸಿದ್ದ ಸೂಲಗಿತ್ತಿ ನರಸಮ್ಮ ಅವರು ಇತ್ತೀಚೆಷ್ಟೆ ಕಾಲವಾಗಿದ್ದು. ನಿನ್ನೆ ನಡೆದ ಮನ್-ಕೀ-ಬಾತ್‌ನಲ್ಲಿ ಮೋದಿ ಅವರು ಸೂಲಗಿತ್ತಿ ನರಸಮ್ಮ ಅವರನ್ನು ನೆನಪಿಸಿಕೊಂಡು ಅವರಿಗೆ ನಮನ ಸಲ್ಲಿಸಿದರು.

'ಸೂಲಗಿತ್ತಿ ನರಸಮ್ಮ ಅವರು ಸಾವಿರಾರು ತಾಯಂದಿರಿಗೆ ತಾಯಿಯಾಗಿದ್ದರು, ಸಾವಿರಾರು ಗ್ರಾಮೀಣ ತಾಯಂದಿರ ಹೆರಿಗೆ ಸಮಯದಲ್ಲಿ ಮಹಾತಾಯಿಯಾಗಿ ಸೇವೆ ಮಾಡಿದ್ದಾರೆ ಎಂದು ಮೋದಿ ಅವರು ತಮ್ಮ ಮನ್-ಕೀ-ಬಾತ್‌ನಲ್ಲಿ ನೆನಪಿಸಿಕೊಂಡಿದ್ದಾರೆ.
ಕರ್ನಾಟಕದಲ್ಲಿ ಅವರಿಗೆ ವಿಶೇಷ ಸ್ಥಾನ-ಮಾನಗಳಿತ್ತು. ತಮ್ಮ ಜೀವನವನ್ನು ಇತರರಿಗೆ ಮಾದರಿ ಆಗುವಂತೆ ಅವರು ಬದುಕಿದ್ದರು. ಸಮಾಜಕ್ಕೆ ದೊಡ್ಡ ಮಟ್ಟದ ಸೇವೆಯನ್ನು ಅವರು ಅರ್ಪಿಸಿದ್ದಾರೆ ಎಂದು ಮೋದಿ ಹೇಳಿದ್ದರು.
ಸೂಲಗಿತ್ತಿ ನರಸಮ್ಮ ಅವರು ಡಿಸೆಂಬರ್ 25 ರಂದು ನಿಧನರಾದರು. ಡಿಸೆಂಬರ್ 26 ರಂದು ಅವರ ಪಾರ್ಥಿವ ಶರೀರವನ್ನು ತುಮಕೂರಿನ ಅವರ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.












Click it and Unblock the Notifications