ಮುಸ್ಲಿಂ ಯುವಕ ನಾಪತ್ತೆ: ಮತ್ತೆ ಹೊತ್ತಿಕೊಂಡ ಹೊನ್ನಾವರ
ಹೊನ್ನಾವರ, ಡಿಸೆಂಬರ್ 11 : ಹೊನ್ನಾವರದ ಹಿಂದೂ ಕಾರ್ಯಕರ್ತ ಪರೇಶ್ ಮೆಸ್ತಾ ಹತ್ಯೆ ಪ್ರಕರಣ ತಣ್ಣಗಾಗುವ ಮುಂಚೆಯೇ ಮುಸ್ಲಿಂ ಯುವಕನೊಬ್ಬ ಹೊನ್ನಾವರದಿಂದಲೇ ಕಾಣೆಯಾಗಿದ್ದಾನೆ.
ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲ್ಲೂಕಿನ ಗಡಿ ಹಳ್ಳಿ ಬಿಳಿಗಿರಿಕೊಪ್ಪದ ನಿವಾಸಿ ಅಬ್ದುಲ್ ಗಫರ್ ಶುಂಠಿ ನಾಪತ್ತೆಯಾಗಿರುವ ಯುವಕ. ಹತ್ಯೆಯಾಗುವ ಮುಂಚೆ ಪರೇಶ್ ಮೆಸ್ತಾ ಕೂಡ ನಾಪತ್ತೆ ಆಗಿದ್ದ, ಹಾಗಾಗಿ ಅಬ್ದುಲ್ ಗಫರ್ ಶುಂಠಿ ಪ್ರಕರಣವೂ ಕೋಮು ವೈಷಮ್ಯ ಹಿನ್ನೆಲೆಯಲ್ಲಿಯೇ ಆಗಿರಬಹುದಾ ಎಂಬ ಅನುಮಾನ ಉಂಟಾಗಿದೆ.

ಮಿನಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅಬ್ದುಲ್, ನಾಲ್ಕು ದಿನಗಳ ಹಿಂದೆ ಕೆಲಸದ ನಿಮಿತ್ತ ಹೊನ್ನಾವರಕ್ಕೆ ತೆರಳಿದ್ದರು ಆದರೆ ಇಲ್ಲಿಯವರೆಗೆ ಸುಳಿವೇ ಇಲ್ಲ. ಅಬ್ದುಲ್ ಗೆ ಪತ್ನಿ, ಸಹೋದರ ಹಾಗೂ ನಾಲ್ಕು ಜನ ಮಕ್ಕಳಿದ್ದಾರೆ.

ಶನಿವಾರವೇ (ಡಿಸೆಂಬರ್ 9) ಅಬ್ದುಲ್ ಪತ್ನಿ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಆದರೆ ತನಿಖೆಯಲ್ಲಿ ಪ್ರಗತಿ ಕಂಡು ಬಂದಿಲ್ಲ. ಕೋಮು ದ್ವೇಷದ ಹಿನ್ನೆಯಲ್ಲಿ ಅಬ್ದುಲ್ ನ ಅಪಹರಣ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications