ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಕ್ಲರ್ಕ್‌ ಹೇಳಿಕೆ : ಯಾರು, ಏನು ಹೇಳಿದರು?

|
Google Oneindia Kannada News

ಬೆಂಗಳೂರು, ಜನವರಿ 13 : 'ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ 'ಕ್ಲರ್ಕ್' ಆಗಿ ಮಾಡಿದೆ' ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕರ್ನಾಟಕದ ಹಲವು ನಾಯಕರು ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ.

ಶನಿವಾರ ಬಿಜೆಪಿ ರಾಷ್ಟ್ರೀಯ ಪರಿಷದ್ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವಾಗ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕ್ಲರ್ಕ್ ಎಂದು ಕರೆದು ವ್ಯಂಗ್ಯವಾಡಿದ್ದರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರಧಾನಿ ಮೋದಿ, ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು: ಖರ್ಗೆಪ್ರಧಾನಿ ಮೋದಿ, ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು: ಖರ್ಗೆ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ಮೋದಿ ಅವರ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಅವರು ಟ್ವೀಟ್ ಮಾಡುವ ಮೂಲಕ ಪ್ರಧಾನಿಗೆ ತಿರುಗೇಟು ನೀಡಿದ್ದಾರೆ.

ತಮ್ಮನ್ನು ಕಾಂಗ್ರೆಸ್ ಕ್ಲರ್ಕ್ ಎಂದ ಮೋದಿಗೆ ಕುಮಾರಸ್ವಾಮಿ ಹೇಳಿದ್ದೇನು?ತಮ್ಮನ್ನು ಕಾಂಗ್ರೆಸ್ ಕ್ಲರ್ಕ್ ಎಂದ ಮೋದಿಗೆ ಕುಮಾರಸ್ವಾಮಿ ಹೇಳಿದ್ದೇನು?

'ಮಾನ್ಯ ನರೇಂದ್ರ ಮೋದಿ ಅವರೆ, ಪ್ರಜಾಪ್ರಭುತ್ವದ ಆಶಯದಂತೆ ರಚನೆಯಾದ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳನ್ನು ಕ್ಲರ್ಕ್ ಎಂದಿದ್ದೀರಿ. ವೈಫಲ್ಯದ ನಾಯಕ ಸುಳ್ಳುಗಳ ಸರದಾರ ನೀವು ಪ್ರಧಾನಿ ಸ್ಥಾನದ ಘನತೆಗೆ ಕುಂದು ತಂದಿದ್ದೀರಿ. ಸದನಕ್ಕೆ ಹಾಜರಾಗಿ ನಿಮ್ಮ ಮೇಲಿನ ಭ್ರಷ್ಟಾಚಾರ ಆರೋಪಕ್ಕೆ ಉತ್ತರ ನೀಡಲಾಗದ ನಿಮ್ಮ ಈ ಒಣ ಪೌರುಷ ಹಾಸ್ಯಾಸ್ಪದ' ಎಂದು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆ ಮೂಲಕ ತಿರುಗೇಟು ಕೊಟ್ಟಿದೆ...

ಸಿಎಂ ಕುಮಾರಸ್ವಾಮಿಯನ್ನು ಕ್ಲರ್ಕ್‌ ಮಾಡಿಕೊಂಡಿದೆ ಕಾಂಗ್ರೆಸ್: ಮೋದಿಸಿಎಂ ಕುಮಾರಸ್ವಾಮಿಯನ್ನು ಕ್ಲರ್ಕ್‌ ಮಾಡಿಕೊಂಡಿದೆ ಕಾಂಗ್ರೆಸ್: ಮೋದಿ

ಇಂತಹ ಹೇಳಿಕೆ ಸರ್ಕಾರಕ್ಕೆ ಧಕ್ಕೆ ತರುವುದಿಲ್ಲ

'ನಾನು ಎಂದೂ ನೀಡಿದ ಹೇಳಿಕೆ ಬಗ್ಗೆ ಪ್ರಧಾನಿ ಪ್ರತಿಕ್ರಿಯೆ ನೀಡಿದ್ದಾರೆ. ಇಂತಹ ಹೇಳಿಕೆ ಮೈತ್ರಿ ಸರ್ಕಾರದ ಅಭಿವೃದ್ಧಿಯ ಗುರಿಗೆ ಧಕ್ಕೆ ತರುವುದಿಲ್ಲ' ಎಂದು ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಎಚ್.ಡಿ.ದೇವೇಗೌಡ ಪ್ರತಿಕ್ರಿಯೆ

ಎಚ್.ಡಿ.ದೇವೇಗೌಡ ಪ್ರತಿಕ್ರಿಯೆ

'ಪ್ರಧಾನಿ ನರೇಂದ್ರ ಮೋದಿ ಅವರು ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಾ ಹೋಗುತ್ತಾರೆ. ಹಿಂದೆ ಬಿಜೆಪಿ ಜೊತೆ ಮೈತ್ರಿ ಸರ್ಕಾರ ಮಾಡಿದಾಗ ನಮಗೆ ಕಹಿ ಅನುಭವವೇ ಆಗಿತ್ತು' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಈ ಒಣ ಪೌರುಷ ಹಾಸ್ಯಾಸ್ಪದ

ಕರ್ನಾಟಕ ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟರ್ ಖಾತೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತಿರುಗೇಟು ನೀಡಿದೆ.

ಸಂಘ ಪರಿವಾರದ ಕ್ಲರ್ಕ್

ಸಂಘ ಪರಿವಾರದ 'ಕ್ಲರ್ಕ್' ಆಗಿರುವ #PMNarendraModi ಅವರು ತಮ್ಮ ಅನುಭವದ ಮಾತಿನಲ್ಲಿಯೇ #HDKumaraswamy ಅವರನ್ನು ಟೀಕಿಸಿದ್ದಾರೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

ಮಲ್ಲಿಕಾರ್ಜುನ ಖರ್ಗೆ ಹೇಳಿಕೆ

ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 'ಪ್ರಧಾನಿಯವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಈ ರೀತಿ ಲಘುವಾಗಿ ಹೇಳಿಕೆ ನೀಡುವುದು ಪ್ರಧಾನಿ ಸ್ಥಾನಕ್ಕೆ ಗೌರವ ತರುವಂತದ್ದಲ್ಲ' ಎಂದು ಹೇಳಿದ್ದಾರೆ.

ಸಿಎಂ, ಪಿಎಂ ಹುದ್ದೆಗಳಿಗೆ ಅದರದ್ದೇ ಗೌರವವಿದೆ

ಸಿಎಂ, ಪಿಎಂ ಹುದ್ದೆಗಳಿಗೆ ಅದರದ್ದೇ ಗೌರವವಿದೆ

'ಕುಮಾರಸ್ವಾಮಿ ಸಂವಿಧಾನಾತ್ಮಕವಾಗಿ ಪ್ರಮಾಣ ವಚನ ಸ್ವೀಕರಿಸಿದ ಈ ರಾಜ್ಯದ ಮುಖ್ಯಮಂತ್ರಿ, ಇದರ ಅರಿವು ಪ್ರಧಾನಿ ಮೋದಿ ಹಾಗೂ ಅಮಿತ್ ಶಾಗೆ ಇರಬೇಕು. ಲಘುವಾಗಿ ಮಾತನಾಡುವುದು ಅವರ ಸಂಸ್ಕೃತಿ ತೋರಿಸುತ್ತದೆ. ಒಕ್ಕೂಟ ವ್ಯವಸ್ಥೆಯಲ್ಲಿ ಸಿಎಂ, ಪಿಎಂ ಹುದ್ದೆಗಳಿಗೆ ಅದರದ್ದೇ ಗೌರವವಿದೆ' ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದ್ದಾರೆ.

ಹಗುರವಾಗಿ ಮಾತನಾಡಬಾರದು

ಹಗುರವಾಗಿ ಮಾತನಾಡಬಾರದು

'ಕರ್ನಾಟಕದ ಬಗ್ಗೆ ಪ್ರಧಾನಿ ಮೋದಿ ಅವರು ಪದೇ ಪದೇ ಏಕೆ ಮಾತನಾಡುತ್ತಾರೆ. ಪ್ರಧಾನಿಯಾಗಿ ಒಬ್ಬ ಮುಖ್ಯಮಂತ್ರಿ ಕುರಿತು ಹಗುರವಾಗಿ ಮಾತನಾಡಬಾರದು. ಸಿಎಂ ಆಗಿ ಕುಮಾರಸ್ವಾಮಿ ಅವರ ಕೆಲಸ ಮಾಡುತ್ತಿದ್ದಾರೆ. ಪ್ರಧಾನಿ ಹೇಳಿಕೆ ಖಂಡನೀಯ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

English summary
In a BJP National Convention in New Delhi Prime Minister Narendra Modi said, Karnataka Chief Minister has been treated like a clerk. Who said what on Narendra Modi clerk comment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X