ಮೋದಿ ಕಿ ಗ್ಯಾರಂಟಿ: ನಾಚಿಕೆ ಬಿಟ್ಟ ಮೋದಿ ಎಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು, ನವೆಂಬರ್ 6: ಛತ್ತಿಸ್‌ಗಡ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ಮೋದಿ ಕಿ ಗ್ಯಾರಂಟಿಯನ್ನು ಘೋಷಿಸಿದೆ. ಈ ಕ್ರಮವನ್ನು ಕರ್ನಾಟಕ ಆರೋಗ್ಯ ಖಾತೆ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದಿರುವ ಅವರು, ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಟೀಕಿಸಿದ್ದ ಮೋದಿಯವರು, ಸಾರ್ವಜನಿಕ ಲಜ್ಜೆ ಬಿಟ್ಟು ಛತ್ತೀಸ್‌ಗಢದಲ್ಲಿ 'ಮೋದಿ ಕಾ ಗ್ಯಾರಂಟಿ' ಘೋಷಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಮುಂದುವರೆದು ಮೋದಿಯವರ ನಡೆ ಹೇಗಿದೆಯೆಂದರೆ 'ಹೇಳುವುದು ವೇದಾಂತ, ತಿನ್ನುವುದು ಬದನೆಕಾಯಿ' ಎಂಬಂತಿದೆ. ಆದರೂ ನಮ್ಮ ಯೋಜನೆಗಳು ಪ್ರಧಾನಿಯವರಿಗೆ ಪ್ರೇರಕವಾಗಿದೆಯಲ್ಲ ಎಂಬುದೇ ಸಾರ್ಥಕತೆ. BJPಯವರ ಪ್ರಕಾರ ಸಂಕಷ್ಟದಲ್ಲಿರುವ ಜನರಿಗೆ ಗ್ಯಾರಂಟಿ ಯೋಜನೆಯನ್ನು ಕಾಂಗ್ರೆಸ್ ಕೊಟ್ಟರೆ ಅದು 'ಬಿಟ್ಟಿ ಭಾಗ್ಯವೇ ಎಂದು ಅವರು ಪ್ರಶ್ನಿಸಿದ್ದಾರೆ.
3
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) November 6, 2023
ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಯನ್ನು ಟೀಕಿಸಿದ್ದ ಮೋದಿಯವರು, ಸಾರ್ವಜನಿಕ ಲಜ್ಜೆ ಬಿಟ್ಟು ಛತ್ತೀಸ್‌ಗಢದಲ್ಲಿ 'ಮೋದಿ ಕಾ ಗ್ಯಾರಂಟಿ' ಘೋಷಿಸಿದ್ದಾರೆ.
ಮೋದಿಯವರ ನಡೆ ಹೇಗಿದೆಯೆಂದರೆ 'ಹೇಳುವುದು ವೇದಾಂತ, ತಿನ್ನುವುದು ಬದನೆಕಾಯಿ' ಎಂಬಂತಿದೆ.
ಆದರೂ ನಮ್ಮ ಯೋಜನೆಗಳು ಪ್ರಧಾನಿಯವರಿಗೆ ಪ್ರೇರಕವಾಗಿದೆಯಲ್ಲ ಎಂಬುದೇ ಸಾರ್ಥಕತೆ.
ಬಿಜೆಪಿಯವರು ಕೊಟ್ಟರೆ ಅದು ಜನಪರ ಕಾಳಜಿ. ಕರ್ನಾಟಕದಲ್ಲಿ ನಾವು ಕೊಟ್ಟ ಗ್ಯಾರಂಟಿ ಯೋಜನೆ 'ಬಿಟ್ಟಿ ಭಾಗ್ಯ' ಎನ್ನುವುದಾದರೆ, ಛತ್ತೀಸ್‌ಗಢದಲ್ಲಿ BJPಯವರು ಕೊಟ್ಟಿರುವ 'ಮೋದಿ ಕಾ ಗ್ಯಾರಂಟಿ' ಕೂಡ ಬಿಟ್ಟಿ ಭಾಗ್ಯವೇ ಆಗುತ್ತದೆ. ಇದನ್ನು ನಿರಾಕರಿಸಲು ಬಿಜೆಪಿಯವರಿಗೆ ಸಾಧ್ಯವೇ? ಎಂದು ಅವರು ಪ್ರಶ್ನಿಸಿದ್ದಾರೆ.
ನಮ್ಮ ಸರ್ಕಾರ ರಾಜ್ಯದ ಜನರಿಗೆ ಕೊಟ್ಟ 5 ಗ್ಯಾರಂಟಿಗಳನ್ನು ಪ್ರಧಾನಿ ಮೋದಿಯವರು ಬಾಯಿಗೆ ಬಂದಂತೆ ಟೀಕಿಸಿದ್ದರು. ಗ್ಯಾರಂಟಿ ಯೋಜನೆಗಳಿಂದ ದೇಶವೇ ಹಾಳಾಗಿ ಬಿಡುತ್ತದೆ ಎಂದು ಹುಯಿಲೆಬ್ಬಿಸಿದ್ದರು. ಆದರೆ ಛತ್ತೀಸ್‌ಗಢದಲ್ಲಿ ಇದೇ ಮೋದಿಯವರು 'ಮೋದಿ ಕಾ ಗ್ಯಾರಂಟಿ' ಎಂಬ ಹೆಸರಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. BJPಯವರ ಭಾಷೆಯಲ್ಲೇ ಹೇಳುವುದಾದರೆ, ಮೋದಿ ಕಾ ಗ್ಯಾರಂಟಿ ಪ್ರಣಾಳಿಕೆಯಲ್ಲಿ 'ಬಿಟ್ಟಿ ಭಾಗ್ಯ'ಗಳ ಮಹಾಪೂರವೇ ಇದೆ. ಮೋದಿ ಬಿಟ್ಟಿ ಭಾಗ್ಯ ಕೊಟ್ಟರೆ ದೇಶ ಹಾಳಾಗುವುದಿಲ್ಲವೇ? ಎಂದು ಅವರು ಲೇವಡಿ ಮಾಡಿದ್ದಾರೆ.
ಮುಂಬರುವ ಛತ್ತೀಸ್‌ಗಢ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಣಾಳಿಕೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ರಾಜ್ಯದ ಕುಶಾಬೌ ಠಾಕ್ರೆ ಪರಿಸರದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಿದ್ದರು. 'ಮೋದಿ ಕಿ ಗ್ಯಾರಂಟಿ 2023' ಶೀರ್ಷಿಕೆಯ ಪ್ರಣಾಳಿಕೆಯು ವಿವಾಹಿತ ಮಹಿಳೆಯರಿಗೆ ವಾರ್ಷಿಕ ಆರ್ಥಿಕ ನೆರವು ಮತ್ತು ಬಡ ಕುಟುಂಬಗಳಿಗೆ ₹ 500 ಕ್ಕೆ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಒದಗಿಸುವುದು ಸೇರಿದಂತೆ ಹಲವಾರು ಭರವಸೆಗಳನ್ನು ಒಳಗೊಂಡಿತ್ತು.
ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಅಮಿತ್ ಶಾ, "ಚುನಾವಣಾ ಪ್ರಣಾಳಿಕೆಯು ಬಿಜೆಪಿಗೆ ಕೇವಲ ಪ್ರಣಾಳಿಕೆಯಲ್ಲ, ಬದಲಾಗಿ ನಮಗೆ ಸಂಕಲ್ಪ ಪತ್ರ. ನಮ್ಮ ನಿರ್ಣಯವನ್ನು ಪೂರೈಸುವ ಮೂಲಕ, ನಾವು (ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ) ಛತ್ತೀಸ್‌ಗಢ ರಾಜ್ಯವನ್ನು (2000 ರಲ್ಲಿ) ಸ್ಥಾಪಿಸಿದ್ದೇವೆ. 15 ವರ್ಷಗಳ ಬಿಜೆಪಿ ಆಡಳಿತದ (2003-2018) ಅವಧಿಯಲ್ಲಿ ಛತ್ತೀಸ್‌ಗಢವನ್ನು ಬಿಮಾರು (ಮಂದಗತಿಯ) ರಾಜ್ಯದಿಂದ ಉತ್ತಮ ರಾಜ್ಯವಾಗಿ ಪರಿವರ್ತಿಸಲಾಯಿತು. ಮುಂದಿನ ಐದು ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಜ್ಯವನ್ನಾಗಿ ಮಾಡುವ ಗುರಿಯೊಂದಿಗೆ ನಾವು ಕೆಲಸ ಮಾಡುತ್ತೇವೆ ಎಂದು ಬಿಜೆಪಿ ಪರವಾಗಿ ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಅಮಿತ್ ಶಾ ಹೇಳಿದ್ದರು.












Click it and Unblock the Notifications