ಗುಲಾಮಗಿರಿಯ ರಾಜ್ಯಪಾಲ ಕೂಡಲೇ ರಾಜೀನಾಮೆ ಕೊಟ್ಟು ತೊಲಗಲಿ: ಮುಖ್ಯಮಂತ್ರಿ ಚಂದ್ರು
ಬೆಂಗಳೂರು, ಆಗಸ್ಟ್ 19: ದೇಶದಲ್ಲಿ ವಿರೋಧ ಪಕ್ಷಗಳೇ ಇರಬಾರದೆಂಬ ಧೋರಣೆಯನ್ನು ಬಿಜೆಪಿ ಅನುಸರಿಸುತ್ತಿದೆ. ಇವರ ಧೋರಣೆಯಿಂದಾಗಿ ರಾಜ್ಯಪಾಲರ ಭವನ ಇಂದು ಗುಲಾಮಗಿರಿಗೆ ತಳ್ಳಲ್ಪಟ್ಟಿದೆ. ಈ ರೀತಿಯ ಗುಲಾಮಿ ಪ್ರವೃತ್ತಿಯ ರಾಜ್ಯಪಾಲರುಗಳು ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯಬಾರದು. ಕೂಡಲೇ ರಾಜ್ಯಪಾಲರು ರಾಜೀನಾಮೆ ಕೊಟ್ಟು ತೊಲಗಬೇಕು ಎಂದು ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನೀಡಿರುವ ಪ್ರಾಸಿಕ್ಯೂಷನ್ ಅನುಮತಿಯನ್ನು ವಿರೋಧಿಸಿ ಸಾಹಿತಿ ಮತ್ತು ಕಲಾವಿದರ ಬಳಗ ಇಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಏರ್ಪಡಿಸಿದ್ದ ಸಮಾನ ಮನಸ್ಕರ ಸಭೆಯಲ್ಲಿ ಭಾಗವಹಿಸಿದ್ದ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಸಾಕಷ್ಟು ಅವ್ಯವಹಾರಗಳಲ್ಲಿ, ಭ್ರಷ್ಟಾಚಾರಗಳಲ್ಲಿ ತೊಡಗಿಕೊಂಡಿರುವ ಪ್ರಧಾನಿ, ಗೃಹ ಸಚಿವರಾದಿಯಾಗಿ ಬಿಜೆಪಿಯ ಅನೇಕ ಕಡು ಭ್ರಷ್ಟರು ಎಂದು ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾರೆ.

ಯಾರ ಮೇಲೂ ಸಹ ಕಾನೂನು ಕ್ರಮಗಳು ಆಗುತ್ತಿಲ್ಲ. ಆದರೆ ವಿರೋಧ ಪಕ್ಷಗಳನ್ನೇ ಗುರಿಯಾಗಿಟ್ಟುಕೊಂಡು ನಡೆಸುತ್ತಿರುವ ಈ ರೀತಿಯ ಕೃತ್ಯಗಳು ಸಂಪೂರ್ಣ ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಎಂದು ಮುಖ್ಯಮಂತ್ರಿ ಚಂದ್ರು ಅವರು ವಾಗ್ದಾಳಿ ನಡೆಸಿದರು.
ಇನ್ನೂ ಸಭೆಯಲ್ಲಿ ಹೆಸರಾಂತ ಸಾಹಿತಿ ಡಾ.ಕೆ. ಮರಳುತ್ತಿದ್ದಪ್ಪ , ಡಾ. ಎಸ್. ಜೆ. ಸಿದ್ದರಾಮಯ್ಯ, ಇಂದಿರಮ್ಮ ಅರವಿಂದ ಮಾಲಗತ್ತಿ. ಲೀಲಾ ಸಂಪಿಗೆ ,ವಸುಂದರ ಭೂಪತಿ ಜಾಣಗೆರೆ ವೆಂಕಟರಾಮಯ್ಯ ,ಕೆ.ಎಸ್. ನಾಗರಾಜ್ ಸೇರಿದಂತೆ ಅನೇಕ ಸಾಹಿತಿಗಳು, ಚಿಂತಕರು ಕಲಾವಿದರು ಭಾಗವಹಿಸಿದ್ದರು.












Click it and Unblock the Notifications