ನಂದಿನಿ vs ಅಮುಲ್ ವಿವಾದ ಬೆನ್ನಲ್ಲೆ ಕಾಂಗ್ರೆಸ್‌ನಿಂದ ಹೊಸ ಯೋಜನೆ ಘೋಷಣೆ: ಬಿಜೆಪಿಗೆ ಟಕ್ಕರ್
ಬೆಂಗಳೂರು, ಏಪ್ರಿಲ್ 10: ಕರ್ನಾಟಕದಲ್ಲಿ ಸ್ಥಳಿಯ 'ನಂದಿನಿ' ಸಂಸ್ಥೆ ಮತ್ತು 'ಅಮುಲ್' ವಿವಾದವು ಮತ್ತೆ ಮತ್ತೆ ಮುನ್ನೆಲೆಗೆ ಬರುತ್ತಲೇ ಇದೆ. ಆಡಳಿತ ಪಕ್ಷ ಬಿಜೆಪಿ ವಿರುದ್ಧ ತರಾಟೆಗೆ ತೆಗೆದುಕೊಂಡಿರುವ ವಿರೋಧ ಪಕ್ಷ ಕಾಂಗ್ರೆಸ್ ಇದೀಗ ರೈತ ಪರ, ಹೈನುಗಾರಿಕೆ ಸೇರಿದಂತೆ ನಂದಿನಿ ಸಂಸ್ಥೆ ಪರ ಒಂದಷ್ಟು ಘೋಷಣೆಗಳನ್ನು ಮಾಡಿದೆ.
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ 2023 ಕಾವು ದಿನೇ ದಿನೆ ಹೆಚ್ಚಾಗುತ್ತಿದೆ. ಈಗಾಗಲೇ ಪ್ರಣಾಳಿಕೆಗಳನ್ನು ಪ್ರಮುಖ ಪಕ್ಷಗಳು ಬಿಡುಗಡೆ ಮಾಡಿದೆ. ಇದಾದ ಬಳಿಕ ಇತ್ತೀಚೆಗೆ ಅಮುಲ್ ಜೊತೆ ನಂದಿನಿ ವಿಲೀನ ವಿಚಾರ, ಕರ್ನಾಟಕಕ್ಕೆ ಅಮೂಲ್ ಎಂಟ್ರಿ, ನಂದಿನಿ ಸಂಸ್ಥೆ ಜೊತೆಗೆ ಕರ್ನಾಟಕ ರೈತರಿಗೆ ಹೊಡೆತ ಬೀಳಲಿದೆ ವಿಚಾರ ಸದ್ದು ಮಾಡುತ್ತಿದೆ. ಇದಕ್ಕೆಲ್ಲ ಬಿಜೆಪಿ ಕಾರಣ ಎಂದು ಕಾಂಗ್ರೆಸ್ ಜರಿದಿದೆ.

ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್ ಮಹತ್ವದ ಘೊಷಣೆ ಮಾಡಿದ್ದು, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ರೈತರಿಗೆ ಹೈನುಗಾರಿಕೆ ಪ್ರೋತ್ಸಾಹದ ಯೋಜನೆಗಳನ್ನು ರೂಪಿಸುವುದಾಗಿ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ
— Karnataka Congress (@INCKarnataka) April 10, 2023
◆ರಾಜ್ಯದ ರೈತರಿಗೆ ಹೈನುಗಾರಿಕೆ ಪ್ರೋತ್ಸಾಹದ ಯೋಜನೆಗಳನ್ನು ರೂಪಿಸುತ್ತದೆ.
◆KMF ಸಂಸ್ಥೆಯ ಉನ್ನತಿಕರಣಕ್ಕೆ ಆದ್ಯತೆ.
◆"ನಂದಿನಿ" ಬ್ರಾಂಡ್‌ನ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ಕ್ರಮ.
◆ಮುಖ್ಯವಾಗಿ ನಂದಿನಿಯನ್ನು ಗುಜರಾತಿನ ಹಿತಾಸಕ್ತಿಗೆ ಬಲಿ ಕೊಡುವುದನ್ನು ಶತಾಯಗತಾಯ ತಡೆಯುತ್ತೇವೆ.
ಈ ಟ್ವೀಟ್‌ನಲ್ಲಿ ಕಾಂಗ್ರೆಸ್, ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟದ (KMF) ಸಂಸ್ಥೆಯ ಉನ್ನತಿಕರಣಕ್ಕೆ ಆದ್ಯತೆ ನೀಡಲಾಗುವುದು. "ನಂದಿನಿ" ಬ್ರಾಂಡ್‌ನ ಉತ್ಪನ್ನಗಳ ಮಾರುಕಟ್ಟೆ ವಿಸ್ತರಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು. ಮುಖ್ಯವಾಗಿ ನಂದಿನಿಯನ್ನು ಗುಜರಾತಿನ ಹಿತಾಸಕ್ತಿಗೆ ಬಲಿ ಕೊಡುವುದನ್ನು ಶತಾಯಗತಾಯ ತಡೆಯುತ್ತೇವೆ ಎಂದು ಹೇಳಿಕೊಂಡಿದೆ.
ಕೆಎಂಎಫ್, ನಂದಿನಿ ಬ್ರಾಂಡ್ ಕುರಿತು ಕಾಂಗ್ರೆಸ್ ಯೋಜನೆ ರೂಪಿಸುವುದಾಗಿ ಹೇಳುವ ಮೂಲಕ ರಾಜಕೀಯ ಲೆಕ್ಕಾಚಾರ ಹಾಕಿಕೊಂಡಿದೆ. ಚುನಾವಣೆ ಹಿನ್ನಲೆಯಲ್ಲಿ ಈ ವಿವಾದದಿಂದ ಬಿಜೆಪಿ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳಲಿದೆ. ಬಿಜೆಪಿ ವಿರುದ್ಧ ಜನರ ಆಕ್ರೋಶವನ್ನೇ ಮತಗಳಾಗಿ ಪರಿವರ್ತಿಸಿಕೊಳ್ಳುವ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ಆದರೆ ಬಿಜೆಪಿ ಮಾತ್ರ ನಂದಿನಿಯನ್ನು ಅಮುಲ್ ಜೊತೆಗೆ ವಿಲೀನ ಪ್ರಸ್ತಾಪವೇ ಇಲ್ಲ. ಈ ನಾಡಿನ ರೈತರಿಗೆ ಸರ್ಕಾರ ಅನ್ಯಾಯ ಮಾಡಿಲ್ಲ ಎಂದು ಹೇಳಿಕೊಂಡಿದೆ.
ಇದೇ ವಿಚಾರವಾಗಿ ಕೇವಲ ಕಾಂಗ್ರೆಸ್ ಮಾತ್ರವಲ್ಲದೇ ಕನ್ನಡಿಗರು, ಹೋಟೆಲ್‌ಗಳ ಸಂಘ ಸೇರಿದಂತೆ ಅನೇಕ ಅಮುಲ್ ಪ್ರವೇಶವನ್ನು ವಿರೋಧಿಸಿದ್ದಾರೆ. ಸರ್ಕಾರ ನಡೆ ಕುರಿತು ಟೀಕೆಗಳು ಕೇಳಿ ಬಂದಿವೆ.
ಬೆಂಗಳೂರು ಹೋಟೆಲ್: ಅಮುಲ್ ಬೈಕಾಟ್
ಬೃಹತ್ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅವರು, ನಮ್ಮ ಹೋಟೆಲ್‌ಗಳಿಗೆ ಸ್ಥಳಿಯ ರೈತರಿಂದ ಸಂಗ್ರಹವಾಗಿ ಪೂರೈಕೆಯಾಗುವ ನಂದಿನಿ ಹಾಲನ್ನು ಮಾತ್ರವೇ ಬಳಸುವಂತೆ ಕರೆ ನೀಡಿದ್ದಾರೆ. ಈ ಮೂಲಕ ಅಮುಲ್ ಕಂಪನಿಯ ಹೆಸರು ಹೇಳದೇ ಅವರು ಪರೋಕ್ಷವಾಗಿ 'ಅಮುಲ್ ಬೈಕಾಟ್' ಪ್ರಾರಂಭಿಸಿದ್ದಾರೆ.

ದೈನಂದಿನಲ್ಲಿ ಹೋಟೆಲ್ ಊಟ ತಿಂಡಿ ಜೊತೆಗೆ, ಅಗತ್ಯವಾದ ಟಿ-ಕಾಫಿ ವಿಚಾರದಲ್ಲಿ ನಂದಿನಿ ಹಾಲು ಹೋಟೆಲಿನ ಭಾಗವೇ ಆಗಿದೆ. ಈ ಕಾರಣದಿಂದ ನಮ್ಮ ನೆಲದ ನಂದಿನಿಗೆ ನಷ್ಟವಾಗಲು, ರೈತರಿಗೆ ತೊಂದರೆ ಆಗದಿರುವಂತೆ ನೋಡಿಕೊಳ್ಳುವ ದೃಷ್ಟಿಯಿಂದ ಸಂಘ ನಂದಿನಿ ಹಾಲು ಬಳಕೆಯ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದು ಬಂದಿದೆ.
ನಂದಿನಿ ವಿಲೀನದ ಪ್ರಸ್ತಾಪ ಇಲ್ಲ: ಬಿಜೆಪಿ
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟ (ಕೆಎಂಎಫ್) ಅಡಿ ಬರುವ ಎಲ್ಲ 15 ಹಾಲು ಒಕ್ಕೂಟಗಳು ನಷ್ಟದಲ್ಲಿಲ್ಲ. ಮುಖ್ಯವಾಗಿ ಗುಜರಾತ್ ಮೂಲದ ಅಮುಲ್ ಜೊತೆಗೆ ನಂದಿನಿಯನ್ನು ವಿಲೀನ ಮಾಡುವ ಪ್ರಸ್ತಾಪವೇ ಸರ್ಕಾರದ ಮುಂದೆ ಇಲ್ಲ ಎಂದು ಸಹಕಾರ ಸಚಿವ ಎಸ್,ಟಿ.ಸೋಮಶೇಖರ್ ಸ್ಪಷ್ಟಪಡಿಸಿದರು.
ಲಾಭದಲ್ಲಿರುವ ಕೆಎಂಎಫ್/ನಂದಿನ ಬ್ರಾಂಡ್ ಅವುಗಳಿಗೆ ಯಾವುದೇ ಪ್ರೋತ್ಸಾಹದ ಅಗತ್ಯವಿಲ್ಲ. ನಂದಿನಿ ಬ್ರ್ಯಾಂಡ್ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿದೆ. ಈ ಹಿಂದೆ ಮಂಡ್ಯಕ್ಕೆ ಬೇಟಿ ನೀಡಿದ್ದ ಸಹಕಾರ ಸಚಿವ ಅಮಿತ್ ಶಾ ಹಾಲಿನ ಮಾರುಕಟ್ಟೆ ವಿಸ್ತರಣೆ ಬಗ್ಗೆ ಹೇಳಿದ್ದರು. ಆದರೆ ಎರಡು ಬ್ರಾಂಡ್ ವಿಲೀನ ಕುರಿತು ಅವರು ಪ್ರಸ್ತಾಪಿಸಲ್ಲ ಎಂದು ಎಸ್‌ಗೊಳಿಸುವ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಅವರು ಹೇಳಿದರು.












Click it and Unblock the Notifications