ಮೋದಿ ರೆಕಾರ್ಡ್ ಬ್ರೇಕ್: ಚುನಾವಣೆಗೋಸ್ಕರ ಯಾವೊಬ್ಬ ಪ್ರಧಾನಿ ಇಷ್ಟು ಸಮಯ ಕಳೆದಿಲ್ಲ: ಹೆಚ್ ವಿಶ್ವನಾಥ್ ಕಿಡಿ
ಮೈಸೂರು,ಮೇ 08: ಚುನಾವಣೆಗೋಸ್ಕರ ಯಾವೊಬ್ಬ ಪ್ರಧಾನಿ ಇಷ್ಟು ಸಮಯ ಕಳೆದಿರಲಿಲ್ಲ.ನರೇಂದ್ರ ಮೋದಿಯವರು ರೆಕಾರ್ಡ್ ಬ್ರೇಕ್ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಕಿಡಿಕಾರಿದ್ದಾರೆ.
ಈ ಕುರಿತು ಸೋಮವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತ್ನಾಡಿದ ಅವರು, ದೇಶದ ಪ್ರಧಾನಿ ಬಗ್ಗೆ ಅಪಾರ ಗೌರವವಿದೆ. ಆದರೆ, ದೇಶದ ಸಮಸ್ಯೆಗಳ ಬದಿಗೊತ್ತಿ ಪ್ರಚಾರಕ್ಕೆ ಆದ್ಯತೆ ನೀಡಿದ್ದು ಸರಿಯಲ್ಲ. ಮೋದಿ ರೋಡ್ ಶೋ ಫ್ಯಾಶನ್ ಶೋ ರೀತಿ ಆಗಿದ್ದು, ಅವರು ಅಬ್ಬರಿಸಿ ಬೊಬ್ಬಿರಿದರೂ ಏನು ಪ್ರಯೋಜನ ಆಗುವುದಿಲ್ಲ ಎಂದು ಮೋದಿ ವಿರುದ್ದ ಹಳ್ಳಿ ಹಕ್ಕಿ ಹೆಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಬಿಜೆಪಿ ನಾಯಕರು ವ್ಯಾಪಕ ಭ್ರಷ್ಟಾಚಾರ ಮಾಡಿದ್ದಾರೆ. ಹೀಗಾಗಿ ಅವರು ಮತ ಕೇಳಲು ಜನರ ಮುಂದೆ ಬರಲಿಲ್ಲ. ಬಿಜೆಪಿ ಪರ ಮೋದಿ ಅವರು ನಡೆಸಿದ ಪ್ರಚಾರಕ್ಕೆ ಭಾರೀ ಹಣ ವ್ಯಯವಾಗಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ರೋಡ್ ಶೋಗೆ ಜನ ಸೇರಲಿಲ್ಲ. ಪ್ರಧಾನಿ ಮೋದಿ ಆಗಮನದಿಂದ ಜನರಲ್ಲಿ ಸಿನಿಕ ಭಾವನೆ ಉಂಟಾಗಿದ್ದು, ಬಿಜೆಪಿ ಮತ ಗಳಿಕೆ ಕಡಿಮೆಯಾಗಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನ ಸೋಲಿಸಬೇಕೆಂಬ ಬಿಜೆಪಿ ತಂತ್ರ ಫಲಿಸಲ್ಲ. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಇಬ್ಬರೂ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಳ್ಳುಗಾರ ಎಂದು ಹೆಚ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಸಾಲವನ್ನ ನಾವು ತೀರಿಸುತ್ತಿದ್ದೇವೆ ಎಂದು ಸಿಎಂ ಸುಳ್ಳು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರವಿದ್ದಾಗ ಎಷ್ಟು ಸಾಲವಿತ್ತು, ಈಗ ಎಷ್ಟಿದೆ ಎಂಬುದನ್ನ ತಿಳಿಸಿ. ಅದನ್ನು ಬಿಟ್ಟು ಬರೀ ಸುಳ್ಳು ಹೇಳಬೇಡಿ ಎಂದು ಕಿಡಿಕಾರಿದರು.
ಕರ್ನಾಟಕವನ್ನ ಉತ್ತರದವರಿಗೆ ಮಾರಲು ಬಿಜೆಪಿ ಸಿದ್ಧವಾಗಿದ್ದು, ಬಿಜೆಪಿ ಪ್ರಯತ್ನವನ್ನ ತಡೆಯಲು ಕಾಂಗ್ರೆಸ್ ಮುಂದಾಗಿದೆ. ಬಿಜೆಪಿಯವರು ವೋಟಿಗಾಗಿ ಕಂತೆ ಕಂತೆ ಸುಳ್ಳು ಹೇಳುತ್ತಿದ್ದು, ಡಬಲ್ ಇಂಜಿನ್ ಸರ್ಕಾರದಿಂದ ಯಾವುದೇ ಪ್ರಯೋಜನವಿಲ್ಲ. ಇನ್ನ ಪ್ರತಾಪ್ ಸಿಂಹ ವಿರುದ್ಧ ಇತ್ತೀಚೆಗೆ ಮಾಡಿರುವ ಆರೋಪಕ್ಕೆ ನಾನು ಬದ್ಧನಾಗಿದ್ದೇನೆ. ಮುಂದೆ ಪಾರ್ಲಿಮೆಂಟ್ ಚುನಾವಣೆ ಬಂದಾಗ ಎಲ್ಲವನ್ನ ಬಹಿರಂಗಪಡಿಸುತ್ತೇವೆ. ಈ ಬಗ್ಗೆ ಅವರು ಸ್ಟೇ ತಂದಿದ್ದರೂ, ಕಾನೂನಿನ ಮೂಲಕ ತೆರವಿಗೆ ಅವಕಾಶವಿದೆ. ಪ್ರತಾಪ್ ಸಿಂಹ ಬಗ್ಗೆ ನಾನು ಸುಳ್ಳು ಆರೋಪ ಮಾಡಿಲ್ಲ ಎಂದು ಹೆಚ್.ವಿಶ್ವನಾಥ್ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕವನ್ನ ಬಿಜೆಪಿ ನಾಯಕರು ಉತ್ತರ ಭಾರತಕ್ಕೆ ಮಾರುತ್ತಿದ್ದಾರೆ . ಕರ್ನಾಟಕದ ಸ್ವಾಭಿಮಾನ ಹಾಳಾಗುತ್ತಿದೆ. ರಾಜ್ಯದ ಜನರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಬಿಜೆಪಿಯಿಂದ ಆಗುವ ಅನಾಹುತಗಳನ್ನ ತಪ್ಪಿಸಲು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರ್ಬೇಕು. ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ಬಿಜೆಪಿ ರಾಜ್ಯದ ಜನ ತಕ್ಕ ಪಾಠ ಕಲಿಸಬೇಕು. ಯಾವುದೇ ಆಮಿಷ ಟೊಳ್ಳು ಭರವಸೆಗೆ ವೋಟ್ ಮಾಡದೇ ಅರ್ಹರಿಗೆ ಮತಚಲಾಯಿಸುವಂತೆ ಅಂತ ವಿಶ್ವನಾಥ್ ತಿಳಿಸಿದರು












Click it and Unblock the Notifications