ಹಿರಿಯ ನಾಗರಿಕರಿಗೆ ನಾರಾಯಣ ಹೆಲ್ತ್ ಕಾರ್ಡ್ ವಿತರಣೆ

ಹಿರಿಯ ನಾಗರಿಕರಿಗಾಗಿ ಆರೋಗ್ಯ ಸಂಬಂಧಿತ ಪರೀಕ್ಷೆ ಮತ್ತು ಔಷಧಗಳಿಗೆ ರಿಯಾಯಿತಿ ನೀಡುವ ಸೀನಿಯರ್ ಸಿಟಿಜನ್ಸ್ ಪ್ರಿವಿಲೇಜ್ ಕಾರ್ಡ್ ಸೇವೆಗೆ ಗುರುವಾರ ಚಾಲನೆ ನೀಡಲಾಗಿದೆ.
ನಾರಾಯಣ ಹೆಲ್ತ್ ಸಂಸ್ಥೆಯ ಅಧ್ಯಕ್ಷ ಡಾ. ದೇವಿ ಶೆಟ್ಟಿ ನೂತನ ಸೇವೆಗೆ ಚಾಲನೆ ನೀಡಿದರು. ಸಾಮಾನ್ಯ ದೈಹಿಕ ಪರೀಕ್ಷೆ, ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆ ನಡೆಸಲಾಗುತ್ತದೆ. ವೃದ್ಧರು ಮಾನಸಿಕ ಖಿನ್ನತೆಯಿಂದ ಹೊರಬರಬೇಕು.
ಹಿರಿಯ ನಾಗರಿಕರಿಗೆ ಅನೇಕ ಸೌಲಭ್ಯಗಳು ಲಭ್ಯವಿದ್ದರೂ, ಅಗತ್ಯ ಮಾಹಿತಿಯ ಕೊರತೆ ಎದುರಾಗಿದೆ. ಆದ್ದರಿಂದ ಜನರಿಗೆ ಈ ಬಗ್ಗೆ ಮಾಹಿತಿ ನೀಡುವ ಕೆಲಸವನ್ನು ನಮ್ಮ ಕ್ಲಬ್ ಮಾಡಿಕೊಂಡು ಬಂದಿದೆ ಎಂದು ಹೇಳಿದರು.
ಹಿರಿಯ ನಟ ಸುಂದರ್ ರಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ದೇಶದಲ್ಲಿ ಹಿರಿಯ ನಾಗರಿಕರಿಗೆ ಕೇವಲ ಸೌಲಭ್ಯ ಒದಗಿಸಿದರೆ ಸಾಲದು. ಹಿರಿಯರಿಗೆ ಗೌರವನ್ನು ನೀಡುವಂತಹ ಪರಿಸ್ಥಿತಿ, ಮನೋಸ್ಥಿತಿ ನಿರ್ಮಾಣವಾಗಬೇಕು ಎಂದು ಕಾರ್ಯಕ್ರಮದಲ್ಲಿ ನಟ ಸುಂದರ್ ರಾಜ್ ತಿಳಿಸಿದರು.
ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ವಿವರಗಳನ್ನು ಪಡೆಯಲು ಸಂಪರ್ಕಿಸಿ: ಸೀನಿಯರ್ ಸಿಟಿಜನ್ಸ್ ಪ್ರಿವಿಲೇಜ್ ಕಾರ್ಡ್' ಸೇವಾ ವಿಭಾಗ, ನಾರಾಯಣ ಹೃದಯಾಲಯ, ಬೆಂಗಳೂರು. ಮೊಬೈಲ್: 95383 21100, 97423 28950












Click it and Unblock the Notifications