ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಮೋಡಿ, ಅಮಿತ್ ಶಾ ಮ್ಯಾಜಿಕ್ ಇನ್ನು ಕನಸು : ಸಿದ್ದರಾಮಯ್ಯ

|
Google Oneindia Kannada News

Recommended Video

ಮೋದಿ ಮೋಡಿ, ಅಮಿತ್ ಶಾ ಮ್ಯಾಜಿಕ್ ಇನ್ನು ಕನಸು..!

ಬೆಂಗಳೂರು, ಡಿಸೆಂಬರ್ 25 : 'ದೇಶದಲ್ಲಿ ಪ್ರಧಾನಿ ಅವರ ವರ್ಚಸ್ಸು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇನ್ನು ಮುಂದೆ ಮೋದಿಯ ಮೋಡಿ, ಅಮಿತ್ ಶಾ ಮ್ಯಾಜಿಕ್ ಎಲ್ಲವೂ ಬರಿ ಕನಸಷ್ಟೆ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು @siddaramaiah ಟ್ವಿಟರ್ ಅಕೌಂಟ್‌ನಿಂದ ಸರಣಿ ಟ್ವೀಟ್ ಗಳನ್ನು ಮಾಡಿದ್ದಾರೆ. 5 ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಿಜೆಪಿಯನ್ನು ವ್ಯಂಗ್ಯವಾಡಿದ್ದಾರೆ.

ಮೋದಿ ಅಹಿಂದ ವರ್ಗಕ್ಕೆ ಏನು ಮಾಡಿದ್ದಾರೆ? : ಸಿದ್ದರಾಮಯ್ಯ ಟ್ವೀಟ್ಮೋದಿ ಅಹಿಂದ ವರ್ಗಕ್ಕೆ ಏನು ಮಾಡಿದ್ದಾರೆ? : ಸಿದ್ದರಾಮಯ್ಯ ಟ್ವೀಟ್

ಬರೀ ಭಾಷಣಗಳು ಜನರ ಹೊಟ್ಟೆ ತುಂಬಿಸಲಾರದು ಎಂಬುದನ್ನು ಬಿಜೆಪಿ ಇನ್ನೂ ಅರಿತಿಲ್ಲ. ಹೀಗಾಗಿಯೇ ಕೋಮುವಾದ ಬಿಟ್ಟು ಅವರು ಅಭಿವೃದ್ಧಿಯ ಕಡೆಗೆ ಅವರು ಮಾತನಾಡುವುದಿಲ್ಲ ಎಂದು ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಸಿದ್ದರಾಮಯ್ಯ ಟ್ವಿಟ್ಟರ್ ವಾರ್ : 'ಬಿಎಸ್‌ವೈ ಡಮ್ಮಿ' ಎಂದು ಟ್ವೀಟ್!ಸಿದ್ದರಾಮಯ್ಯ ಟ್ವಿಟ್ಟರ್ ವಾರ್ : 'ಬಿಎಸ್‌ವೈ ಡಮ್ಮಿ' ಎಂದು ಟ್ವೀಟ್!

ಬಿಜೆಪಿ ರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷಗಳಾದರೂ ಬಡ ರೈತರ ಕಡೆಗೆ ಕಣ್ಣೆತ್ತಿ ನೋಡುತ್ತಿಲ್ಲ. ಬಡವರ ಕಷ್ಟಕ್ಕೆ ಮಿಡಿಯದ 56 ಇಂಚಿನ ಎದೆಯಿದ್ದು ಏನು ಉಪಯೋಗ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ- ಮುರಳೀಧರನ್ ಟ್ವೀಟ್ ವಾರ್ ಮುಂದುವರಿಕೆಸಿದ್ದರಾಮಯ್ಯ- ಮುರಳೀಧರನ್ ಟ್ವೀಟ್ ವಾರ್ ಮುಂದುವರಿಕೆ

ಸಿದ್ದರಾಮಯ್ಯ ಟ್ವೀಟ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿಗೆ ರಾಷ್ಟ್ರದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಡಬೇಕಾದ ದುಸ್ಥಿತಿ ಬಂದಿದೆ ಎಂದು ಆರೋಪಿಸಿದ್ದಾರೆ.

ಬರೀ ಭಾಷಣ

ಬರೀ ಭಾಷಣಗಳು ಜನರ ಹೊಟ್ಟೆ ತುಂಬಿಸಲಾರದು ಎಂಬುದನ್ನು ಬಿಜೆಪಿ ಇನ್ನೂ ಅರಿತಿಲ್ಲ ಎಂದು ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೋದಿ ಪ್ರಶ್ನಿಸಿದ ಸಿದ್ದರಾಮಯ್ಯ

56 ಇಂಚಿನ ಎದೆಯಿದ್ದು ಏನು ಉಪಯೋಗ?. ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷಗಳಾದರೂ ಬಡ ರೈತರ ಕಡೆಗೆ ಕಣ್ಣೆತ್ತಿ ನೋಡುತ್ತಿಲ್ಲ. 56 ಇಂಚಿನ ಎದೆಯಿದ್ದು ಏನು ಉಪಯೋಗ? ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ರೈತರ ಸಾಲ ಮನ್ನಾ

ಕಾಂಗ್ರೆಸ್ ಜಯಗಳಿಸಿರುವ ರಾಜ್ಯಗಳಲ್ಲಿ ರೈತರ ಸಾಲಮನ್ನಾ ಘೋಷಣೆ ಮಾಡಲಾಗಿದೆ. ಬಿಜೆಪಿ ಮಾತ್ರ ರೈತರ ಬಗ್ಗೆ ಕಾಳಜಿ ಹೊಂದಿಲ್ಲ ಎಂದು ಸಿದ್ದರಾಮಯ್ಯ ಟ್ವೀಟ್‌ನಲ್ಲಿ ಆರೋಪ ಮಾಡಿದ್ದಾರೆ.

English summary
In a series of tweet Karnataka Former Chief Minister Siddaramaiah attacked the Prime Minister Narendra Modi and BJP president Amit Shah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X