ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ ಅನರ್ಹ: ಏನಿದು ಪ್ರಕರಣ?
ಬೆಂಗಳೂರು, ಸೆಪ್ಟಂಬರ್ 01: ಹಾಸನ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಪುತ್ರ ಸಂಸದ ಪ್ರಜ್ವಲ್ ರೇವಣ್ಣ ಅವರು ತಮ್ಮ ಸ್ಥಾನದಿಂದ ಅರ್ಹಗೊಂಡಿದ್ದಾರೆ. ಅವರ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಸಂಸದ ಸ್ಥಾಜ ಅನರ್ಹ ಗೊಳಿಸಿ ಮಹತ್ವದ ಆದೇಶವನ್ನು ಶುಕ್ರವಾರ ಹೊರಡಿಸಿದೆ. ಹಾಗಾದರೆ ಯಾವ ಕಾರಣಕ್ಕೆ ಪ್ರಜ್ವಲ್ ರೇವಣ್ಣ ಅನರ್ಹಗೊಂಡರು, ಅವರು ಮಾಡಿದ್ದು ಏನು? ಅರ್ಜಿದಾರರ ಪ್ರಸ್ತಾಪಿಸಿದ ಅಂಶಗಳು ಯಾವವು ಎಂಬುದನ್ನು ಇಲ್ಲಿ ತಿಳಿಯೋಣ.
ಪ್ರಜ್ವಲ್ ರೇವಣ್ಣ ಅವರು 2019ರ ಲೋಕಸಭಾ ಚುನಾವಣೆ ವೇಳೆ ನಾಮ ಪತ್ರ ಸಲ್ಲಿಕೆ ವೇಳೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೇ ಅವರು ಸ್ಟಾರ್ ಪ್ರಚಾರಕರನ್ನು ಕರೆತಂದು ಕಾರು, ಹೆಲಿಕಾಪ್ಟರ್ ಬಳಸಿ ಭರ್ಜರಿ ಪ್ರಚಾರ ನಡೆಸಿದ್ದರು. ಆದರೆ ಈ ಕುರಿತು ಸೂಕ್ತ ಲೆಕ್ಕವನ್ನು ಅವರು ಸಂಬಂಧಿಸಿದವರಿಗೆ ನೀಡಿರಲಿಲ್ಲ. ಅಲ್ಲದೇ ಹಿಂದಿನ ವಿಚಾರಣೆ ವೇಳೆ ಅವರ ನಡೆಗೆ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು.

2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್‌ನ ಪ್ರಜ್ವಲ್ ರೇವಣ್ಣ 1.45 ಲಕ್ಷಕ್ಕೂ ಹೆಚ್ಚು ಮತ ಪಡೆದು ಗೆಲುವು ಸಾಧಿಸಿದ್ದರು. ಅವರ ವಿರುದ್ಧ ಬಿಜೆಪಿ ಅಭ್ಯರ್ಥಿ ಎ. ಮಂಜು ಅವರು ಸೋಲು ಕಂಡಿದ್ದರು. ಇದಾದ ಬಳಿಕ ಸಂಸದರು ನಾಮಪತ್ರ ಸಲ್ಲಿಕೆ ವೇಳೆ ಸುಳ್ಳು ಮಾಹಿತಿ ನೀಡಿದ್ದಾರೆ. ಸರ್ಕಾರಿ ಮಾಲೀಕತ್ವದ ಜಮೀನು ಖರೀದಿಸಿದ್ದು, ಆದಾಯ ತೆರಿಗೆ ಇಲಾಖೆಗೆ ವಂಚನೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು.
ಪ್ರಜ್ವಲ್ ನೀಡಿದ್ದ ಸುಳ್ಳು ಮಾಹಿತಿ ಏನು?
ಇನ್ನೂ ಹೊಳೆನರಸೀಪುರದಲ್ಲಿರುವ ಚೆನ್ನಾಂಬಿಕಾ ಕನ್ವೆನ್ಷನ್ ಸೆಂಟರ್ ಐದು ಕೋಟಿ ರೂಪಾಯಿ ಮೌಲ್ಯಯುತವಾಗದ್ದು. ಆದರೆ ನಾಮಪತ್ರದಲ್ಲಿ ಅದರ ಒಟ್ಟು ಮೌಲ್ಯವನ್ನು 14 ಲಕ್ಷ ರೂಪಾಯಿ ಎಂದು ಸುಳ್ಳು ಲೆಕ್ಕ ನೀಡಲಾಗಿದೆ. ಇನ್ನೂ ಬೆಂಗಳೂರಿನ ಮಿನರ್ವ ವೃತ್ತದಲ್ಲಿರುವ ಕರ್ನಾಟಕ ಬ್ಯಾಂಕ್‌ನಲ್ಲಿ ತಮ್ಮ ಹೆಸರಿನಲ್ಲಿ ಪ್ರಜ್ವಲ್ ರೇವಣ್ಣ ಅವರು ಸುಮಾರು 48 ಲಕ್ಷ ರೂಪಾಯಿ ಹಣದ ಒಡೆಯನಾಗಿದ್ದಾರೆ. ಆದರೆ ಆ ವಿಚಾರದಲ್ಲಿಯೂ ಸುಳ್ಳು ಹೇಳಲಾಗಿದ್ದು, ಖಾತೆಯಲ್ಲಿ ಕೇವಲ 5 ಲಕ್ಷ ಇದೆ ಎಂದು ಹೇಳಿದ್ದಾರೆ ಎಂದು ಪರಾಜಿತ ಅಭ್ಯರ್ಥಿ ಎ.ಮಂಜು ಮತ್ತು ವಕೀಲ ದೇವರಾಜೇಗೌಡ ಅವರು ಆರೋಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಮೊದಲು ಪರಾಜಿತ ಅಭ್ಯರ್ಥಿ ಎ. ಮಂಜು ಅವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಅರ್ಜಿಯಲ್ಲಿ ಅವರು ಸುಳ್ಳು ಮಾಹಿತಿ ನೀಡಿದ ಕಾರಣಕ್ಕೆ ಪ್ರಜ್ವಲ್ ರೇವಣ್ಣ ಅವರನ್ನು ಸಂಸದರ ಸ್ಥಾನದಿಂದ ಅಸಿಂಧುಗೊಳಿಸುವಂತೆ ಅವರು ಕೋರಿದ್ದರು.
ಭರ್ಜರಿ ಪ್ರಚಾರ ಲೆಕ್ಕ ನೀಡದ ಪ್ರಜ್ವಲ್
ಹಿಂದಿನ ಲೋಕಸಭಾ ಚುನಾವಣೆ ವೇಳೆ ಹಾಸನದಲ್ಲಿ ಪ್ರಚಾರ ಮಾಡಲು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೆಲಿಕಾಪ್ಟರ್ ಮೂಲಕ ಕಡೂರಿಗೆ ತೆರಳಿದ್ದರು. ಅಲ್ಲದೇ ಕ್ಯಾಂಪೇನ್‌ಗಾಗಿ ಐಶಾರಾಮಿ ಕಾರುಗಳನ್ನು, ಅನೇಕ ಆಟೋಗಳು ಹಾಗೂ ಇನ್ನಿತರ ವಾಹನಗಳು ಬಳಸಿಕೊಳ್ಳಲಾಗಿತ್ತು.
ಸಾಕಷ್ಟು ಜನರನ್ನು ಕರೆದುಕೊಂಡು ದೊಡ್ಡ ಪ್ರಚಾರ ನಡೆಸಲಾಗಿತ್ತು. ಅದಕ್ಕಾಗಿ ಭಾರೀ ಪ್ರಮಾನದಲ್ಲಿ ಹಣ ಖರ್ಚು ಮಾಡಲಾಗಿತ್ತು ಎಂದು ಆರೋಪಿಸಿ ಅರ್ಜಿ ಸಲ್ಲಿಸಲಾಗಿತ್ತು.
ಇದೆಲ್ಲದರ ಕುರಿತು ಈ ಹಿಂದೊಮ್ಮೆ ವಿಚಾರಣೆ ವೇಳೆ ಮಾತನಾಡಿದ್ದ ಪ್ರಜ್ವಲ್ ರೇವಣ್ಣ ಎಚ್‌ಡಿ ದೇವೇಗೌಡರು ಮತ್ತು ಸಿದ್ದರಾಮಯ್ಯನವರು ಕಡೂರಿಗೆ ಬಂದದ್ದು ನಿಜ. ಅವರು ಸ್ಟಾರ್ ಪ್ರಚಾರಕರು ಆಯೋಗದ ನಿಯಮಗಳ ಪ್ರಕಾರ ಬಂದು ಪ್ರಚಾರ ಮಾಡಿಕೊಟ್ಟಿದ್ದಾರೆ. ಅವರ ಖರ್ಚು ವೆಚ್ಚವನ್ನು ನಮೂದು ಮಾಡಬೇಕಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದರು.
ಈ ಆರೋಪಗಳು ನಿಜವಲ್ಲ ನಾನು ಪ್ರಚಾರದ ಖರ್ಚು ಕುರಿತು ಆಯೋಗಕ್ಕೆ ವಿವರಿಸಿದ್ದೇನೆ. ನಾನು ಯಾರಿಗೂ ಲಿಖಿತವಾಗಿ ಮಾಖಿಕವಾಗಿ ನೀಡಿರಲಿಲ್ಲ ಎಂದು ಹೈಕೋರ್ಟ್ ಕೇಳಿದ್ದ ಪ್ರಶ್ನೆಗಳಿಗೆ ಅನರ್ಹಗೊಂಡ ಪ್ರಜ್ವಲ್ ರೇವಣ್ಣ ಅಂದು ಉತ್ತರಿಸಿದ್ದರು.
ಶಿಷ್ಟಾಚಾರ ಮೀರಿದ ಪ್ರಜ್ವಲ್ ರೇವಣ್ಣ: ಹೈ ತರಾಟೆ
ಕಳೆದ ವರ್ಷ 2022ರಲ್ಲಿ ಅಕ್ಟೋಬರ್ ಮೂರನೇ ವಾರ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್ ಅನೇಕ ಪ್ರಶ್ನೆಗಳನ್ನು ಪ್ರಜ್ವಲ್ ರೇವಣ್ಣ ಆಗ ಅವರು ಉತ್ತರ ನೀಡಲು ತಡವರಿಸಿದ್ದರು.
ಅಲ್ಲದೇ ವಿಚಾರಣೆ ವೇಳೆ ಅನುಮತಿ ಇಲ್ಲದೇ ಅವರು ವಕೀಲರ ಜೊತೆಗೆ ಮಾತನಾಡಲು ಮುಂದಾಗಿದ್ದರು. ವಕೀಲ ಕೇಶವ ರೆಡ್ಡಿ ಅವರ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಹೆಚ್ಚಿನ ವಿವರಣೆ ನೀಡಲು ಮುಂದಾಗಿದ್ದರು. ಈ ಮೂಲಕ ಶಿಷ್ಟಾಚಾರ ಉಲ್ಲಂಘಿಸಿದ್ದರು. ಇದಕ್ಕೆ ಅಂದು ನ್ಯಾಯಮೂರ್ತಿ ಕೆ.ನಟರಾಜನ್ ಅವರು ತರಾಟೆಗೆ ತೆಗೆದುಕೊಂಡಿದ್ದರು. ಹೀಗೆ ಆರೋಪಗಳನ್ನು ಸುಳ್ಳು ಎಂದು ಹೇಳುವಲ್ಲಿ, ಕೈಕೋರ್ಟ್ ಕೇಳಿದ್ದ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಲಿಲ್ಲ ಎನ್ನಲಾಗಿದೆ.
ಸದ್ಯ ಈ ಪ್ರಕರಣ ವಿಚಾರಣೆ ಶುಕ್ರವಾರ ನಡೆದಿದ್ದು, ಹೈಕೋರ್ಟ್ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದೆ. ಆದೇಶಿಸಿದೆ. ಈ ಮೂಲಕ ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದ ಎಂದ ಎ. ಮಂಜು ಅವರಿಗೆ ಜಯ ಸಿಕ್ಕಂತಾಗಿದೆ.
ಸದ್ಯ ಜೆಡಿಎಸ್‌ನಲ್ಲಿರುವ ಎ.ಮಂಜು ಪ್ರತಿಕ್ರಿಯೆ
2019ರಲ್ಲಿ ಬಿಜೆಪಿಯಲ್ಲಿದ್ದ ಎ.ಮಂಜು ಅವರು ಸದ್ಯ ಜೆಡಿಎಸ್ ನಲ್ಲಿದ್ದಾರೆ. ಸದ್ಯ ಅವರ ಇಚ್ಛೆಯಂತೆ ಎಲ್ಲವೂ ಆಗಿದ್ದು, ಪ್ರಜ್ವಲ್ ರೇವಣ್ಣ ಅನರ್ಹಗೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಎ.ಮಂಜು ಅವರು, ಬದಲಾದ ಸನ್ನಿವೇಶದಲ್ಲಿ ನಾನು ಜೆಡಿಎಸ್ ನಿಂದ ನಿಂತು ಶಾಸಕನಾಗಿ ಆಯ್ಕೆ ಆಗಿದ್ದೇನೆ. ಪ್ರಕರಣದ ವಿಷಯವೇ ಬೇರೆ ನೀನು ಮೊದಲು ಜೆಡಿಎಸ್ ಸೇರ್ಪಡೆಯಾಗು ಎಂದು ಮಾಜಿ ಪ್ರಧಾನಿ ದೇವೇಗೌಡರು ಸಲಹೆ ನೀಡಿದ್ದರು.
ಅವರ ಮಾತಿನಂತೆ ನಾನು ಬಿಜೆಪಿ ಬಿಟ್ಟು ಜೆಡಿಎಸ್ ಸೇರಿ ಶಾಸಕನಾಗಿದ್ದೇನೆ. ಆದರೆ ಅಂದು ನಾನು ಜೆಡಿಎಸ್ ಸೇರ್ಪಡೆ ಸಮಯದಲ್ಲಿ ಯಾವುದೇ ಷರತ್ತುಗಳನ್ನು ಹಾಕಿರಲಿಲ್ಲ. ಸದ್ಯದ ಹೈಕೋರ್ಟ್ ಆದೇಶ ತಪ್ಪು ಮಾಹಿತಿ ನೀಡಿದಂತೆ ಬಂದ ಎಚ್ಚರಿಕೆ ಆಗಿದೆ. ನ್ಯಾಯಾಲಯದ ಆದೇಶವನ್ನು ನಾನು ಗೌರವಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್‌ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications