ಜೂನ್ 8 ಅಥವಾ 9 ಕ್ಕೆ ರಾಜ್ಯದಲ್ಲಿ ಮುಂಗಾರು ಮಳೆ ಸಿಂಚನ

Posted By:
Subscribe to Oneindia Kannada

ಬೆಂಗಳೂರು, ಜೂನ್ 03: ನೈರುತ್ಯ ಮುಂಗಾರು ಕೇರಳವನ್ನು ಜೂನ್ 7ರಂದು ಪ್ರವೇಶಿಸಲಿದ್ದು, ಪ್ರಬಲವಾಗಿ ಮಳೆ ಸಂಭವಿಸಿದರೆ ಜೂನ್ 8ಅಥವಾ 9ರ ವೇಳೆಗೆ ಕರ್ನಾಟಕವನ್ನು ಮುಂಗಾರು ಪ್ರವೇಶಿಸಲಿದೆ ಎಂದು ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಹೇಳಿದ್ದಾರೆ.

ಮುಂಗಾರು ಪೂರ್ವ ಮಳೆ ಈಗಾಗಳೇ ಕೇರಳದ ಉತ್ತರ ಭಾಗದಲ್ಲಿ ಕಂಡು ಬಂದಿದೆ. ಆದರೆ, ಜೂ.7ರ ಹೊತ್ತಿಗೆ ನೈರುತ್ಯ ಮುಂಗಾರು ಕೇರಳ ಪ್ರವೇಶಿಸಲಿದ್ದು, ಆ ನಂತರ ಒಂದೆರಡು ದಿನಗಳಲ್ಲಿ ಕರ್ನಾಟಕವನ್ನು ಪ್ರವೇಶ ಮಾಡಲಿದೆ. ಮಾರುತಗಳು ಕ್ಷೀಣವಾಗಿದ್ದರೆ ಕರ್ನಾಟಕಕ್ಕೆ ಮಳೆ ಬರುವುದು ಸ್ವಲ್ಪ ತಡವಾಗಲಿದೆ ಎಂದಿದ್ದಾರೆ.[ದೇಶಕ್ಕಿಲ್ಲ ಮಳೆ ಕೊರತೆ ಚಿಂತೆ, ರೈತರಿಗೂ ನಿಶ್ಚಿಂತೆ]

Monsoon expected to reach Kerala on June , hit Karnataka by June 8 or 9 says IMD

ಪ್ರಸಕ್ತ ವರ್ಷ ನಾಲ್ಕೈದು ದಿನ ಮುಂಗಾರು ವಿಳಂಬವಾಗಿದೆ. ಜೂ.5ರ ವೇಳೆಗೆ ಮುಂಗಾರು ರಾಜ್ಯಕ್ಕೆ ಕಾಲಿಡಬೇಕಿತ್ತು. ಜೂ.1ಕ್ಕೆ ಕೇರಳ ಕರಾವಳಿಯನ್ನು ಮುಂಗಾರು ತಲುಪಬೇಕಿತ್ತು. ಅಲ್ಲೂ ಕೂಡ ವಿಳಂಬವಾಗಿದೆ ಎಂದರು.[ರಾಜ್ಯದ ಎಲ್ಲೆಲ್ಲಿ ಮುಂಗಾರು ಪೂರ್ವ ಮಳೆ?]

ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮುಂಗಾರು ಪೂರ್ವ ಮಳೆಯಾಗುತ್ತಿದೆ. ಮುಂಗಾರು ಮಳೆ ಈ ಬಾರಿ ಪ್ರಬಲವಾಗಿರುವ ಸೂಚನೆ ಸಿಕ್ಕಿದೆ. ಜೂನ್ 15ರ ನಂತರ ರಾಜ್ಯದ ಜಲಾಶಯಗಳಲ್ಲಿ ಒಳ ಹರಿವು ಹೆಚ್ಚಾಗಲಿದ್ದು, ಜಲಾಶಯಗಳ ನೀರಿನ ಸಂಗ್ರಹದಲ್ಲಿ ಏರಿಕೆಯಾಗಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The southwest monsoon expected to reach Kerala on June 7, hit costal Karnataka by June 8 or 9 says Indian Meteorological Department (IMD). Karnataka State Natural Disaster Monitor Centre director Dr GS Srinivas Reddy has backed the IMD report and said if the Monsoon is strong it will reach Karnataka sooner.
Please Wait while comments are loading...