ತವರಿಗೆ ಮರಳಿದ ಹರಪನಹಳ್ಳಿ ಶಾಸಕ ಎಂಪಿ ರವೀಂದ್ರ
Recommended Video

ಬಳ್ಳಾರಿ, ಫೆಬ್ರವರಿ 06: ದಿವಂಗತ ಎಂ.ಪಿ. ಪ್ರಕಾಶ್ ಅವರ ಏಕೈಕ ಪುತ್ರ, ಹರಪನಹಳ್ಳಿಯ ಕಾಂಗ್ರೆಸ್ ಶಾಸಕ ಎಂ.ಪಿ. ರವೀಂದ್ರ ಅವರ ಆರೋಗ್ಯ ಸುಧಾರಣೆಗೊಂಡಿದ್ದು, ಶೀಘ್ರದಲ್ಲೇ ತವರಿಗೆ ಮರಳಿದ್ದಾರೆ.
ಎಂ.ಪಿ. ರವೀಂದ್ರ ಅವರ ಆಪ್ತರ ಪ್ರಕಾರ, ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಂ.ಪಿ. ರವೀಂದ್ರ ಅವರ ಆರೋಗ್ಯದಲ್ಲಿ ಗಣನೀಯ ಸುಧಾರಣೆ ಕಂಡಿದೆ. ಶೀಘ್ರದಲ್ಲೇ ಭಾರತಕ್ಕೆ ಆಗಮಿಸಿ, ಚುನಾವಣಾ ಪ್ರಕ್ರಿಯೆಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಿದ್ದಾರೆ.

ಎಂ.ಪಿ. ರವೀಂದ್ರ ಅವರು ಕೂಡ, 'ಅನೇಕರ ಮಾತಿಗೆ ಬೆಲೆ ನೀಡಬೇಡಿ. ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಿದ್ದೆ. ಆರೋಗ್ಯ ಸುಧಾರಿಸಿದೆ. ಶೀಘ್ರದಲ್ಲೇ ಊರಿಗೆ ಬಂದು, ತಮ್ಮೆಲ್ಲರ ಜೊತೆಯಲ್ಲಿರುವೆ. ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವೆ. ನಿಮ್ಮೆಲ್ಲರ ಆಶೀರ್ವಾದ, ಹಾರೈಕಗಳು ನನಗಿರಲಿ' ಎಂದು ಹೇಳಿದ್ದಾರೆ.
ಎಂ.ಪಿ. ರವೀಂದ್ರ ಅವರು ಜೆಎಸ್‍ಎಸ್ ಕಾಲೇಜಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ, ಭಾಷಣದ ನಂತರ ವೇದಿಕೆಯಲ್ಲಿ ತೀವ್ರ ಅನಾರೋಗ್ಯಕ್ಕೆ ಈಡಾಗಿದ್ದರು. ಮೈಸೂರಿನಲ್ಲಿ ಶ್ರೀಗಳ ನೇತೃತ್ವದಲ್ಲಿಯೇ ಚಿಕಿತ್ಸೆ ನಡೆದಿತ್ತು. ಆ ನಂತರ ಅವರು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ತೆರಳಿದ್ದರು.











Click it and Unblock the Notifications