ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಧಾನಸೌಧದಲ್ಲಿ ಕೊರೊನಾ ಪರೀಕ್ಷೆ; ಮಾತು ಕೇಳದ ರೇವಣ್ಣ!

|
Google Oneindia Kannada News

ಬೆಂಗಳೂರು, ಮಾರ್ಚ್ 18 : ಕರ್ನಾಟಕದಲ್ಲಿ ಕೊರೊನಾ ಹರಡದಂತೆ ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿಧಾನಸೌಧಕ್ಕೆ ಪ್ರವೇಶಿಸುವ ಶಾಸಕರು, ಸಚಿವರನ್ನು ಮುಂಜಾಗೃತ ಕ್ರಮವಾಗಿ ತಪಾಸಣೆ ನಡೆಸಿ ಬಿಡಲಾಗುತ್ತಿದೆ.

ಬಿಬಿಎಂಪಿ ಮತ್ತು ವಿಧಾನಸೌಧದ ಸಿಬ್ಬಂದಿ ಶಾಸಕರನ್ನು ತಪಾಸಣೆ ನಡೆಸುತ್ತಿದ್ದಾರೆ. ಬುಧವಾರ ಬೆಳಗ್ಗೆ ವಸತಿ ಸಚಿವ ವಿ. ಸೋಮಣ್ಣ ಅವರನ್ನು ಸಿಬ್ಬಂದಿ ತಪಾಸಣೆ ಮಾಡಿದರು. ಬಿಬಿಎಂಪಿ ಆಯುಕ್ತ ಬಿ. ಎಚ್. ಅನಿಲ್ ಕುಮಾರ್ ಈ ಸಂದರ್ಭದಲ್ಲಿ ಜೊತೆಗಿದ್ದರು.

ಕೊರೊನಾ; ಕರ್ನಾಟಕದಲ್ಲಿನ ಬಂದ್ ಒಂದು ವಾರ ವಿಸ್ತರಣೆ?ಕೊರೊನಾ; ಕರ್ನಾಟಕದಲ್ಲಿನ ಬಂದ್ ಒಂದು ವಾರ ವಿಸ್ತರಣೆ?

"ಸರ್ಕಾರಿ ಕಚೇರಿಗಳು ಮಾತ್ರವಲ್ಲ ಇದೇ ಮಾದರಿಯಲ್ಲಿ ತಪಾಸಣಾ ಕ್ರಮಗಳನ್ನು ಸರ್ಕಾರೇತರ ವಲಯಗಳಲ್ಲೂ ಕೈಗೊಂಡು ಕೊರೊನಾ ಸೋಂಕು ಹರಡದಂತೆ ತಡೆಯಲು ಸಹಕರಿಸಬೇಕು" ಎಂದು ಬಿಬಿಎಂಪಿ ಆಯುಕ್ತರು ಮನವಿ ಮಾಡಿದ್ದಾರೆ.

ಕೊರೊನಾ; ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ? ಕೊರೊನಾ; ಕರ್ನಾಟಕ ಬಂದ್; ಏನಿರುತ್ತೆ, ಏನಿರಲ್ಲ?

ಮಾಜಿ ಸಚಿವ ಎಚ್. ಡಿ. ರೇವಣ್ಣ ವಿಧಾನಸೌಧ ಪ್ರವೇಶಿಸುವಾಗ ಸಿಬ್ಭಂದಿ ತಪಾಸಣೆ ನಡೆಸಲು ಕರೆದರು. ಆದರೆ, ಅದನ್ನು ಕಿವಿಗೆ ಹಾಕಿಕೊಳ್ಳದಂತೆ ರೇವಣ್ಣ ಒಳಗೆ ನಡೆದರು. ಇದರಿಂದಾಗಿ ಸಿಬ್ಬಂದಿ ಅಸಹಾಯಕರಾದರು.

ಕೊರೊನಾ; 22 ರೈಲು ಸ್ಥಗಿತ, ಫ್ಲಾಟ್‌ ಫಾರಂ ಟಿಕೆಟ್ ದರ ಭಾರಿ ಹೆಚ್ಚಳಕೊರೊನಾ; 22 ರೈಲು ಸ್ಥಗಿತ, ಫ್ಲಾಟ್‌ ಫಾರಂ ಟಿಕೆಟ್ ದರ ಭಾರಿ ಹೆಚ್ಚಳ

ವೀಕ್ಷಕರ ಗ್ಯಾಲರಿಗೆ ನಿರ್ಭಂದ

ವೀಕ್ಷಕರ ಗ್ಯಾಲರಿಗೆ ನಿರ್ಭಂದ

ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯುತ್ತಿದೆ. ಮಾರ್ಚ್ 31ರ ತನಕ ಅಧಿವೇಶನ ನಡೆಯಲಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ವಿಧಾನಸೌಧದ ಕಲಾಪ ವೀಕ್ಷಿಸಲು ಜನರು ಆಗಮಿಸದಂತೆ ನಿರ್ಭಂದ ಹೇರಲಾಗಿದೆ. ವಿಧಾನಸೌಧದ ಸಿಬ್ಬಂದಿಗಳು ಕೈಗಳನ್ನು ಸಚ್ಛಗೊಳಿಸಿಕೊಳ್ಳಲು ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ.

ಬಿಬಿಎಂಪಿ ಕಚೇರಿಯಲ್ಲಿ ಔಷಧಿ ಸಿಂಪಡಣೆ

ಬಿಬಿಎಂಪಿ ಕಚೇರಿಯಲ್ಲಿ ಔಷಧಿ ಸಿಂಪಡಣೆ

ಕೊರೊನಾ ವೈರೆಸ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಸಿಬ್ಬಂದಿ ತಂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೇಂದ್ರ ಕಛೇರಿಯ ಎಲ್ಲಾ ಕೊಠಡಿಗಳಲ್ಲಿ ಸೋಂಕು ನಿವಾರಕ ಔಷಧಿ ಸಿಂಪಡಣೆ ಮಾಡುತ್ತಿದೆ. ಪಾಲಿಕೆ ಕೇಂದ್ರ ಕಚೇರಿಗೆ ಜನರು ಮಧ್ಯಾಹ್ನ 3 ರಿಂದ 5ರ ತನಕ ಭೇಟಿ ನೀಡಲು ಸೂಚನೆ ನೀಡಲಾಗಿದೆ.

ಮಾಲ್, ಚಿತ್ರಮಂದಿರ ಬಂದ್

ಮಾಲ್, ಚಿತ್ರಮಂದಿರ ಬಂದ್

ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಒಂದು ವಾರಗಳ ಕಾಲ ಮಾಲ್, ಚಿತ್ರಮಂದಿರ, ಪಬ್ ಬಂದ್ ಮಾಡಲಾಗಿದೆ. ಜಾತ್ರೆ, ಸಮಾವೇಶ, ಹೆಚ್ಚು ಜನರು ಸೇರುವ ಕಾರ್ಯಕ್ರಮ ನಡೆಸದಂತೆ ಸೂಚನೆ ನೀಡಲಾಗಿದೆ. ಇದನ್ನು ಇನ್ನೂ ಒಂದು ವಾರಗಳ ಕಾಲ ವಿಸ್ತರಣೆ ಮಾಡುವ ಸಾಧ್ಯತೆಯೂ ಇದೆ.

ವಿಮಾನ ನಿಲ್ದಾಣದಲ್ಲಿ ತಪಾಸಣೆ

ವಿಮಾನ ನಿಲ್ದಾಣದಲ್ಲಿ ತಪಾಸಣೆ

ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ತಪಾಸಣೆ ನಡೆಸಲು 24*7 ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ವಿಶೇಷ ತಂಡವೊಂದು ಕಾರ್ಯ ನಿರ್ವಹಿಸುತ್ತಿದೆ.

English summary
All MLA's to be scanned for symptoms of Coronavirus before entering Vidhana Soudha in Bengaluru, Karnataka. JD(S) leader H.D.Revanna refused to scan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X