ಕರ್ನಾಟಕದಲ್ಲಿ ಕಾಂಗ್ರೆಸ್ ಕೌಂಟ್ ಟೌನ್ ಶುರು : ಮೋದಿ
ಬೆಂಗಳೂರು, ಫೆಬ್ರವರಿ 04 : ಭಾರತದ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದರು. ಅರಮನೆ ಮೈದಾನದಲ್ಲಿ ನವ ಕರ್ನಾಟಕ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ನಡೆಯುತ್ತಿದೆ. ಸಮಾರಂಭದಲ್ಲಿ ಮೋದಿ ಪಾಲ್ಗೊಂಡಿದ್ದಾರೆ.
ಮೋದಿ ಭಾಷಣದ ಮುಖ್ಯಾಂಶಗಳು
* 'ಕರ್ನಾಟಕದ ನನ್ನ ಪ್ರೀತಿಯ ಬಂಧು ಭಗಿನೀಯರೇ ನಿಮಗೆಲ್ಲಾ ನನ್ನ ನಮಸ್ಕಾರಗಳು' ಎಂದು ಮೋದಿ ಕನ್ನಡದಲ್ಲಿ ಭಾಷಣ ಆರಂಭಿಸಿದರು.
* ಕರ್ನಾಟಕ ಬಸವೇಶ್ವರ, ಮಾದರ ಚೆನ್ನಯ್ಯ, ಕೇಂಪೇಗೌಡ, ಕಿತ್ತೂರು ಚೆನ್ನಮ್ಮ, ಶಶಿನಾಳ ಷರೀಫ ಮುಂತಾದ ಮಹಾನ್ ಪುರುಷರ ನಾಡು. ಕರ್ನಾಟಕದಲ್ಲಿ ಬದಲಾವಣೆ ತನ್ನಿ. ಬಿಜೆಪಿ ಗೆಲ್ಲಿಸಿ ಎಂದು ಮನವಿ ಮಾಡಿದರು.

* ಈ ಭೂಮಿ ಭಾರತದ ಗೌರವ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ತೊಲಗುವ ಕೌಂಟ್ ಡೌನ್ ಶುರುವಾಗಿದೆ. ಕಾಂಗ್ರೆಸ್ ಎಕ್ಸಿಟ್ ಗೇಟ್‌ನಲ್ಲಿ ನಿಂತಿದೆ. ಕರ್ನಾಟಕವನ್ನ ಕಾಂಗ್ರೆಸ್ ಮುಕ್ತವಾಗಿಸುತ್ತೇವೆ.
* ಬೆಂಗಳೂರಿನಿಂದ ಕರ್ನಾಟಕದ ಗೌರವ ಹೆಚ್ಚಾಗಿದೆ. ಈ ರಾಜ್ಯವನ್ನು ಕಾಂಗ್ರೆಸ್ ಸಂಸ್ಕೃತಿಯಿಂದ ಮುಕ್ತವಾಗಿಸುತ್ತೇವೆ. ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ.
* ಕೇಂದ್ರದ ಹಲವು ಯೋಜನೆಗಳು ನಿಮ್ಮನ್ನು ತಲುಪುತ್ತಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದೇ ಆಗಿದ್ದರೆ ಯೋಜನೆ ನಿಮ್ಮನ್ನು ತಲುಪುತ್ತಿತ್ತು.
* ಪ್ರಧಾನ ಮಂತ್ರಿ ಜನಧನ್ ಯೋಜನೆಯಡಿ ರಾಜ್ಯದ ಬಡವರು ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿದ್ದಾರೆ. ಜನಧನ್ ಯೋಜನೆಯಿಂದ ರಾಜ್ಯದ 1.70 ಲಕ್ಷ ಜನರಿಗೆ ಉಪಯೋಗವಾಗಿದೆ.
ಚಿತ್ರಗಳು : ಬೆಂಗಳೂರಿನಲ್ಲಿ ಮೋಡಿ ಮಾಡಿದ ಮೋದಿ
* ಸ್ವಚ್ಛ ಭಾರತ ಯೋಜನೆಯಡಿ ಲಕ್ಷಾಂತರ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಬಡವರ ಬದುಕನ್ನು ಹಸನಾಗಿಸುವುದು ಬಿಜೆಪಿಯ ಕಾರ್ಯ.
* ಒಂದು ದಿನ ಬೆಂಗಳೂರಿನಲ್ಲಿ ವಿದ್ಯುತ್ ಸ್ಥಗಿತವಾದರೆ ಏನಾಗುತ್ತದೆ? ಎಂದು ಆಲೋಚನೆ ಮಾಡಿದ್ದೀರಾ?. ಉಜ್ವಲಾ ಯೋಜನೆಯಡಿ ರಾಜ್ಯದ 7 ಲಕ್ಷ ಜನರಿಗೆ ಉಪಯೋಗವಾಗಿದೆ.
* ರಾಜ್ಯ ಸರ್ಕಾರ ಕಳೆದ ನಾಲ್ಕೂವರೆ ವರ್ಷಗಳಲ್ಲಿ ಕೇಂದ್ರದಿಂದ ಬಂದ ಅನುದಾನ ರಾಜ್ಯದ ಜನರಿಗೆ ತಲುಪಿಲ್ಲ. ಕಾಂಗ್ರೆಸ್ ಸರ್ಕಾರವಿದ್ದಾಗ ರಾಜ್ಯಕ್ಕೆ 73,000 ಕೋಟಿ ಸಿಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಬಂದಾಗ ರಾಜ್ಯಕ್ಕೆ 2 ಲಕ್ಷ ಕೋಟಿಗೂ ಅಧಿಕ ಅನುದಾನ ಸಿಗುತ್ತಿದೆ.
*ಕರ್ನಾಟಕವನ್ನು ಅಭಿವೃದ್ಧಿಯ ಹೊಸ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುವ, ವಿವಿಧ ಅಭಿವೃದ್ಧಿ ಯೋಜನೆಗಳನ್ನು ತೆಗೆದುಕೊಂಡು ಹೋಗುವ ಅನಿವಾರ್ಯತೆ ಇದೆ.
* ಬೆಂಗಳೂರಿನ ಅಭಿವೃದ್ಧಿಗೆ ಸಬ್ ಅರ್ಬನ್ ರೈಲ್ವೆ ಯೋಜನೆ ನೀಡಲಾಗಿದೆ. ಇದರ ಮೊತ್ತ 17 ಸಾವಿರ ಕೋಟಿ, ನಮ್ಮ ರೈಲ್ವೆ ಮಂತ್ರಿ ಇಲ್ಲೇ ಇದ್ದಾರೆ. ಅವರನ್ನು ಕೇಳಿ
* ರಾಜ್ಯಕ್ಕೆ ರೈಲ್ವೆ, ರಸ್ತೆಯ ವಿವಿಧ ಯೋಜನೆಗಳನ್ನು ನೀಡಲಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ 950 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿತ್ತು. ನಮ್ಮ ಸರ್ಕಾರ 1,600 ಕಿ.ಮೀ. ರಸ್ತೆ ನಿರ್ಮಾಣ ಮಾಡಿದೆ.
* ಹವಾಯಿ ಜಪ್ಪಲಿ ಧರಿಸುವವನು ವಿಮಾನದಲ್ಲಿ ಹಾರಾಟ ನಡೆಸಬೇಕು ಎಂಬುದು ನನ್ನ ಕನಸು. ಕೃಷಿ, ಗ್ರಾಮೀಣಾಭಿವೃದ್ಧಿ, ರಸ್ತೆ, ರೈಲ್ವೆ, ವಿಮಾನ ನಿಲ್ದಾಣಕ್ಕೆ ನೆರವು ನೀಡಲಾಗಿದೆ.
* ರಾಜ್ಯದ ರೈತರು ಗೊಬ್ಬರಕ್ಕಾಗಿ ಲಾಠಿ ಏಟು ತಿನ್ನಬೇಕಾಗಿಲ್ಲ. ಫಸಲು ಮಾರಾಟ ಮಾಡಲು ಅಲೆದಾಡಬೇಕಿತ್ತು. ಕೇಂದ್ರ ಸರ್ಕಾರ ಇದನ್ನು ತಪ್ಪಿಸಿದೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಸೇರಿದಂತೆ ಅನೇಕ ಯೋಜನೆ ಜಾರಿಗೊಳಿಸಿದ್ದೇವೆ.
* ಭಾರತದ ಎಲ್ಲಾದರೂ ಹೋಗಿ ಟೊಮೆಟೋ, ಆಲೂಗೆಡ್ಡೆ, ಈರುಳ್ಳಿ ಕಾಣಸಿಗುತ್ತದೆ. ಈ ಬೆಳೆಗಳಿಗಾಗಿ ಆಪರೇಷನ್ ಗ್ರೀನ್ ಯೋಜನೆ ಜಾರಿಗೊಳಿಸಲಾಗಿದೆ. ಇದರಿಂದ ಕೃಷಿಕರ ಆದಾಯ ಹೆಚ್ಚಲಿದೆ.
* ದೇಶ ಅಭಿವೃದ್ಧಿಯಾಗಲು ಮಧ್ಯಮ ವರ್ಗ ಅಭಿವೃದ್ಧಿಯಾಗಬೇಕು. ಮಧ್ಯಮ ವರ್ಗದ ಯುವಕರಿಗೆ ಉದ್ಯೋಗ ಸಿಗಬೇಕು. ಅದಕ್ಕಾಗಿ ಸಿಲ್ಕ್ ಇಂಡಿಯಾ ಯೋಜನೆ ಜಾರಿಗೊಳಿಸಲಾಗಿದೆ.
* ಸರ್ಕಾರ ಮೇಕ್ ಇಂಡಿಯಾ ಅಭಿಯಾನ ನಡೆಸುತ್ತಿದೆ. ಇದರಿಂದ ದೇಶದ ಚಿಕ್ಕ-ಚಿಕ್ಕ ಉದ್ಯಮಗಳಿಗೆ ಅನುಕೂಲವಾಗಿದೆ. ದೇಶದ ಯುವ ಜನರ ಕೈ ಬಲಪಡಿಸಿದ್ದೇವೆ ಎಂಬ ಹೆಮ್ಮೆ ಇದೆ.
* ಕರ್ನಾಟಕದಲ್ಲಿ ಯುವಕರ ಹತ್ಯೆಯಾಗಿದೆ. ರಾಜ್ಯ ಅಪರಾಧ ಮುಕ್ತವಾಗುವ ಜೊತೆಗೆ ಭ್ರಷ್ಟಾಚಾರ ಮುಕ್ತವಾಗುವ, ಕಾಂಗ್ರೆಸ್ ಮುಕ್ತವಾಗುವ ಸಮಯ ಹತ್ತಿರ ಬಂದಿದೆ. ಭ್ರಷ್ಟಾಚಾರದಲ್ಲಿ ಸರ್ಕಾರ ಹೊಸ-ಹೊಸ ದಾಖಲೆಗಳನ್ನು ಮಾಡುತ್ತಿದೆ.
* ಶೇ 10ರಷ್ಟು ಲಂಚ ಕೊಡದೇ ಯಾವುದೇ ಕೆಲಸ ಇಲ್ಲಿ ನಡೆಯುವುದಿಲ್ಲ. ಇವುಗಳಿಗೆ ನೀವು ವೋಟಿನ ಮೂಲಕ ಉತ್ತರ ಕೊಡಿ. ಕೆಲವು ಮಂತ್ರಿಗಳ ಮೇಲೆ ಎಫ್ಐಆರ್ ಆಗಿದೆ. ಮರಳು, ಕಲ್ಲುಗಣಿಗಾರಿಕೆ ಮಾಫಿಯಾ ನಡೆಯುತ್ತಿದೆ.
* ಶೇ 10ರಷ್ಟು ಲಂಚ ಕೊಡದೇ ಯಾವುದೇ ಕೆಲಸ ಇಲ್ಲಿ ನಡೆಯುವುದಿಲ್ಲ. ಇವುಗಳಿಗೆ ನೀವು ವೋಟಿನ ಮೂಲಕ ಉತ್ತರ ಕೊಡಿ. ಕೆಲವು ಮಂತ್ರಿಗಳ ಮೇಲೆ ಎಫ್ಐಆರ್ ಆಗಿದೆ. ಮರಳು, ಕಲ್ಲುಗಣಿಗಾರಿಕೆ ಮಾಫಿಯಾ ನಡೆಯುತ್ತಿದೆ.
* ಕರ್ನಾಟಕದ ಜನರು ದೇಶದ ಗೌರವ ಕಾಪಾಡುತ್ತಿದ್ದಾರೆ. ಕಿರಿಯರ ಕ್ರಿಕೆಟ್‌ನಲ್ಲಿ ವಿಶ್ವಕಪ್ ಗೆದ್ದುಕೊಂಡ ತಂಡಕ್ಕೆ ಕರ್ನಾಟಕದ ರಾಹುಲ್ ದ್ರಾವಿಡ್ ಗುರುವಾಗಿದ್ದಾರೆ.
ಸಮಾರಂಭದ ವೇದಿಕೆಯಲ್ಲಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ.ಸದಾನಂದ ಗೌಡ, ಅನಂತ್ ಕುಮಾರ್ ಹೆಗಡೆ, ಸಂಸದ ಬಿ.ಶ್ರೀರಾಮುಲು, ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ, ಮಾಜಿ ಸಚಿವರಾದ ಆರ್.ಅಶೋಕ್ ಮುಂತಾದವರು ಉಪಸ್ಥಿತರಿದ್ದಾರೆ.
ಪರಿವರ್ತನಾ ಯಾತ್ರೆ ಉದ್ಘಾಟನೆಗೆ ಎಸ್.ಎಂ.ಕೃಷ್ಣ ಗೈರು ಹಾಜರಾಗಿದ್ದರು. ಆದರೆ, ಸಮಾರೋಪ ಸಮಾರಂಭದಲ್ಲಿ ಅವರಿಗೆ ವೇದಿಕೆಯಲ್ಲಿ ಅವಕಾಶ ನೀಡಲಾಗಿದೆ. ಲಕ್ಷಾಂತರ ಜನರು ಸಮಾವೇಶಕ್ಕೆ ಆಗಮಿಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಅವರಿಂದ ಮೋದಿಗೆ ಸನ್ಮಾನ. ಶಾಲು ಹೊದಿಸಿ, ಮೈಸೂರು ಪೇಟ ತೊಡಿಸಿ, ಕೆಂಪೇಗೌಡರ ಪ್ರತಿಮೆ ನೀಡಿ ನರೇಂದ್ರ ಮೋದಿ ಅವರನ್ನು ಸನ್ಮಾನಿಸಿದ ಯಡಿಯೂರಪ್ಪ.












Click it and Unblock the Notifications