5 ವರ್ಷದಲ್ಲಿ ಶಾಸಕರ ಖರ್ಚು-ವೆಚ್ಚ ಎಷ್ಟೂಂತ ಕೇಳಿದ್ರೆ ಬೆಚ್ಚಿ ಬೀಳ್ತೀರ
Recommended Video

ಬೆಂಗಳೂರು, ಆಗಸ್ಟ್ 7: ರಾಜ್ಯದಲ್ಲಿ 2013ರಿಂದ 2018ರವರೆಗೆ ಆಡಳಿತ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲಾ ಪಕ್ಷದ ಶಾಸಕರು ಮಾಡಿರುವ ಖರ್ಚು-ವೆಚ್ಚ ಎಷ್ಟು ಗೊತ್ತೇ? ಈ ವಿಷಯ ಕೇಳಿದರೆ ಎಲ್ಲರೂ ಗಾಬರಿಯಾಗುತ್ತಾರೆ.
ಐದು ವರ್ಷದ ಅವಧಿಯಲ್ಲಿ ಶಾಸಕರು ವಿಧಾನ ಸಭೆ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿ ಒಟ್ಟು 235.9 ಕೋಟಿ ರೂ,ಗಳನ್ನು ವೇತನ, ಭತ್ಯೆಗಾಗಿ ವೆಚ್ಚ ಮಾಡಿದ್ದಾರೆ.
ಈ ಪೈಕಿ ಎಂಎಲ್‌ಸಿಗಳ ವೇತನ ಭತ್ಯೆ ಮತ್ತು ವೈದ್ಯಕೀಯ ಭತ್ಯೆಗೆ 32.7 ಕೋಟಿ ರೂ,ಗಳು ಖರ್ಚಾಗಿದ್ದರೆ ವಿಧಾನಸಭೆಯ ಸದಸ್ಯರ ವೇತನ ಹಾಗೂ ಇತರೆ ಖರ್ಚುಗಳಿಗಾಗಿ 90.2 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ. ಇನ್ನೂ ಶಾಸಕರು ವಿದೇಶ ಪ್ರವಾಸ, ರೈಲ್ವೆ ಪ್ರಯಾಣ, ಅಧಿವೇಶನ ಭತ್ಯೆ ಅಂತೆಲ್ಲಾ ಬರೋಬ್ಬರಿ 106.4 ಕೋಟಿ ರೂ.ಗಳನ್ನು ಬೊಕ್ಕಸದಿಂದ ಬಳಕೆ ಮಾಡಿದ್ದಾರೆ.

ವಿಧಾನಸಭೆ ಸದಸ್ಯರ ವೈದ್ಯಕೀಯ ವೆಚ್ಚವೇ 5.8 ಕೋಟಿ ರೂ.ಗಳನ್ನು ದಾಟಿದೆ. ಇನ್ನು ಬುದ್ಧಿಜೀವಿಗಳ ಮನೆ ಎಂದು ಕರೆಸಿಕೊಳ್ಳುವ ವಿಧಾನ ಪರಿಷತ್‌ನ ಸದಸ್ಯರು ತಮ್ಮ ವೇತನ, ದೂರವಾಣಿ ಅಂಚೆ ಭತ್ಯೆ ಹೆಸರಿನಲ್ಲಿ28.6 ಕೋಟಿ ರೂ,ಗಳನ್ನು ಖರ್ಚು ಮಾಡಿದ್ದಾರೆ.
ವೈದ್ಯಕೀಯ ವೆಚ್ಚ ಮೂರು ಕೋಟಿ ರೂ.ಗಳಾಗಿವೆ. ಈ ಎಲ್ಲಾ ಮಾಹಿತಿಯು ಮಾಹಿತಿ ಹಕ್ಕು ಕಾರ್ಯಕರ್ತ ಬೆಳಗಾವಿ ಭೀಮಪ್ಪ ಎನ್ನುವವರು ಮಾಹಿತಿ ಹಕ್ಕಿನಡಿ ಪಡೆದುಕೊಂಡು ಮಾಧ್ಯಮದವರಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.












Click it and Unblock the Notifications