ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ-ಕನ್ಯಾಕುಮಾರಿ ವಿಶೇಷ ರೈಲು, ಕರ್ನಾಟಕಕ್ಕೂ ಅನುಕೂಲ

|
Google Oneindia Kannada News

ಬೆಂಗಳೂರು, ಜನವರಿ 03; ಭಾರತೀಯ ರೈಲ್ವೆ ಮುಂಬೈ-ಕನ್ಯಾಕುಮಾರಿ ನಡುವೆ ವಿಶೇಷ ಸಾಪ್ತಾಹಿಕ ರೈಲು ಓಡಿಸಲಿದೆ. ಈ ರೈಲು ಕರ್ನಾಟಕದ ಕರಾವಳಿ ಮಾರ್ಗವಾಗಿ ಸಂಚಾರ ನಡೆಸಲಿದ್ದು, ಜನರಿಗೆ ಅನುಕೂಲವಾಗಲಿದೆ.

ರೈಲು ನಂಬರ್ 01461 ಮತ್ತು 01462 ಮುಂಬೈ ಸಿಎಸ್‌ಎಂಟಿ ಹಾಗೂ ಕನ್ಯಾಕುಮಾರಿ ನಡುವೆ ಸಂಚಾರ ನಡೆಸಲಿದೆ. ಸಾಪ್ತಾಹಿಕ ಸೂಪರ್ ಫಾಸ್ಟ್ ರೈಲು ಇದಾಗಿದ್ದು, ಮಹಾರಾಷ್ಟ್ರ, ಕರ್ನಾಟಕ, ಕೇರಳದ ಮೂಲಕ ಸಂಚಾರ ನಡೆಸಲಿದೆ.

ಮಂಗಳೂರು-ವಿಜಯಪುರ ರೈಲು ಮಾರ್ಗ ಬದಲಾವಣೆಗೆ ವಿರೋಧ ಮಂಗಳೂರು-ವಿಜಯಪುರ ರೈಲು ಮಾರ್ಗ ಬದಲಾವಣೆಗೆ ವಿರೋಧ

ಈ ರೈಲು ಥಾಣೆ, ಪನ್ವೇಲ್, ರೋಹ, ಚಿಪ್ಲುನ್, ರತ್ನಗಿರಿ, ಕಂಕಾವಲಿ, ಸಿಂಧುದುರ್ಗ, ಸಾವಂತವಾಡಿ ರೋಡ್, ಮಡಗಾಂವ್, ಕಾರವಾರ, ಉಡುಪಿ, ಮಂಗಳೂರು ಜಂಕ್ಷನ್, ತೃಶೂರ್‌, ಎರ್ನಾಕುಲಂ ಟೌನ್, ಕೊಟ್ಟಾಯಂ, ತಿರುವಲ್ಲ, ಚೆಂಗನ್ನೂರು, ಕಾಯಂಕುಳಂ, ಕೊಲ್ಲಂ, ತಿರುವನಂತಪುರ ಸೆಂಟ್ರಲ್, ಕುಲಿತುರಯ್, ನಾಗರಕೋವಿಲ್‌ಗಳಲ್ಲಿ ನಿಲುಗಡೆ ಹೊಂದಿದೆ.

Mangaluru-Vijayapura; ಪ್ರತಿ ದಿನದ ರೈಲು ಸೇವೆ ವಿಸ್ತರಣೆ Mangaluru-Vijayapura; ಪ್ರತಿ ದಿನದ ರೈಲು ಸೇವೆ ವಿಸ್ತರಣೆ

Mumbai Kanyakumari Special Train Schedule

ರೈಲು ಎರಡು ಎಸಿ 2 ಟೈರ್, 2 ಎಸಿ 3 ಟೈರ್, 9 ಸ್ಲೀಪರ್, 4 ಸೆಕೆಂಡ್ ಸಿಟಿಂಗ್, ಎರಡು ವಿಶೇಷ ಚೇತನ ಸ್ನೇಹಿ, ಲಗೇಜ್ ಕೋಚ್‌ಗಳನ್ನು ಹೊಂದಿದೆ.

Dharwad-Belagavi; ಹೊಸ ರೈಲು ಮಾರ್ಗಕ್ಕೆ ಮೋದಿಯಿಂದ ಶಂಕು ಸ್ಥಾಪನೆ Dharwad-Belagavi; ಹೊಸ ರೈಲು ಮಾರ್ಗಕ್ಕೆ ಮೋದಿಯಿಂದ ಶಂಕು ಸ್ಥಾಪನೆ

ವೇಳಾಪಟ್ಟಿ; ರೈಲು ನಂಬರ್ 01461 ಮುಂಬೈ ಸಿಎಸ್‌ಎಂಟಿ-ಕನ್ಯಾಕುಮಾರಿ ಸಾಪ್ತಾಹಿಕ ಸೂಪರ್ ಫಾಸ್ಟ್ ರೈಲು ಮುಂಬೈ ಸಿಎಸ್‌ಎಂಟಿಯಿಂದ ಜನವರಿ 5ರ ಮಧ್ಯಾಹ್ನ 3.30ಕ್ಕೆ ಹೊರಟು ಮರುದಿನ ರಾತ್ರಿ 11.20ಕ್ಕೆ ಕನ್ಯಾಕುಮಾರಿ ತಲುಪಲಿದೆ. ಈ ರೈಲು ಮಂಗಳೂರು ಜಂಕ್ಷನ್‌ಗೆ ಶುಕ್ರವಾರ 8ಕ್ಕೆ ಆಗಮಿಸಿ,ಕಾಸರಗೋಡು, ಕಣ್ಣೂರು ಮೂಲಕ ಸಾಗಲಿದೆ.

ರೈಲು ನಂಬರ್ 01462 ಕನ್ಯಾಕುಮಾರಿ-ಮುಂಬೈ ಸಿಎಸ್ಎಂಟಿ ಸಾಪ್ತಾಹಿಕ ಸೂಪರ್ ಫಾಸ್ಟ್‌ ವಿಶೇಷ ರೈಲು ಕನ್ಯಾಕುಮಾರಿಯಿಂದ ಜನವರಿ 7ರಂದು ಮಧ್ಯಾಹ್ನ 2.15ಕ್ಕೆ ಹೊರಟು ಮುಂಬೈ ಸಿಎಸ್‌ಎಂಟಿಗೆ ಮರುದಿನ ರಾತ್ರಿ 11.50ಕ್ಕೆ ತಲುಪುವುದು.

ರೈಲು ಕಣ್ಣೂರಿಗೆ ರವಿವಾರ ಮುಂಜಾನೆ 2ಕ್ಕೆ ಆಗಮಿಸಿ 2.03ಕ್ಕೆ ಹೊರಡಲಿದೆ. ಕಾಸರಗೋಡಿಗೆ 3.05ಕ್ಕೆ ಆಗಮಿಸಲಿದೆ. ಮಂಗಳೂರು ಜಂಕ್ಷನ್‌ಗೆ ಮುಂಜಾನೆ 4.10ಕ್ಕೆ ಆಗಮಿಸಿ 4.20ಕ್ಕೆ ಹೊರಡಲಿದೆ.

ವಿವಿಧ ರೈಲು ಸಂಚಾರ ರದ್ದು; ನೈಋತ್ಯ ರೈಲ್ವೆ ವಿವಿಧ ರೈಲುಗಳ ಸಂಚಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ. ದೇವರಗುಡ್ಡ- ಹಾವೇರಿ ನಡುವೆ ಜೋಡಿ ಮಾರ್ಗದ ಇಂಜಿನಿಯರಿಂಗ್‌ ಕಾಮಗಾರಿ ಹಿನ್ನೆಲೆಯಲ್ಲಿ ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ಜನವರಿ 2 ರಿಂದ 5ರವರೆಗೆ ಮತ್ತು 9 ರಿಂದ 11ರವರೆಗೆ ಎಸ್‌ಎಸ್‌ಎಸ್‌ ಹುಬ್ಬಳ್ಳಿ-ಚಿತ್ರದುರ್ಗ-ಎಸ್‌ಎಸ್ಎಸ್‌ ಹುಬ್ಬಳ್ಳಿ ಪ್ರತಿದಿನದ ಎಕ್ಸ್‌ಪ್ರೆಸ್‌ ರೈಲು, ಅರಸೀಕೆರೆ-ಎಸ್‌ಎಸ್ಎಸ್‌ ಹುಬ್ಬಳ್ಳಿ ಪ್ರತಿದಿನದ ಎಕ್ಸ್‌ಪ್ರೆಸ್ ರೈಲು ಸಂಚಾರ ಇರುವುದಿಲ್ಲ.

ಜನವರಿ 1 ರಿಂದ 4 ಮತ್ತು 8 ರಿಂದ 10ರವರೆಗೆ ಎಸ್‌ಎಸ್ಎಸ್‌ ಹುಬ್ಬಳ್ಳಿ-ಅರಸೀಕೆರೆ ಪ್ರತಿದಿನದ ಎಕ್ಸ್‌ಪ್ರೆಸ್, ಜನವರಿ 9 ಮತ್ತು 10ರಂದು ವಿಜಯಪುರ-ಮಂಗಳೂರು ಜಂಕ್ಷನ್‌ ಪ್ರತಿದಿನದ ಎಕ್ಸ್‌ಪ್ರೆಸ್, ಜನವರಿ 10 ಮತ್ತು 11ರಂದು ಮಂಗಳೂರು ಜಂಕ್ಷನ್ -ವಿಜಯಪುರ ಪ್ರತಿದಿನ ಎಕ್ಸ್‌ಪ್ರೆಸ್ ರೈಲು ಸಂಚಾರವಿಲ್ಲ.

ಜನವರಿ 9 ಮತ್ತು 10ರಂದು ಎಸ್‌ಎಸ್ಎಸ್‌ ಹುಬ್ಬಳ್ಳಿ-ವಿಜಯಪುರ ಪ್ರತಿದಿನದ ಎಕ್ಸ್‌ಪ್ರೆಸ್ ಸ್ಪೆಷಲ್, ಜನವರಿ 11 ರಿಂದ 13ರವರೆಗೆ ವಿಜಯಪುರ-ಎಸ್‌ಎಸ್ಎಸ್‌ ಹುಬ್ಬಳ್ಳಿ ಪ್ರತಿದಿನದ ಎಕ್ಸ್‌ಪ್ರೆಸ್‌ ರೈಲುಗಳ ಸಂಚಾರ ರದ್ದು.

ಮಂಗಳೂರು-ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರದ್ದು; ಜೋಡಿ ಹಳಿ ಕಾಮಗಾರಿಯ ಹಿನ್ನಲೆಯಲ್ಲಿ ಮಂಗಳೂರು-ವಿಜಯಪುರ ನಡುವಿನ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲು ಸಹ ತಾತ್ಕಾಲಿಕವಾಗಿ ರದ್ದಾಗಿದೆ. ಕರಾವಳಿ-ಮಲೆನಾಡು-ಉತ್ತರ ಕರ್ನಾಟಕ ಸಂಪರ್ಕಿಸುವ ರೈಲು ಇದಾಗಿದೆ. ಈ ರೈಲು ಸೇವೆಯನ್ನು 31/3/2023ರ ತನಕ ವಿಸ್ತರಣೆ ಮಾಡಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.

ಮಂಗಳೂರು-ವಿಜಯಪುರ ಪ್ರತಿದಿನದ ವಿಶೇಷ ಎಕ್ಸ್‌ಪ್ರೆಸ್ ರೈಲು ಹಾಸನ, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ ಮಾರ್ಗವಾಗಿ ಸಂಚಾರ ನಡೆಸುತ್ತಿದೆ. ಈ ರೈಲನ್ನು ಕೊಂಕಣ ಮಾರ್ಗವಾಗಿ ಓಡಿಸುವ ಪ್ರಸ್ತಾವನೆ ಇದೆ. ಇದಕ್ಕೆ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ ವಿರೋಧ ವ್ಯಕ್ತಪಡಿಸಿದೆ.

English summary
Indian railways announced special train between Mumbai to Kanyakumari. Here are the schedule of the train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X