ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರೀತಮ್ ಗೌಡ ಸವಾಲು; ಹತ್ತು ಸವಾಲು ಹಾಕಿದರೂ ಸ್ವೀಕರಿಸಲು ನೂರಕ್ಕೆ ನೂರರಷ್ಟು ಸಿದ್ದರಿದ್ದೇವೆ: ಪ್ರಜ್ವಲ್ ರೇವಣ್ಣ

|
Google Oneindia Kannada News

ಹಾಸನ, ಜನವರಿ10: ಹೆಚ್.ಡಿ. ರೇವಣ್ಣನವರು ಹಾಸನ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡಿದ್ರೆ 50 ಸಾವಿರ ಮತಗಳ ಅಂತರದಿಂದ ಗೆಲ್ಲುವುದಾಗಿ ಕ್ಷೇತ್ರದ ಶಾಸಕ ಪ್ರೀತಮ್ ಗೌಡ್ರು ಹಾಕಿರುವ ಸವಾಲನ್ನು ರೇವಣ್ಣನವರ ಕುಟುಂಬ ಯಾವೊತ್ತೋ ಸ್ವೀಕರಿಸಲಾಗಿದ್ದು, ಬೇಕಾದ್ರೆ ಇನ್ನತ್ತು ಸವಾಲಾಕಿದರೂ ಸಿದ್ಧರಿದ್ದು ಯಾವ ಕಾರಣಕ್ಕೂ ಸವಾಲಿನಿಂದ ಹಿಂದೆ ಸರಿಯುವುದಿಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.

ನಗರದ ಹಾಸನಾಂಬ ದೇವಾಲಯ ಆವರಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಾಸನದ ಶಾಸಕ ಪ್ರೀತಂಗೌಡ ಹಾಕಿರುವ ಸವಾಲನ್ನು ರೇವಣ್ಣ ಕುಟುಂಬ ಆಗಲೆ ಸ್ವೀಕರಿಸಿದ್ದು, ಯಾವುದೇ ಕಾರಣಕ್ಕೂ ನಾವುಗಳು ಹಿಂದೆ ಹೋಗುವವರಲ್ಲ. ಇನ್ನೂ ಹತ್ತು ಸವಾಲು ಹಾಕಿದರೂ ಸ್ವೀಕರಿಸಲು ನೂರಕ್ಕೆ ನೂರರಷ್ಟು ಸಿದ್ದರಿದ್ದೇವೆ. ಮುಂದೆ ನಡೆಯಲಿರುವ ವಿಧಾನಸಭಾ ಚುನಾವಣೆ ಯುದ್ಧಕ್ಕೆ ಸಿದ್ಧರಿದ್ದೇವೆ ಎಂದರು.

ಮೈಸೂರು ಹಾಸನ ರೈಲ್ವೆ ವಿದ್ಯುದ್ದೀಕರಣ ಶೀಘ್ರ ಪೂರ್ಣ ಮೈಸೂರು ಹಾಸನ ರೈಲ್ವೆ ವಿದ್ಯುದ್ದೀಕರಣ ಶೀಘ್ರ ಪೂರ್ಣ

ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ತಾಲೂಕಿನಲ್ಲಿ ಬಿಜೆಪಿ 15ಸಾವಿರ ಲೀಡ್ ಪಡೆಯಲಿದೆ. ಇಲ್ಲದಿದ್ದರೆ ನಾನು ಮತ್ತೆ ತಲೆ ಹಾಕುವುದಿಲ್ಲ ಎಂದಿದ್ದರು. ಆದರೆ ನಾನು 16 ಸಾವಿರಕ್ಕೂ ಹೆಚ್ಚು ಲೀಡ್ ಪಡೆಯಲಿಲ್ಲವೇ ಎಂದು ಪ್ರಶ್ನೆ ಮಾಡಿದರು. ಹಾಕಲಾಗಿರುವ ಎಲ್ಲಾ ಸವಾಲಿಗೂ ನಾವು ಉತ್ತರ ಕೊಡುವುದಿಲ್ಲ ಅದಕ್ಕೆಲ್ಲಾ ನಮಗೆ ಜನ ಇದ್ದಾರೆ. ಅವರ ಮೂಲಕ ಯಾವುದೇ ಸವಾಲು ಎದುರಿಸಲು, ಸ್ವೀಕರಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ಹೇಳಿದರು.

MP Prajwal Revanna outraged on preetham gowda

ಹಾಸನ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರದಲ್ಲಿ ಯಾವುದೇ ತೊಂದರೆ ಎಲ್ಲವನೂ ಕ್ಲಿಯರ್ ಮಾಡಿಕೊಳ್ಳುತ್ತೇವೆ. ಶೀಘ್ರವೇ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಬಿಡುಗಡೆ ಮಾಡಲಾಗುವುದು. ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ, ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳ ಅಭ್ಯರ್ಥಿಗಳ ಹೆಸರು ಪ್ರಕಟಿಸಿಲ್ಲ. ಹತ್ತು ದಿನಗಳ ಒಳಗೆ ಎರಡನೇ ಪಟ್ಟಿ ಬಿಡುಗಡೆ ಆಗಲಿದೆ. ಅದರಲ್ಲಿ ಹಾಸನ ಕ್ಷೇತ್ರಗಳ ಹೆಸರೂ ಇರಲಿದೆ ಎಂದು ಪ್ರಶ್ನೆಗೆ ಉತ್ತರಿಸಿದರು. ಜಿಲ್ಲೆಯಲ್ಲಿ ನಾವು ಯಾವತ್ತೂ ಕೂಡ ಒನ್ ಮ್ಯಾನ್ ಶೋ ಮಾಡಲ್ಲ. ಎಲ್ಲಾ ಮುಖಂಡರು, ನಾಯಕರನ್ನು ಕೂರಿಸಿಕೊಂಡು ತೀರ್ಮಾನ ಮಾಡಿದ್ದೇವೆ. ಮುಂದೆಯೂ ಏನೇ ಸಣ್ಣ ಪುಟ್ಟ ಮನಸ್ತಾಪ ಇದ್ದರೂ, ಕುಳಿತು ಚರ್ಚಿಸಿ ಬಗೆ ಹರಿಸಿಕೊಳ್ಳುವುದಾಗಿ ಹೇಳಿದರು.

ಇನ್ನು ಅರಸೀಕೆರೆ ಕ್ಷೇತ್ರದ ಶಾಸಕರಾದ ಶಿವಲಿಂಗೇಗೌಡರು ಜನವರಿ .17ರ ವರೆಗೆ ಸಮಯ ಕೇಳಿದ್ದು, ಈಗಾಗಲೇ ಅವರೊಂದಿಗೆ ರೇವಣ್ಣನವರು ಮಾತನಾಡಿದ್ದಾರೆ. ಜೊತೆಗೆ ಅರಕಲಗೂಡು ಶಾಸಕ ರಾಮಸ್ವಾಮಿ ಅವರು ದೊಡ್ಡವರನ್ನು ಭೇಟಿ ಮಾಡಿ ಮಾತನಾಡಿಕೊಂಡು ಬಂದಿದ್ದಾರೆ. ಇನ್ನು 10 ದಿನ ಟೈಂ ಕೊಡಿ ಎಲ್ಲಾ ಗೊಂದಲ ಬಗೆಹರಿಸಿಕೊಳ್ಳುತ್ತೇವೆ ಎಂದು ತಿಳಿಸಿದರು. ಆಮೇಲೆ ಏನ್ ಶೋ ತೋರಿಸಬೇಕು ಮಾಡೋಣ ಎಂದು ತಮ್ಮದೇಯಾದ ಮಾತಿನಲ್ಲಿ ಹೇಳಿದರು. ಜೆಡಿಎಸ್ ಪಕ್ಷದಲ್ಲಿ ಯಾವ ಗೊಂದಲ ಇಲ್ಲದಾಗೆ ಮುಂದೆ ನಡೆಯುವ ಚುನಾವಣೆಯನ್ನು ಎದುರಿಸುವುದಾಗಿ ತಿಳಿಸಿದರು.

English summary
We are ready to accept ten challenges MP Prajwal Revanna outraged on preetham gowda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X