ಗ್ಯಾಸ್ ಬೆಲೆ 200 ಸಬ್ಸಿಡಿ: ಕರ್ನಾಟಕ ಮಾದರಿಯನ್ನು ಮೋದಿ ಪಾಲನೆ ಮಾಡುತ್ತಿದ್ದಾರೆ: ಡಿ ಕೆ ಶಿವಕುಮಾರ್
ಬೆಂಗಳೂರು, ಆಗಸ್ಟ್ 30: ಎಲ್ ಪಿ ಜಿ ಸಿಲೆಂಡರ್ ಬೆಲೆ 200 ಸಬ್ಸಿಡಿ ಕೊಡುತ್ತಿರುವುದು ಬಹಳ ಸಂತೋಷ ,ನಮ್ಮದು ಅಭಿಯಂತ ಇಲ್ಲ. ಬಿಜೆಪಿಯವರು ಹೆಚ್ಚಿತ್ತುಕೊಳ್ಳತ್ತಾ ಇದ್ದಾರೆ ಅಲ್ವಾ?
ಕರ್ನಾಟಕದ ಮಾದರಿಯನ್ನು ಪ್ರಧಾನಿ ಮೋದಿ ಪಾಲನೆ ಮಾಡುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಪ್ರಧಾನಿ ಮೋದಿ ಅವರು ಉಚಿತ ಯೋಜನೆ ಇಂದ ದಿವಾಳಿ ಆಗುತ್ತೆ ಅಂತ ಹೇಳಿದ್ದರು. ಮಹಾರಾಷ್ಟ್ರದಲ್ಲಿ ಯಾಕೆ 1,500 ಕೊಡ್ತಿದ್ದಾರೆ. ಈಗ ಯಾಕೆ ಎಲ್ ಪಿ ಜಿ ಸಿಲೆಂಡರ್ ಬೆಲೆ 200 ಸಬ್ಸಿಡಿ ನೀಡಿದ್ದಾರೆ. ಅವರ ಸರ್ವೆ ರಿಪೋರ್ಟ್ ನಲ್ಲಿ ಜನ ಬೈತಾ ಇದ್ದಾರೆ. ಕಾಂಗ್ರೆಸ್ ನವರು ಕೊಡ್ತಾ ಇದ್ದಾರೆ, ನೀವು ಯಾಕೆ ಕೊಡಲ್ಲ ಎಂದು ಜನರು ಕೇಳುತ್ತಿದ್ದಾರೆ. ಅದಕ್ಕೆ ಗ್ಯಾಸ್ ಬೆಲೆ 200 ಸಬ್ಸಿಡಿ ಕೊಡ್ತಾ ಇದ್ದಾರೆ ಅಲ್ವಾ ಎಂದು ಹೇಳಿದರು.

ನಮ್ಮ ಈ ದೇಶದ ಹೆಣ್ಣು ಮಕ್ಕಳು ಕರ್ನಾಟಕದ ಮಾದರಿ ನೋಡ್ತಿದ್ದಾರೆ. ನಮ್ಮ ಒತ್ತಡಕ್ಕೆ ಮಣಿದು ಪ್ರಧಾನಿ ಸಿಲಿಂಡರ್ ಬೆಲೆ 200 ರೂ ಇಳಿಸಿದ್ದಾರೆ. 500ರೂಗೆ ಗ್ಯಾಸ್ ಸಿಲಿಂಡರ್ ಕೊಡಬೇಕು ಅಂತ ಹೇಳಿದ್ದೆವು. ಈಗ ನಾವು 2 ಸಾವಿರ ಕೊಡ್ತಿದ್ದೀವಿ. ಹೆಣ್ಣು ಮಕ್ಕಳ ಅಕೌಂಟಿಗೆ ಹಣ ಹೋಗಲಿದೆ. ನೂರು ದಿನದ ಸಂಭ್ರಮ ಆಚರಿಸ್ತಿದ್ದೇವೆ. ನಾಡಿನ ಎಲ್ಲಾ ಹೆಣ್ಣು ಮಕ್ಕಳ ಮನೆಗೆ ಹಣ ತಲುಪುತ್ತಿದೆ.
ಬಿಜೆಪಿ ಇಂದ ಚಾರ್ಜ್ ಶೀಟ್ ಬಿಡುಗಡೆ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರ ಆರೋಪ ಯಾವುದು ಸಾಬೀತು ಮಾಡಲಿ. ಇವರದ್ದು ಬಿಚ್ಚೋ ಕಾಲ ಬರುತ್ತೆ ಬಿಚ್ತೀನಿ. ಇವರಿಗೆ ನಾಯಕನೇ ಆಯ್ಕೆ ಮಾಡಲಾಗಿಲ್ಲ. ಕಂಟ್ರಾಕ್ಟರ್ಸ್ ಬಗ್ಗೆ ಹೇಳಿ ನನ್ನ ವಿರುದ್ಧ ಆರೋಪ ಮಾಡಿದ್ರು, ನಾನು ಹೇಳಿದೆ ಸವಾಲು ಹಾಕಿದ್ದೇನೆ. ನನ್ನ ಮೇಲಿನ ಆರೋಪ ಸಾಬೀತು ಮಾಡಿ ರಾಜಕೀಯ ನಿವೃತ್ತಿ ಪಡೆಯೋದಾಗಿ ಹೇಳಿದ್ದೆ ಇದಕ್ಕಿಂತ ಇನ್ನೇನು ಬೇಕು ಎಂದು ಹೇಳಿದರು.
ನೂರು ದಿನದಲ್ಲಿ ನಾಲ್ಕು ಗ್ಯಾರಂಟಿ ಇಂಪ್ಲಿಮೆಂಟ್ ಮಾಡಿದ್ದೇವೆ.ಮೊದಲ ಕ್ಯಾಬಿನೆಟ್ ನಲ್ಲೇ ಎಲ್ಲಾ ಗ್ಯಾರಂಟಿ ಇತ್ಯರ್ಥ ಮಾಡಿದ್ದೇವೆ. ಇದುವರೆಗೂ ಯಾರಾದ್ರೂ ಮಾಡಿದ್ದಾರಾ.? ಎಂದು ಪ್ರಶ್ನಿಸಿದ ಅವರು, ಅವರದ್ದು ಭರವಸೆ, ನಮ್ಮದು ಗ್ಯಾರಂಟಿ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ 10 - 15 ಪರ್ಸೆಂಟ್ ಕಮಿಷನ್ ಕೇಳಿದರು ಎಂದು ಗುತ್ತಿಗೆದಾರರಿಗೆ ಹೆದರಿಸಿ ಅವರ ಬಾಯಲ್ಲಿ ರಾಜ್ಯಪಾಲರ ಬಳಿ ಸುಳ್ಳು ಹೇಳಿಸಿದರು. ಆನಂತರ ಅದೇ ಗುತ್ತಿಗೆದಾರರು ಪೊಲೀಸರ ಬಳಿ, ರಾಜ್ಯಪಾಲರ ಬಳಿ ನಾವು ಆರೋಪ ಮಾಡಿಲ್ಲ ಎಂದು ಸತ್ಯ ಹೇಳಿದರು" ಎಂದು ವಾಗ್ದಾಳಿ ನಡೆಸಿದರು.
ಕಾವೇರಿ ನೀರು ವಿಚಾರವಾಗಿ ಮಾತನಾಡಿ, ನಾಳೆ ದೆಹಲಿಗೆ ಹೋಗುತ್ತಿದ್ದೇನೆ, ಅಲ್ಲಿ ನಮ್ಮ ವಕೀಲರನ್ನು ಭೇಟಿಯಾಗಿ ಕಾವೇರಿ ನೀರಿನ ವಿಚಾರವಾಗಿ ಚರ್ಚೆ ನಡೆಸುತ್ತೇನೆ. ಸೆ.1 ಶುಕ್ರವಾರ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ. ತಮಿಳುನಾಡಿನವರು 24 ಸಾವಿರ ಕ್ಯೂಸೆಕ್ಸ್ ಬೇಡಿಕೆ ಇಟ್ಟಿದ್ದರು. ನಮ್ಮ ರಾಜ್ಯದ ಅಧಿಕಾರಿಗಳು ಸಮರ್ಥವಾಗಿ ವಾದ ಮಂಡಿಸಿ ನಾವು 3 ಸಾವಿರ ಕ್ಯೂಸೆಕ್ಸ್ ಬಿಡುತ್ತೇವೆ ಎಂದು ಹೇಳಿದ್ದೆವು. ಕೊನೆಗೆ ವಾದ- ವಿವಾದಗಳು ನಡೆದು 5 ಸಾವಿರ ಕ್ಯೂಸೆಕ್ಸ್‌ಗೆ ಇಳಿಸಿದ್ದಾರೆ. ಮುಂದಿನ ಸಭೆಯಲ್ಲಿ ಹೇಗೆ ನಮ್ಮ ವಾದ ಮಂಡಿಸಬೇಕು ಎಂದು ಚರ್ಚೆ ನಡೆಸಲಿದ್ದೇನೆ" ಎಂದು ತಿಳಿಸಿದರು.
ಮೇಲ್ಮನವಿ ಸಲ್ಲಿಸಬಹುದಿತ್ತು ಕರ್ನಾಟಕ ಸರ್ಕಾರ ಈ ಕೆಲಸ ಮಾಡಿಲ್ಲ ಎಂದು ಬೊಮ್ಮಾಯಿ ಅವರು ಆರೋಪ ಬಗ್ಗೆ ಕೇಳಿದಾಗ, "ಅವರು ಏನೇ ಸಲಹೆ ಕೊಟ್ಟರು ನಾವು ತೆಗೆದುಕೊಳ್ಳುತ್ತೇವೆ, ಈ ಡ್ಯಾಂಗಳ ಕೀಲಿ ಕೈ ನಮ್ಮ ಬಳಿ ಇದೆ, ಅದನ್ನು ಬೇರೆಯವರ ಕೈಗೆ ಬಿಟ್ಟುಕೊಡುವುದಿಲ್ಲ, ನಮ್ಮ ರೈತರ ಹಿತ ಮುಖ್ಯ ನಮಗೆ ಅದಕ್ಕೆ ಈಗಾಗಲೇ 2 ಬಾರಿ ನೀರು ಬಿಟ್ಟಿದ್ದೇವೆ.
ಬೊಮ್ಮಾಯಿ ಅವರು ರಾಜಕಾರಣ ಮಾಡಬೇಕಲ್ಲ ಅದಕ್ಕೆ ಮಾತನಾಡುತ್ತಾರೆ. ಬಿಜೆಪಿಯ ಮಾಜಿ ನೀರಾವರಿ ಸಚಿವರೊಬ್ಬರು ಯಾವುದೇ ಕಾರಣಕ್ಕು ನೀರು ಬಿಡಬಾರದು ಎಂದು ಹೇಳಿದ್ದಾರೆ, ಅವರು ಅಧಿಕಾರದಲ್ಲಿ ಇದ್ದಾಗ ಏನು ಮಾಡಿದರು. ನಾಗೇಗೌಡರು ನೀರಾವರಿ ಸಚಿವರಾಗಿದ್ದಾಗ ಏನಾಯಿತು, ದೇವೆಗೌಡರು ಪ್ರಧಾನಿಗಳಾಗಿದ್ದಾಗ ಏನಾಯಿತು, ಇದೆಲ್ಲಾ ಕಾಲ, ಕಾಲದಿಂದ ನಡೆದುಕೊಂಡು ಬಂದಿರುವುದೇ ಎಂದರು.












Click it and Unblock the Notifications