ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರಿಸರ ಸೂಕ್ಷ್ಮ ಪ್ರದೇಶದ ಕರಡು ಅಧಿಸೂಚನೆ; ಶಾಸಕರ ವಿರೋಧ

|
Google Oneindia Kannada News

ಬೆಂಗಳೂರು ಜು.15: ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಇತ್ತೀಚೆಗೆ ಹೊರಡಿಸಿದ ಪಶ್ಚಿಮ ಘಟ್ಟಗಳನ್ನು 'ಪರಿಸರ ಸೂಕ್ಷ್ಮ ಪ್ರದೇಶ' (ಇಎಸ್ಎ) ಪುನರ್ ಕರಡು ಅಧಿಸೂಚನೆಗೆ ಕರ್ನಾಟಕದ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರವು ಪಶ್ಚಿಮ ಘಟ್ಟಗಳನ್ನು 'ಪರಿಸರ ಸೂಕ್ಷ್ಮ ಪ್ರದೇಶ' (ಇಎಸ್ಎ) ಅಧಿಸೂಚನೆ ಹೊರಡಿಸಿದೆ. ಆದರೆ ಅದರಡಿ ಕರ್ನಾಟಕದ 20,668 ಚದರ ಕಿ. ಮೀ. ಪ್ರದೇಶವು ಒಳಗೊಂಡಿದೆ. ಇದರಿಂದ ಮಲೆನಾಡಿನ ಭಾಗದ ಜನರಿಗೆ ತೊಂದರೆ ಆಗಲಿದೆ ಎಂದು ರಾಜ್ಯದ ಜನಪ್ರತಿನಿಧಿಗಳು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ನಿರ್ಧಾರ ಆಕ್ಷೇಪಿಸಿದ್ದಾರೆ.

ದ.ಕ-ಉಡುಪಿಯಲ್ಲಿ ಭಾರೀ ಮಳೆ; ಮುಳುಗಿದ ಕುಕ್ಕೆ ಸ್ನಾನ ಘಟ್ಟ, ಶಾಲಾ ಕಾಲೇಜಿಗೆ ರಜೆ ದ.ಕ-ಉಡುಪಿಯಲ್ಲಿ ಭಾರೀ ಮಳೆ; ಮುಳುಗಿದ ಕುಕ್ಕೆ ಸ್ನಾನ ಘಟ್ಟ, ಶಾಲಾ ಕಾಲೇಜಿಗೆ ರಜೆ

ಕೇಂದ್ರ ಸರ್ಕಾರದ ಈ ತೀರ್ಮಾನದಿಂದ ಪಶ್ಚಿಮ ಘಟ್ಟಗಳ ಭಾಗದ ಮಲೆನಾಡಿನ ನಿವಾಸಿಗಳಿಗೆ ತೊಂದರೆ ಉಂಟಾಗುತ್ತದೆ ಎಂದು ಪಶ್ಚಿಮಘಟ್ಟ ಪ್ರದೇಶದ ಅನೇಕ ಪ್ರತಿನಿಧಿಗಳು ಅಭಿಪ್ರಾಯಪಟ್ಟಿದ್ದಾರೆ.

MLAs oppose to Central govts draft notification of ESA

ಈ ಕಾರಣಕ್ಕಾಗಿಯೇ ಗೃಹ ಸಚಿವ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಇದೇ ಜುಲೈ 18 ರಂದು ಮಲೆನಾಡಿನ ಶಾಸಕರು, ಮುಖಂಡರು ಸಭೆ ನಡೆಸಲಿದ್ದಾರೆ. ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದ ಕರಡು ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಮರು ಹೊರಡಿಸುವುದನ್ನು ವಿರೋಧಿಸಿ ಕೆಲವು ನಿರ್ಣಯ ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯ ಬಳಿಕ ನಿರ್ಧಾರ ಪ್ರಕಟ ಸಾಧ್ಯತೆ; ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಪಶ್ಚಿಮ ಘಟ್ಟಗಳಲ್ಲಿನ ಪರಿಸರ ಸೂಕ್ಷ್ಮ ಪ್ರದೇಶದ (ಇಎಸ್ಎ) ಕರಡು ಅಧಿಸೂಚನೆಯನ್ನು ಪುನರ್ ಪ್ರಕಟಿಸಿದೆ.

ಈ ಕುರಿತ ಹಿಂದಿನ ಹಿಂದಿನ ಅಧಿಸೂಚನೆಗಳನ್ನು ಕೇಂದ್ರ ರದ್ದುಗೊಳಿಸಿದಂತೆ ಮಾಡಿ ಪುನಃ ಪಶ್ಚಿಮ ಘಟ್ಟದ ಜನರಿಗೆ ತೊಂದರೆ ಯಾಗುವಂತೆ ಮತ್ತದೆ ಅಧಿಸೂಚನೆ ಹೊರಡಿಸಿದೆ. ಇದರಿಂದ ಅಸಮಧಾನಗೊಂಡ ರಾಜ್ಯ ಅರಣ್ಯ ಸಚಿವ ಉಮೇಶ ಕತ್ತಿ ಅವರು ಮಲೆನಾಡಿನ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಮಧ್ಯಸ್ಥಗಾರರ ಜೊತೆ ಸಭೆ ನಡೆಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿದ್ದಾರೆ.

MLAs oppose to Central govts draft notification of ESA

ಪ್ರಸ್ತುತ ಈ ಅಧಿಸೂಚನೆ ಒಂದು ವೇಳೆ ಜಾರಿಗೆ ಬಂದಿದ್ದೇ ಆದಲ್ಲಿ ಮಲೆನಾಡು ಭಾಗದಲ್ಲಿ ವಾಸಿಸುವ ಜನರ ಜೀವನ ಅಸ್ತವ್ಯಸ್ತವಾಗುತ್ತದೆ. ಅಭಿವೃದ್ಧಿ ಕಾಮಗಾರಿಗಳಿಗೆ ತೊಂದರೆ ಆಗುತ್ತದೆ. ಜತೆಗೆ ಜನರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿ ಆಗಬೇಕಾಗುತ್ತದೆ. ಮಲೆನಾಡಿ ಭಾಗದ ಜನರ ಬದುಕನ್ನು ಕಸಿದುಕೊಂಡಂತಾಗುತ್ತದೆ ಎಂದು ಶಾಸಕರು ಅಭಿಪ್ರಾಯಪಟ್ಟಿದ್ದಾರೆ.

ಕಸ್ತೂರಿರಂಗನ್ ಸಮಿತಿಯ ವರದಿ ತಿರಸ್ಕರಿಸಿರುವ ಕರ್ನಾಟಕ ಸರ್ಕಾರ ತನ್ನ ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳಬಾರದು. ಪರಿಸರ ವಿಚಾರದಲ್ಲಿ ರಾಜ್ಯದ ನಿಲುವು ಸ್ಪಷ್ಟವಾಗಿದ್ದರು ಕರಡು ಅಧಿಸೂಚನೆ ಹೊರಡಿಸಲಾಗಿದೆ. ಈ ಕುರಿತು ಸೋಮವಾರ (ಜುಲೈ.18) ಜರುಗಲಿರುವ ಸಭೆಯಲ್ಲಿ ಶಾಸಕರಿಂದ ನಿರ್ಣಯ ಅಂಗೀಕರಿಸಲಾಗುವುದು ಎಂದು ಉಮೇಶ್ ಕತ್ತಿ ತಿಳಿಸಿದ್ದಾರೆ.

20,668 ಚ.ಕಿ.ಮೀ. ಸೂಕ್ಷ್ಮ ಪ್ರದೇಶ; 2013ರಲ್ಲಿ ಕರ್ನಾಟಕದ ಪಶ್ಚಿಮ ಘಟ್ಟಗಳ ಸಾಲಿನ 20,668 ಚದರ ಕಿಲೋ ಮೀಟರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸುವಂತೆ ಕಸ್ತೂರಿ ರಂಗನ್ ವರದಿಯು ಶಿಫಾರಸು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹರಡಿರುವ ಒಟ್ಟು 46,832 ಚದರ ಕಿ.ಮೀ. ಪರಿಸರ ಪ್ರದೇಶ ಕುರಿತು ಕೇಂದ್ರ ಸರ್ಕಾರದ ಕರಡು ಅಧಿಸೂಚನೆಯನ್ನು ಕರ್ನಾಟಕ ಸೇರಿದಂತೆ ಆಯಾ ರಾಜ್ಯಗಳು ಸಾಕಷ್ಟು ಭಾರಿ ತಿರಸ್ಕರಿಸಿವೆ. ಆ ವಿಚಾರಗಳಲ್ಲಿ ತಮ್ಮ ನಿಲುವು ಏನೆಂದು ಸಂಬಂಧಿಸಿದ ರಾಜ್ಯಗಳು ತಿಳಿಸಿವೆ.

ಕೆಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪಶ್ಚಿಮ ಘಟ್ಟಗಳನ್ನು ಇಎಸ್ಎ ಎಂದು ಘೋಷಿಸಿರುವುದು ಸರಿಯಲ್ಲ ಎಂದು ಶಾಸಕರು ಹೇಳಿದ್ದಾರೆ. ಆದರೆ ಒಂದು ವೇಳೆ ಕರಡು ಅಧಿಸೂಚನೆ ಅಂತಿಮವಾದರೆ ಪರಿಸರ ಪ್ರದೇಶಗಳಲ್ಲಿನ ಮಾನವ ಚಟುವಟಿಕೆ, ಪರಿಸರಕ್ಕೆ ಅಪಾಯವನ್ನುಂಟು ಮಾಡುವ ಗಣಿಗಾರಿಕೆ ನಿಯಂತ್ರಣಕ್ಕೆ ಬರುತ್ತದೆ ಎಂದು ಪರಿಸರ ಪ್ರೇಮಿಗಳು ಸೇರಿದಂತೆ ಹಲವರು ತಿಳಿಸಿದ್ದಾರೆ.

Recommended Video

Sushmita Sen ಮತ್ತು Lalit Modi ಲವ್ ಲೈಫ್ ಬಗ್ಗೆ ಸುಶ್ಮಿತಾ ಮಾಜಿ ಲವ್ವರ್ ಹೀಗಾ ಹೇಳೋದು!! *India |Oneindia

English summary
Karnataka MLA's have expressed opposed Union ministry of Environment, Forest and Climate Change recent re-draft notification of Ecologically Sensitive Area (ESA) on Western Ghats,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X