• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಸಕರಿಗೆ ಸಂಕಷ್ಟ ತಂದ ಕರ್ನಾಟಕ ಹೈಕೋರ್ಟ್ ಸೂಚನೆ

|

ಬೆಂಗಳೂರು, ಜನವರಿ 23 : ಶಾಸಕರು ತಮ್ಮ ಖಾಸಗಿ ಕಾರಿನ ಮೇಲೆ ಹುದ್ದೆ, ಸರ್ಕಾರಿ ಲಾಂಛನ ಅಳವಡಿಕೆ ಮಾಡುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. ನಿಯಮ ಉಲ್ಲಂಘನೆಯಾಗದಂತೆ ಕ್ರಮ ಕೈಗೊಳ್ಳಿ ಎಂದು ವಿಧಾನಸಭೆ ಸ್ಪೀಕರ್‌ಗೆ ತಿಳಿಸಿದೆ.

ಆನಂದ್ ಶೆಟ್ಟಿ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯೂರ್ತಿ ಆರ್. ದೇವದಾಸ್ ಅವರಿದ್ದ ಏಕಸದಸ್ಯ ಪೀಠ ಈ ಸೂಚನೆ ನೀಡಿದೆ. ಖಾಸಗಿ ಕಾರುಗಳ ಮೇಲೆಯೂ ಸರ್ಕಾರಿ ಲಾಂಛನ ಅಳವಡಿಸಿರುವುದು ಕಂಡು ಬಂದಿದೆ ಎಂದು ನ್ಯಾಯಾಲಯ ಹೇಳಿದೆ.

ರವಿ ಚೆನ್ನಣ್ಣನವರ್ ಕಾರ್ಯಾಚರಣೆ; ನಿಯಮ ಉಲ್ಲಂಘಿಸಿದರೆ ದಂಡ

ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ ಸದಸ್ಯರು, ಹಾಲಿ ವಿಧಾನಸಭೆ, ಲೋಕಸಭಾ ಸದಸ್ಯರು, ಮಾಜಿ ಸದಸ್ಯರು ವಾಹನಗಳ ನಂಬರ್ ಪ್ಲೇಟ್ ಮೇಲೆ ಹೆಸರು, ಹುದ್ದೆ, ಸರ್ಕಾರಿ ಲಾಂಛನ ಬಳಕೆ ಮಾಡಬಾರದು ಎಂದು ಹೈಕೋರ್ಟ್ ಆದೇಶ ನೀಡಿತ್ತು. ಆದರೆ, ಈ ಆದೇಶ ಪಾಲನೆಯಾಗುತ್ತಿಲ್ಲ.

ವಾಹನ ಸವಾರರಿಗೆ ಸಾರಿಗೆ ಇಲಾಖೆ ಮಹತ್ವದ ಸೂಚನೆ

ರಾಜ್ಯ, ಕೇಂದ್ರ ಸರ್ಕಾರಿ ಸಂಸ್ಥೆಗಳು, ಅರೆ ನ್ಯಾಯಿಕ ಸಂಸ್ಥೆಗಳು, ಹೆಸರು, ಲಾಂಛನ, ಚಿಹ್ನೆಗಳನ್ನು ಹೋಲುವಂತಹ ಫಲಕಗಳನ್ನು ಆಳವಡಿಸಿಕೊಳ್ಳಬಾರದು. ಖಾಸಗಿ ಸಂಘಟನೆ, ಸಂಸ್ಥೆಗಳು ತಮ್ಮ ಹೆಸರನ್ನು ನಂಬರ್ ಪ್ಲೇಟ್ ಮೇಲೆ ಬಳಸಬಾರದು ಎಂದು ಹೈಕೋರ್ಟ್ ಹೇಳಿತ್ತು.

ಕುಡಿದು ವಾಹನ ಚಲಾಯಿಸಿದರೆ ಎಂಜಿನ್ ಆಫ್: ಹೊಸ ಆವಿಷ್ಕಾರ

ಸ್ಪೀಕರ್‌ಗೆ ಸೂಚನೆ

ಸ್ಪೀಕರ್‌ಗೆ ಸೂಚನೆ

ಶಾಸಕರು ತಮ್ಮ ಖಾಸಗಿ ವಾಹನದ ಮೇಲೆ ಹೆಸರು, ಹುದ್ದೆ, ಸರ್ಕಾರಿ ಲಾಂಛನ ಮತ್ತು ಚಿಹ್ನೆಯನ್ನು ಅಳವಡಿಸಿಕೊಳ್ಳುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ವಿಧಾನಸಭೆ ಸ್ಪೀಕರ್‌ಗೆ ಸೂಚಿಸಿದೆ.

ಮಾಧ್ಯಮ ಪ್ರಕಟಣೆ ಕೊಡಿ

ಮಾಧ್ಯಮ ಪ್ರಕಟಣೆ ಕೊಡಿ

ಶಾಸಕರು ಮಾತ್ರವಲ್ಲ ಅಧಿಕಾರಿಗಳು ಸಹ ಖಾಸಗಿ ವಾಹನದ ಮೇಲೆ ತಮ್ಮ ಹುದ್ದೆ, ಪದನಾಮ ಬಳಕೆ ಮಾಡಬಾರದು. ಈ ಕುರಿತು ಅರಿವು ಮೂಡಿಸಲು ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳು ಮಾಧ್ಯಮ ಪ್ರಕಟಣೆ ನೀಡಬೇಕು. ಈ ಸೂಚನೆ ಉಲ್ಲಂಘನೆ ಕಂಡುಬಂದಲ್ಲಿ ದೂರು ನೀಡಲು ವಾಟ್ಸಪ್ ಸಂಖ್ಯೆಯನ್ನು ನೀಡಬೇಕು ಎಂದು ಹೇಳಿದೆ.

ನಂಬರ್ ಪ್ಲೇಟ್ ನಿಯಮಗಳು

ನಂಬರ್ ಪ್ಲೇಟ್ ನಿಯಮಗಳು

ಈಗಾಗಲೇ ಸಾರಿಗೆ ಇಲಾಖೆ ವಾಹನಗಳ ನಂಬರ್ ಪ್ಲೇಟ್ ಮೇಲೆ ಸಂಸ್ಥೆ/ಒಕ್ಕೂಟ/ಇತ್ಯಾದಿ ಹೆಸರುಗಳನ್ನು ಚಿಹ್ನೆ/ಲಾಂಛನವನ್ನು ಬಳಕೆ ಮಾಡುವಂತಿಲ್ಲ ಎಂದು ಹೇಳಿದೆ. ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡವನ್ನು ವಿಧಿಸಲಾಗುತ್ತಿದೆ.

ವರದಿ ಕೊಡಲು ಸೂಚನೆ

ವರದಿ ಕೊಡಲು ಸೂಚನೆ

ಹಲವು ವಾಹನಗಳ ನಂಬರ್ ಪ್ಲೇಟ್ ಮೇಲೆ ಹುದ್ದೆ, ಪದನಾಮಗಳನ್ನು ಬಳಕೆ ಮಾಡಲಾಗಿದೆ. ಕೇಂದ್ರ ಮೋಟಾರು ವಾಹನ ಕಾಯ್ದೆ ನಿಯಮವನ್ನು ಉಲ್ಲಂಘನೆ ಮಾಡುತ್ತಿರುವ ಬಗ್ಗೆ ಕಾರ್ಯಾಚರಣೆ ನಡೆಸಬೇಕು. ಈ ಕುರಿತ ವರದಿಯನ್ನು ನೀಡಬೇಕು ಎಂದು ಹೈಕೋರ್ಟ್ ಸೂಚನೆ ನೀಡಿದೆ.

English summary
Karnataka high court directed assembly speaker that MLA's can't use name and government logo on private vehicles belongs to them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X