Mysuru Dasara 2025: ಮೈಸೂರು ದಸರಾ ವೇಳೆ ಹೊಸ ಟ್ರಾಫಿಕ್ ರೂಲ್ಸ್, ಏನಿದು ದಿಢೀರ್ ಚೇಂಜ್?
ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮಾಚರಣೆ ಜೋರಾಗಿದೆ. ನಗರದ ಶ್ರೀಮಂತ ಸಂಸ್ಕೃತಿ ಮತ್ತು ರಾಜಮನೆತನದ ಸಂಪ್ರದಾಯಗಳನ್ನು ಆಚರಿಸಲಾಗುತ್ತಿದೆ. ಪ್ರವಾಸಿಗರು ಭವ್ಯ ಮೆರವಣಿಗೆಗಳು, ಅಲಂಕರಿಸಿದ ಆನೆಗಳು, ರೋಮಾಂಚಕ ಪ್ರದರ್ಶನಗಳು ಮತ್ತು ಸುಂದರವಾಗಿ ಬೆಳಗಿದ ಅರಮನೆಗಳನ್ನು ವೀಕ್ಷಿಸಲು ಮೂಲೆ ಮೂಲೆ ಮೂಲೆಗಳಿಂದ ಮೈಸೂರಿಗೆ ಕಾಲಿಡುತ್ತಿದ್ದಾರೆ. ಹೀಗಾಗಿ ಸಾಂಸ್ಕೃತಿಕ ನಗರ ಟ್ರಾಫಿಕ್ ಸಿಟಿಯಾಗಿ ಬದಲಾಗಿದೆ. ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿರುವ ಹಿನ್ನೆಲೆ ಪೊಲೀಸರು ಹೊಸ ರೂಲ್ಸ್ ಜಾರಿ ಮಾಡಿದ್ದಾರೆ.
ಮೈಸೂರು ದಸರಾದ ಅದ್ಧೂರಿ ಸಮಾರೋಪ ಮತ್ತು ಗುರುವಾರ ನಡೆಯಲಿರುವ ಬಹುನಿರೀಕ್ಷಿತ ಜಂಬೂ ಸವಾರಿಗೆ ಕೇವಲ ಮೂರು ದಿನಗಳು ಬಾಕಿ ಉಳಿದಿದ್ದು, ನಗರದೆಲ್ಲೆಡೆ ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರೆ. ಚಾಮರಾಜ ರಸ್ತೆ ಸೇರಿ ಪ್ರಮುಖ ರಸ್ತೆಗಳು ಜನದಟ್ಟಣೆಯಿಂದ ಕೂಡಿದ್ದು, ಪ್ರಮುಖ ಮಾರ್ಗಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಹೀಗಾಗಿ ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಆಯ್ದ ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧಗಳನ್ನು ಘೋಷಿಸಿದ್ದಾರೆ. ದಟ್ಟಣೆಯನ್ನು ಕಡಿಮೆ ಮಾಡಲು ಏಕಮುಖ ಸಂಚಾರ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.

ದಸರಾ ಆಚರಣೆಗಳು ಭರದಿಂದ ಸಾಗುತ್ತಿರುವುದರಿಂದ, ಅನೇಕ ಪ್ರವಾಸಿಗರು ವಿವಿಧೆಡೆ ಪ್ರಯಾಣಿಸಲು ಆಟೋರಿಕ್ಷಾಗಳನ್ನು ಬಳಸುತ್ತಿದ್ದಾರೆ. ಕೆಲ ಚಾಲಕರು ಪ್ರವಾಸಿಗರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಹಲವಾರು ದೂರುಗಳು ಸಹ ಬಂದಿವೆ. ದಸರಾ ಹಬ್ಬವನ್ನೇ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರವಾಸಿಗರು ದೂರಿದ್ದಾರೆ.
ಸಂಚಾರ ನಿರ್ಬಂಧ ಎಲ್ಲೆಲ್ಲಿ?
ಪ್ರವಾಸಿಗರ ವಾಹನಗಳು ಏರಿಕೆಯಾಗುವ ನಿರೀಕ್ಷೆಯಿದ್ದು, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಆಯ್ದ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧಗಳನ್ನು ಘೋಷಿಸಿದ್ದಾರೆ. ಹಲವೆಡೆ ಏಕಮುಖ ಸಂಚಾರ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಹೆಚ್ಚುವರಿಯಾಗಿ, ದಸರಾ ಉತ್ಸವದ ಸಮಯದಲ್ಲಿ ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಕೆಲವೆಡೆ ವಾಹನಗಳ ತಾತ್ಕಾಲಿಕ ನಿಲುಗಡೆ ನಿಷೇಧ ವಲಯಗಳನ್ನು ಗುರುತಿಸಲಾಗಿದೆ.
ಮೈಸೂರಿನ ಲೈಟಿಂಗ್ ವೀಕ್ಷಿಸಲು ಪ್ರವಾಸಿಗರ ದಂಡು ದಂಡಾಗಿ ಬರುತ್ತಿದ್ದು, ದ್ವಿಚಕ್ರ ವಾಹನಗಳು, ರಸ್ತೆಯುದ್ದಕ್ಕೂ ನಿಲ್ಲುತ್ತಿವೆ. ನೋಡುಗರು ತಮ್ಮ ಫೋನ್‌ಗಳಲ್ಲಿ ಅದ್ಭುತ ದಸರಾ ದೀಪಗಳನ್ನು ಸೆರೆಹಿಡಿಯಲು ನಿಲ್ಲುತ್ತಿದ್ದಾರೆ. ಇದರ ಪರಿಣಾಮವಾಗಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಸಂಚಾರ ಪೊಲೀಸ್ ಸಿಬ್ಬಂದಿ ಪ್ರಮುಖ ಸ್ಥಳಗಳಲ್ಲಿ ಪರಿಸ್ಥಿತಿ ನಿಭಾಯಿಸಲು ಹರಸಾಹಸ ಪಡುತ್ತಿದ್ದಾರೆ. ಪ್ರವಾಸಿಗರು ರಸ್ತೆಗಳಲ್ಲಿ ನಿಲ್ಲದೆ ನಿರಂತರವಾಗಿ ಚಲಿಸುವಂತೆ ಸೂಚನೆ ನೀಡಲಾಗಿದೆ.












Click it and Unblock the Notifications