• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೂಲಗಿತ್ತಿ ನರಸಮ್ಮ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ

|
   ಸೂಲಗಿತ್ತಿ ನರಸಮ್ಮ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ | Oneindia Kannada

   ನವದೆಹಲಿ, ಡಿಸೆಂಬರ್ 26: ಹದಿನೈದು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ್ದ ಸೂಲಗಿತ್ತಿ, ಪದ್ಮಶ್ರೀ ಪುರಸ್ಕೃತೆ ನರಸಮ್ಮ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ.

   ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನರಸಮ್ಮ (98) ಮಂಗಳವಾರ ನಿಧನಹೊಂದಿದ್ದರು. ಅವರು ಸುಮಾರು 25 ದಿನಗಳಿಂದ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

   ಪದ್ಮಶ್ರೀ ಪುರಸ್ಕೃತೆ ಸೂಲಗಿತ್ತಿ ನರಸಮ್ಮ ನಿಧನ

   ಪದ್ಮಶ್ರೀ ಸೂಲಗಿತ್ತಿ ನರಸಮ್ಮ ಅವರ ನಿಧನದಿಂದ ದುಃಖವಾಗಿದೆ. ಕರ್ನಾಟಕದಲ್ಲಿ ಅವರ ಸೂಲಗಿತ್ತಿ ಸೇವೆ ನೀಡುವ ಪ್ರಯತ್ನ ಸದಾ ಸ್ಮರಣೀಯ. ಸಮಾಜದ ಬಡ ವರ್ಗಕ್ಕೆ ಅವರು ತೋರಿದ ದಯಾಳುತನ ಅವರನ್ನು ಎಲ್ಲರಿಗೂ ಪ್ರೀತಿಪಾತ್ರರನ್ನಾಗಿಸಿದೆ. ಅವರ ಕುಟುಂಬಕ್ಕೆ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ನನ್ನ ಸಾಂತ್ವನ ಹೇಳುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

   ಮೂಲತಃ ತುಮಕೂರಿನ ಪಾವಗಡದವರಾದ ಸೂಲಗಿತ್ತಿ ನರಸಮ್ಮ, ವೈದ್ಯರ ಸೌಲಭ್ಯವಿಲ್ಲದ ಕುಗ್ರಾಮಗಳಲ್ಲಿ 15 ಸಾವಿರಕ್ಕೂ ಅಧಿಕ ಹೆರಿಗೆಗಳನ್ನು ಮಾಡಿಸಿದ್ದಾರೆ. ಅವರ ಸೇವೆಯನ್ನು ಗುರುತಿಸಿ 2018ರಲ್ಲಿ ಪದ್ಮಶ್ರೀ ಪುರಸ್ಕಾರವನ್ನು ಕೇಂದ್ರ ಸರ್ಕಾರ ನೀಡಿತ್ತು.

   ಸಾವಿರದೈನೂರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಮಹಾತಾಯಿಗೆ 'ಪದ್ಮಶ್ರೀ'

   ನರಸಮ್ಮ ಅವರ ಅಂತ್ಯಕ್ರಿಯೆ ಇಂದು (ಬುಧವಾರ) ನಡೆಯಲಿದೆ.

   English summary
   Prime Minister Narendra Modi condolences to the demise of Padma shri Sulagitti Narasamma. Narasamma was died on Tuesday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X