ದುಡ್ಡು ಕೊಟ್ರೇ RCB ಆಟಗಾರ ನಾಳೆ JCB ಕಡೆ ಹೋಗ್ತಾನೆ: ಸಿ.ಟಿ.ರವಿ ಹೇಳಿಕೆಗೆ ಅಭಿಮಾನಿಗಳು ಆಕ್ರೋಶ
ಮೈಸೂರು, ಜೂನ್ 02: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಆವೃತ್ತಿಯ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು, ನಾಳೆ(ಜೂನ್ 3) ನಡೆಯಲಿರುವ ಫೈನಲ್ ಪಂದ್ಯಕ್ಕಾಗಿ ಎದುರು ನೋಡುತ್ತಿದೆ. ಇತ್ತ ಬರೋಬ್ಬರಿ 18 ವರ್ಷಗಳ ಪ್ರಶಸ್ತಿ ಬರ ನೀಗಿಸುವುದಕ್ಕೆ ಗೆಲುವಿನಿಂದ ಕೇವಲ ಇನ್ನೊಂದು ಹೆಜ್ಜೆ ದೂರವಿದೆ. ಸದ್ಯ ಆರ್‌ಸಿಬಿ ಕಪ್ ಗೆಲ್ಲುವ ಫೇವರಿಟ್ ತಂಡ ಎನಿಸಿಕೊಂಡಿದ್ದು, ಅಭಿಮಾನಿಗಳು ಈ ಬಾರಿ ಕಪ್ ನಮ್ದೇ ಎಂಬ ವಿಶ್ವಾಸದಲ್ಲಿದ್ದಾರೆ.
ಜೂನ್ 3ರಂದು ನಡೆಯು ಐತಿಹಾಸಿಕ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಎದುರಿಸಲು ಸಜ್ಜಾಗುತ್ತಿದ್ದಾರೆ. ಇನ್ನೊಂದೆಡೆ ವಿಶ್ವದಾದ್ಯಂತ ಇರುವ ಅಸಂಖ್ಯಾತ ಅಭಿಮಾನಿಗಳು ಆರ್‌ಸಿಬಿ ತಂಡಕ್ಕೆ ಯಶಸ್ಸಿಗೆ ಹಾರೈಸುತ್ತಿದ್ದಾರೆ. ವಿವಿಧ ಕ್ಷೇತ್ರದ ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಸೇರಿ ಹಲವರು ಆರ್‌ಸಿಬಿ ತಂಡಕ್ಕೆ ಶುಭ ಹಾರೈಸುತ್ತಿದ್ದಾರೆ. ಇತ್ತ ವಿಧಾನ ಪರಿಷತ್ ಸದ್ಯಸರು ಹಾಗೂ ಬಿಜೆಪಿ ನಾಯಕ ಸಿ ಟಿ ರವಿ ಅವರ ಹೇಳಿಕೆಗೆ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಸಿ ಟಿ ರವಿ ಅವರು ಮಾತನಾಡಿ, ಎಂಎಲ್‌ಸಿ ಸಿ.ಟಿ.ರವಿ ಆರ್‌ಸಿಬಿ ತಂಡಕ್ಕೆ ಹಾರೈಸಲು ಹಿಂದೇಟು ಹಾಕಿದ್ದಾರೆ. ಈ ಹಿಂದೆ ಕ್ರಿಕೆಟ್ ಮ್ಯಾಚ್‌ಗಳು ನಡೆಯುತ್ತಿದ್ದವು. ರಣಜಿ ಮೇಲೆ ಪ್ರಾದೇಶಿಕ ಪ್ರೀತಿ ಇತ್ತು. ಆದರೆ ಐಪಿಎಲ್‌ನಿಂದ ರಾಷ್ಟ್ರೀಯತೆ ಬರುವುದಿಲ್ಲ. ಈ ಕ್ರಿಕೆಟ್ ದುಡ್ಡಿಗಾಗಿ ನಡೆಯುತ್ತದೆ. ಇಂದು ಆರ್‌ಸಿಬಿ ತಂಡದಲ್ಲಿ ಇರುವ ಆಟಗಾರ, ದುಡ್ಡು ಕೊಟ್ರೆ ನಾಳೆ ಜೆಸಿಬಿ ಕಡೆ ಹೋಗುತ್ತಾನೆ. ಇದೆಲ್ಲಾ ದುಡ್ಡಿಗಾಗಿ ನಡೆಯೋದು. ಎಷ್ಟು ಜನ ಕನ್ನಡಿಗರು ಆರ್‌ಸಿಬಿ ತಂಡದಲ್ಲಿ ಇದ್ದಾರೆ ಹೇಳಿ? ಎಂದು ಪ್ರಶ್ನಿಸಿದ್ದಾರೆ. ಇನ್ನೂ ಬಿಜೆಪಿ ನಾಯಕ ಸಿ ಟಿ ರವಿ ಅವರು ಆರ್‌ಸಿಬಿ ತಂಡಕ್ಕೆ ಶುಭ ಹಾರೈಸುವುದಕ್ಕೆ ಹಿಂದೇಟು ಹಾಕಿರುವುದಕ್ಕೆ ಅಭಿಮಾನಿಗಳು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.
ಆರ್‌ಸಿಬಿ ಗೆದ್ದರೆ ನಮಗೆ ಕಿರೀಟ ಸಿಕ್ಕಂತೆ: ವಾಟಾಳ್ ನಾಗರಾಜ್
ಇನ್ನೂ 18 ವರ್ಷ ಬಳಿಕ ಆರ್‌ಸಿಬಿ ಈ ಸಲ ಕಪ್ ಗೆಲ್ಲುತ್ತದೆ ಎಂಬ ವಿಶ್ವಾಸವನ್ನ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಚೊಚ್ಚಲ ಕಪ್ ಗೆಲ್ಲಬೇಕು ಎಂಬುದು ಸಮಗ್ರ ಕನ್ನಡಿಗರ ಆಶಯ ಆಗಿದೆ. ಈ ಬಾರಿ ಆರ್‌ಸಿಬಿ ಕಪ್ ಗೆಲ್ಲಲಿ ಎಂದು ಶುಭ ಹಾರೈಸುತ್ತೇನೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.












Click it and Unblock the Notifications