ಜೂನ್ 10ರಿಂದ ರಾಜ್ಯವನ್ನು ಸಂಪೂರ್ಣವಾಗಿ ಆವರಿಸಲಿರುವ ಮುಂಗಾರು
ಜೂನ್ 10ರಿಂದ ಕರ್ನಾಟಕ ಪ್ರವೇಶಿಸಲಿರುವ ಮುಂಗಾರು. ಒಂದು ವಾರ ತಡವಾಗಿ ಆಗಮಿಸಲಿರುವ ಮಾರುತಗಳು. ಜೂನ್ 10ರಿಂದ ಶುಕ್ರವಾರದಿಂದಲೇ ಮಳೆ ಎಂದು ತಿಳಿಸಿದ ಹವಾಮಾನ ಇಲಾಖೆ.
ಬೆಂಗಳೂರು, ಜೂನ್ 9: ಹವಾಮಾನ ಇಲಾಖೆಯ ಪ್ರಕಟಣೆಯನ್ನು ಹುಸಿಯಾಗಿಸಿ, ರೈತರಲ್ಲಿ ಕೊಂಚ ಗಾಬರಿ ಹುಟ್ಟಿಸಿದ್ದ ಮುಂಗಾರು ಮಳೆಯ ಮಾರುತಗಳು ಜೂನ್ 10ರಿಂದ ರಾಜ್ಯವನ್ನು ಸಂಪೂರ್ಣವಾಗಿ ಆವರಿಸಲಿವೆ ಎಂದು ಹವಾಮಾನ ಇಲಾಖೆ ಹೇಳಿದೆ.
ಗುರುವಾರ, ರಾಜ್ಯ ಒಳನಾಡಿನ ಕೆಲವೆಡೆ ಮಳೆಯಾಗಿದೆ. ಇದೇ ಮಳೆಯು ಶುಕ್ರವಾರದಿಂದ ರಾಜ್ಯದ ವಿವಿಧೆಡೆ ಮುಂದುವರಿಯಲಿದೆ.
[ಬೆಂಗಳೂರಲ್ಲಿ ಶುಕ್ರವಾರ ಗುಡುಗು ಸಹಿತ ಮಳೆ ಸಾಧ್ಯತೆ]

ಆದರೆ, ಶುಕ್ರವಾರ ಸಂಜೆಯಿಂದ ರಾಜ್ಯದ ಹಲವೆಡೆ ಉತ್ತಮವಾಗಿ ಮಳೆಬೀಳುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ಹೇಳಿವೆ.
[ಮುಂಗಾರಿಗೆ ಕ್ಷಣಗಣನೆ : ಕುಮಟಾದಲ್ಲಿ ಭರ್ಜರಿ 14 ಸೆಂ.ಮೀ. ಮಳೆ]
ಆರಂಭದಲ್ಲಿ ಒಂದೆರಡು ದಿನಗಳ ಕಾಲ, ಮೋಡ ಕವಿದ ವಾತಾವರಣ, ತಂಗಾಳಿ ಬೀಸಬಹುದು ಮುಂಗಾರು ಮಾರುತಗಳು ಪೂರ್ಣವಾಗಿ ಹರಡಿದ ನಂತರ, ಹಗುರವಾದ ಮಳೆ ಆಗಲಿದೆ ಎಂದು ಹೇಳಲಾಗಿದೆ.












Click it and Unblock the Notifications