ವಾಟಾಳ್ ನಾಗರಾಜ್ ಒಬ್ಬರೇ ಕನ್ನಡ ಅಭಿಮಾನಿ ಅಲ್ಲ

ಬೆಂಗಳೂರು, ನವೆಂಬರ್ 22 : " ವಾಟಾಳ್ ನಾಗರಾಜ್ ಒಬ್ಬರೇ ಕನ್ನಡ ಅಭಿಮಾನಿಯಲ್ಲ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ನನ್ನ ಭಾಷೆಯಲ್ಲಿ ಉತ್ತರಿಸುತ್ತೇನೆ" ಎಂದು ಹೊನ್ನಾಳಿ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ವಾಟಾಳ್ ನಾಗರಾಜ್‌ಗೆ ಎಚ್ಚರಿಕೆ ನೀಡಿದರು.

ಬೆಂಗಳೂರಿನಲ್ಲಿ ಭಾನುವಾರ ಮಾತನಾಡಿದ ರೇಣುಕಾಚಾರ್ಯ, "ಕನ್ನಡ ಪರ ಸಂಘಟನೆಗಳ ಕುರಿತು ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ ಹೇಳಿಕೆಯನ್ನು ನಾನು ಸಮರ್ಥಿಸಿಕೊಳ್ಳುವೆ. ಅವರು ಸರಿಯಾಗಿ ಹೇಳಿದ್ದಾರೆ" ಎಂದರು.

"ಯಡಿಯೂರಪ್ಪ ಅವರ ವಯಸ್ಸು, ಅವರ ರಾಜಕೀಯ ಅನುಭವ ಏನು?. ಅವರಿಗೆ ವಾಟಾಳ್ ನಾಗರಾಜ್ ನೀತಿ ಪಾಠ ಹೇಳುತ್ತಾರೆ. ನೀವು ಎಷ್ಟು ಸಲ ಜನರಿಂದ ಆಯ್ಕೆಯಾಗಿದ್ದೀರಿ?" ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.

MP Renukacharya Verbal Attack On Vatal Nagaraj

"ನಿಮಗೆ ಮಾತ್ರ ಕನ್ನಡ ಭಾಷೆನಾ?, ಅಭಿಮಾನವೇ?. ಅಚ್ಚ ಕನ್ನಡಿಗರು ನಾವು. ಹಳ್ಳಿಯಲ್ಲಿ ಹುಟ್ಟಿ ಬೆಳೆದು ಜನರ ನಡುವೆ ಪ್ರತಿನಿತ್ಯ ಕನ್ನಡ ಬಳಕೆ ಮಾಡುತ್ತಿರುವವರು ನಾವು" ಎಂದು ವಾಟಾಳ್ ನಾಗರಾಜ್‌ರನ್ನು ತರಾಟೆಗೆ ತೆಗೆದುಕೊಂಡರು.

"ಮುಖ್ಯಮಂತ್ರಿಗಳ ಬಗ್ಗೆ ಬಳಸುವ ಭಾಷೆ ಬಗ್ಗೆ ನಾಲಿಗೆ ಮೇಲೆ ಹಿಡಿತವಿರಲಿ. ಕನ್ನಡ ಭಾಷೆ ಬಗ್ಗೆ ಯಡಿಯೂರಪ್ಪ ಅವರಿಗೆ ಇರುವ ನೈತಿಕತೆ ಪ್ರಶ್ನೆ ಮಾಡುವ ಹಕ್ಕು ನಿಮಗೆ ಇಲ್ಲ. ಇನ್ನೊಮ್ಮೆ ಮಾತನಾಡಿದರೆ ನಾನು ನನ್ನ ಭಾಷೆಯಲ್ಲಿ, ದಾಟಿಯಲ್ಲಿ ಉತ್ತರ ಕೊಡುವೆ" ಎಂದು ರೇಣುಕಾಚಾರ್ಯ ಹೇಳಿದರು.

ಕನ್ನಡ ಒಕ್ಕೂಟ ಡಿಸೆಂಬರ್ 5ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಕರ್ನಾಟಕ ಸರ್ಕಾರ ಮರಾಠಾ ಅಭಿವೃದ್ಧಿ ನಿಗಮ ರಚನೆ ಆದೇಶ ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಬಂದ್ ಕರೆ ನೀಡಲಾಗಿದೆ. ಬಂದ್ ಮಾಡದಂತೆ ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ.

"ನಾವು ನೀಚ ಕೆಲಸ ಮಾಡೋದಿಲ್ಲ. ನಾವು ಬಂದ್‌ನಿಂದ ಹಿಂದೆ ಸರಿಯುವಂತೆ ಮಾಡುತ್ತಿದ್ದಾರೆ. ಸಿಎಂ ಯಡಿಯೂರಪ್ಪಗೆ ನೀಚ ಬುದ್ಧಿ ಇದೆ" ಎಂದು ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+