• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರೇಕಿಂಗ್ ನ್ಯೂಸ್ ಕೊಟ್ಟ ರೋಲ್ಸ್ ರಾಯ್ ಮಾಲೀಕ ಎಂಟಿಬಿ ನಾಗರಾಜ್!

|
   ರಾಜಕೀಯ ಬಿಟ್ಟು ಹೊಸ ಕ್ಷೇತ್ರಕ್ಕೆ ಕಾಲಿಡಲು MTB ತಯಾರಿ..? | M.T.B. Nagaraj | Oneindia Kannada

   ಬೆಂಗಳೂರು, ಆಗಸ್ಟ್ 28 : ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ, ರೋಲ್ಸ್ ರಾಯ್ ಕಾರು ಮಾಲೀಕ ಎಂಟಿಬಿ ನಾಗರಾಜ್ ಮತ್ತೊಂದು ಬ್ರೇಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಮತ್ತೊಬ್ಬ ಅನರ್ಹ ಶಾಸಕ ಬಿ. ಸಿ. ಪಾಟೀಲ್ ಸಲಹೆಯಂತೆ ಈ ಕೆಲಸಕ್ಕೆ ಅವರು ಕೈ ಹಾಕುತ್ತಿದ್ದಾರೆ.

   ರಾಜ್ಯದ ಶ್ರೀಮಂತ ರಾಜಕಾರಣಿ ಎಂಟಿಬಿ ನಾಗರಾಜ್ ಸದ್ಯ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಸ್ಪೀಕರ್ ತೀರ್ಮಾನವನ್ನು ಪ್ರಶ್ನಿಸಿ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಇನ್ನೂ ಬಾಕಿ ಇದೆ.

   ದುಬಾರಿ ಕಾರು ಖರೀದಿಸಿದ ಅನರ್ಹ ಶಾಸಕ ಎಂಟಿಬಿ ನಾಗರಾಜ್

   ರಾಜಕೀಯ ಬಿಟ್ಟು ಮತ್ತೊಂದು ಕ್ಷೇತ್ರದಲ್ಲಿ ಈಗ ಎಂಟಿಬಿ ನಾಗರಾಜ್ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಹಿರೇಕೆರೂರು ಕ್ಷೇತ್ರದ ಅನರ್ಹ ಶಾಸಕ ಬಿ. ಸಿ. ಪಾಟೀಲ್ ಎಂಟಿಬಿ ನಾಗರಾಜ್‌ಗೆ ಸ್ಯಾಂಡಲ್‌ವುಡ್‌ನಲ್ಲಿ ಅದೃಷ್ಟ ಪರೀಕ್ಷೆ ಮಾಡಲು ಸಲಹೆ ಕೊಟ್ಟಿದ್ದಾರೆ.

   ಇಲಾಖೆಯಲ್ಲಿ ಸಿಎಂ, ರೇವಣ್ಣ ಹಸ್ತಕ್ಷೇಪ: ಎಂಟಿಬಿ ನಾಗರಾಜ್ ಆಕ್ರೋಶ

   ರಾಜಕೀಯದಲ್ಲಿ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿರುವ ಎಂಟಿಬಿ ನಾಗರಾಜ್ ಬಣ್ಣದ ಬದುಕಿಗೆ ಕಾಲಿಡಲಿದ್ದಾರೆ. ಈ ಬಗ್ಗೆ ಅವರು ಗಂಭೀರವಾದ ಚಿಂತನೆಯನ್ನು ನಡೆಸಿದ್ದು, ಕೆಲವೇ ದಿನಗಳಲ್ಲಿ ಈ ಕುರಿತು ಅಧಿಕೃತ ಹೇಳಿಕೆ ನೀಡುವ ನಿರೀಕ್ಷೆ ಇದೆ.

   ಕಾರಿನಿಂದ ಸುದ್ದಿಯಾದ ಎಂಟಿಬಿ ನಾಗರಾಜ್ ಯಾರು?

   ರಾಜ್ಯದ ಶ್ರೀಮಂತ ರಾಜಕಾರಣಿ

   ರಾಜ್ಯದ ಶ್ರೀಮಂತ ರಾಜಕಾರಣಿ

   ರಾಜ್ಯದ ಶ್ರೀಮಂತ ರಾಜಕಾರಣಿ ಎಂಟಿಬಿ ನಾಗರಾಜ್. 2013ರ ಚುನಾವಣೆಯಲ್ಲಿ ತಮ್ಮ ಕುಟುಂಬದ ಆಸ್ತಿ 470 ಕೋಟಿ ಎಂದು ಅವರು ಘೋಷಣೆ ಮಾಡಿದ್ದರು. 2018ರ ಚುನಾವಣೆಯಲ್ಲಿ ತಮ್ಮ ವೈಯಕ್ತಿಕ ಆಸ್ತಿ 708 ಕೋಟಿ, ಪತ್ನಿ ಹೆಸರಿನಲ್ಲಿ 306 ಕೋಟಿ ಆಸ್ತಿ ಇದೆ ಎಂದು ಎಂಟಿಬಿ ನಾಗರಾಜ್ ಘೋಷಣೆ ಮಾಡಿದ್ದಾರೆ.

   ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದರು

   ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದರು

   ಜುಲೈನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಎಂಟಿಬಿ ನಾಗರಾಜ್ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದರು. ಅವರ ಜೊತೆಗೆ ಶಾಸಕ ಬಿ. ಸಿ. ಪಾಟೀಲ್ ಸಹ ಇದ್ದರು. ಆಗ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿ, ಚಿತ್ರ ನಿರ್ಮಾಣ ಮಾಡುವಂತೆ ಬಿ. ಸಿ. ಪಾಟೀಲ್ ಸಲಹೆ ನೀಡಿದ್ದಾರೆ. ಈಗಾಗಲೇ ಬಿ. ಸಿ. ಪಾಟೀಲ್ ಹಲವು ಚಿತ್ರಗಳಲ್ಲಿ ನಟಿಸಿದ್ದು ಕನ್ನಡ ಚಿತ್ರರಂಗದ ಕೌರವ ಎಂದೇ ಖ್ಯಾತಿ ಪಡೆದಿದ್ದಾರೆ.

   ಕಥೆ ಕೇಳಲು ಸಿದ್ಧ ಎಂಟಿಬಿ ನಾಗರಾಜ್

   ಕಥೆ ಕೇಳಲು ಸಿದ್ಧ ಎಂಟಿಬಿ ನಾಗರಾಜ್

   ಎಂಟಿಬಿ ನಾಗರಾಜ್ ಸಿನಿಮಾ ನಿರ್ಮಾಣ ಮಾಡಲು ಆಸಕ್ತಿ ತೋರಿದ್ದಾರೆ. ಈಗಾಗಲೇ ಅವರು ಉತ್ತಮ ಕಥೆಗಾಗಿ ಹುಡುಕಾಟ ಆರಂಭಿಸಿದ್ದಾರೆ. ಒಂದರೆರಡು ಕಥೆಯನ್ನು ಕೇಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಯಾಂಡಲ್‌ವುಡ್‌ಗೆ ಎಂಟಿಬಿ ಪಾದಾರ್ಪಣೆ ಮಾಡಲಿದ್ದಾರೆಯೇ? ಕಾದು ನೋಡಬೇಕು.

   12 ಕೋಟಿ ಕಾರು ಖರೀದಿ

   12 ಕೋಟಿ ಕಾರು ಖರೀದಿ

   ಆಗಸ್ಟ್ 14ರಂದು 12 ಕೋಟಿ ಮೌಲ್ಯದ ರೋಲ್ಸ್ ರಾಯ್ ಕಾರು ಖರೀದಿ ಮಾಡಿ ಎಂಟಿಬಿ ನಾಗರಾಜ್ ಸುದ್ದಿಯಲ್ಲಿದ್ದಾರೆ. ಕೆಎ 59, ಎನ್ 888 ನಂಬರ್ ಕಾರಿನಲ್ಲಿ ಅವರು ಮುಖ್ಯಮಂತ್ರಿಗಳ ಭೇಟಿಗೆ ಬಂದಿದ್ದರು. ಇದು ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು.

   English summary
   Disqualified Hoskote MLA M.T.B. Nagaraj may produce Kannada film. Kannada actor and MLA B.C.Patil suggested the M.T.B. Nagaraj to come produce film.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X