ಹೆಚ್ ಡಿ ಕುಮಾರಸ್ವಾಮಿಗೆ ಬೆಂಕಿ ಹಚ್ಚೋದೆ ಕೆಲಸ: ಎಚ್.ಸಿ.ಬಾಲಕೃಷ್ಣ
ರಾಮನಗರ, ಸೆಪ್ಟೆಂಬರ್ 13: ಪಾಪ.. ಕುಮಾರಸ್ವಾಮಿ ಅವರು ಮಾತನಾಡೋದೆ ಹಾಗೆ.! ಅವರು ಎಲ್ಲಿ ಹೋದರೂ, ಬೆಂಕಿ ಹಚ್ಚೋದೆ ಕೆಲಸ. ಅವರ ಕೆಲಸವೇ ಅದು ಎಂದು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ವಾಗ್ದಾಳಿ ನಡೆಸಿದರು.
ನಾಗಮಂಗಲ ಗಲಾಟೆ ಕಾಂಗ್ರೆಸ್ ಪ್ರಾಯೋಜಿತ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್ ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ ಎಚ್.ಸಿ.ಬಾಲಕೃಷ್ಣ ಅವರು, ಹೆಚ್ ಡಿ ಕುಮಾರಸ್ವಾಮಿ ಯಾವತ್ತೂ ಅಭಿವೃದ್ಧಿ ವಿಚಾರದಲ್ಲಿ ಓಟ್ ಕೇಳಿಲ್ಲ. ಎಂಪಿ ಆದ 24 ಗಂಟೆ ಒಳಗೆ ಮೇಕೆದಾಟುಗೆ ಅನುಮತಿ ಕೊಡುತ್ತೆವೆ. ನರೇಂದ್ರ ಮೋದಿಯವರನ್ನು ಕರೆದುಕೊಂಡು ಬಂದು ಉದ್ಘಾಟನೆ ಮಾಡುತ್ತೆವೆ ಎಂದಿದ್ದರು. ಮೊದಲು ಆ ಕೆಲಸ ಮಾಡಲಿ ಎಂದು ಕಿಡಿಹಾಡಿದರು.

ಚನ್ನಪಟ್ಟಣ ಉಪಚುನಾವಣೆ ಹಿನ್ನಲೆ ಗಲಾಟೆ ಮಾಡಿದ್ದಾರೆ ಎಂಬ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಅವರ ಮನಸ್ಥಿತಿಯನ್ನು ತೋರಿಸುತ್ತದೆ. ಕುಮಾರಸ್ವಾಮಿ ಬೆಂಕಿ ಇಡುವ ಕೆಲಸ ಮೊದಲು ಬಿಡಲಿ. ನಾಗಮಂಗಲದ ಗಲಬೆ ಪ್ರಕರಣವನ್ನು ಕುಮಾರಸ್ವಾಮಿ ಅವರೇ ತನಿಖೆ ಮಾಡಲಿ. ಅವರನ್ನೆ ತನಿಖಾಕಾರಿಯನ್ನಾಗಿ ನೇಮಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರ ಬಳಿ ನಾನೆ ಮನವಿ ಮಾಡುತ್ತೆನೆ ಎಂದು ತಿರುಗೇಟು ನೀಡಿದರು.
ಗಲಬೆ ಪ್ರಕರಣಕ್ಕೆ ರಾಜಕೀಯ ತಿರುವು ಕೊಡುತ್ತಿರುವುದು ನಾವಲ್ಲ. ಮಾಧ್ಯಮಗಳು ಹಾಗೂ ವಿಪಕ್ಷಗಳು ಈ ಪ್ರಕರಣವನ್ನು ರಾಜಕೀಯವಾಗಿ ವಿಶ್ಲೇಸಿಸುತ್ತಿದ್ದಾರೆ. ತಪ್ಪಿತಸ್ಥರು ಯಾರೇ ಆದರೂ ಶಿಕ್ಷೆ ಆಗಲಿ. ಎಚ್‌ಡಿಕೆ ತನಿಖೆಯಿಂದಲೇ ಎಲ್ಲವು ಬಯಲಾಗಲಿ. ಯಾವುದೇ ಒಂದು ಧರ್ಮವನ್ನು ಓಲೈಕೆ ಮಾಡುವ ಸಂಸ್ಕೃತಿ ನಮ್ಮ ಪಕ್ಷದಲ್ಲಿ ಇಲ್ಲ. ಧರ್ಮದ ವಿಚಾರದಲ್ಲಿ ಯಾರೇ ತೊಂದರೆ ಕೊಟ್ಟರೂ ಸಹಿಸುವುದಿಲ್ಲ ಎಂದರು. ನಮಗೆಲ್ಲ ಸಿದ್ದರಾಮಯ್ಯ ಮೇಲೆ ಅಪಾರ ನಂಬಿಕೆ ಇದೆ. ಸಿದ್ದರಾಮಯ್ಯ ಅವರು ಇರುವವರೆಗೂ ಅವರೇ ನಮ್ಮ ದೊರೆ ಎಂದು ಹೇಳಿದರು.
ರಾಹುಲ್ ಸಂವಾದದ ಹೇಳಿಕೆಯನ್ನು ತಿರುಚಲಾಗಿದೆ: ಉಗ್ರಪ್ಪ
ಲೋಕಸಭಾ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಎಸ್ ಇ, ಎಸ್ ಟಿ ಯವರ ಮೀಸಲಾತಿ ತೆಗೆಯಬೇಕು ಎಂದು ಅಮೇರಿಕಾದಲ್ಲಿ ಹೇಳಿದ್ದಾರೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರ ಸಂವಾದದ ಹೇಳಿಕೆಯನ್ನು ತಿರುಚಲಾಗಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರು ಹೇಳಿದರು.
ಗೋಕುಲಾಷ್ಟಮಿಗೂ ಇಮಾಮ್ ಸಾಬೀಗೂ ಏನು ಸಂಬಂಧ ಎಂದು ಕೇಳುವಂತೆ ಸಾಮಾಜಿಕ ನ್ಯಾಯ, ಮೀಸಲಾತಿಗೂ ಬಿಜೆಪಿಗೂ ಏನು ಸಂಬಂಧ. ಎಲ್ಲಾ ಹಂತಗಳಲ್ಲು ಆರ್ ಎಸ್ ಎಸ್ ಪ್ರಣೀತ ಮನುವಾದವನ್ನು ತೂರಿಸಲು ಪ್ರಯತ್ನ ಪಡುತ್ತಿದೆ ಬಿಜೆಪಿ. ಆರ್ ಎಸ್ ಎಸ್ ಎರಡನೇ ಸರಸಂಘ ಚಾಲಕರಾಗಿದ್ದ ಗೋಲವಳ್ಕರ್ ಅವರು ತಮ್ಮ ಬಂಚ್ ಆಫ್ ಥಾಟ್ಸ್ ಪುಸ್ತಕದಲ್ಲಿ ಶ್ರೇಣಿಕೃತ ವ್ಯವಸ್ಥೆ ಇರಬೇಕು ಎಂದು ಪ್ರತಿಪಾದನೆ ಮಾಡಿದ್ದಾರೆ. ಶೋಷಿತ ವರ್ಗದ ಜನರು ಮುಂದುವರೆಯದೆ ಹಾಗೆಯೇ ಇರಬೇಕು ಎಂಬುದು ಬಿಜೆಪಿ ಹಾಗೂ ಸಂಘದ ಚಿಂತನೆ.
ಸಂವಿಧಾನ ರಚಣೆಯಲ್ಲಿ ಆರ್ ಎಸ್ ಎಸ್ ಅವರ ಕೊಡುಗೆ ಏನಿದೆ. ಅಂಬೇಡ್ಕರ್ ಅವರ ವಿಚಾರದಲ್ಲಿ ನಂಬಿಕೆಯಿಟ್ಟು ಸಂವಿಧಾನ ಜಾರಿಗೆ ತಂದ ಪಕ್ಷ ಕಾಂಗ್ರೆಸ್. ಬಾಬಾ ಸಾಹೇಬರನ್ನು ಸಂವಿಧಾನ ಕರಡು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದ್ದು ಕಾಂಗ್ರೆಸ್ ಹಾಗೂ ನೆಹರು ಅವರು.
ಪರಿಶಿಷ್ಟ ಜಾತಿ ಹಾಗೂ ವರ್ಗಗಳಿಗೆ ಆಕ್ಟ್ 1950 ಮೂಲಕ ಮೀಸಲಾತಿ ತಂದಿದ್ದು ಕಾಂಗ್ರೆಸ್ ಸರ್ಕಾರ. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಓದಲು ಮೀಸಲಾತಿ ತರಲು ಮುಂದದಾಗ ಸಮಾಜವನ್ನು ಒಡೆದು ಆಳುವ ನೀತಿಗೆ ನೂಕಬೇಕು ಎಂದು ಪ್ರಯತ್ನಪಟ್ಟಿದ್ದು ಇದೇ ಬಿಜೆಪಿ. ಅನಂತ್ ಕುಮಾರ್ ಹೆಗಡೆ, ಯತ್ನಾಳ್ ಅವರು ಸೇರಿದಂತೆ ಅನೇಕ ಬಿಜೆಪಿ ನಾಯಕರು ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಕಿತ್ತು ಹಾಕಲು ಎಂದು ಹೇಳಿದ್ದಾರೆ.
ಮೀಸಲಾತಿಯನ್ನು ಮುಂದುವರೆಸಿಕೊಂಡು ಬರುವಂತೆ ಮಾಡಿದ್ದು ಕಾಂಗ್ರೆಸ್. ಆದರೆ ಬಿಜೆಪಿ ಎಂದಿಗೂ ಮೀಸಲಾತಿ ಪರವಾಗಿ ಹೋರಾಟ ಮಾಡಿಲ್ಲ. ಅದು ಪರೋಕ್ಷವಾಗಿ ಮೀಸಲಾತಿ ತೆಗೆಯಬೇಕು ಎಂದು ಹುನ್ನಾರ ಮಾಡುತ್ತಿದೆ ಎಂದು ಮಾಜಿ ಸಂಸದ ವಿ ಎಸ್ ಉಗ್ರಪ್ಪ ಅವರು ಹೇಳಿದರು.












Click it and Unblock the Notifications