ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಬಂದ್' ಜಿಲ್ಲಾವಾರು ಮಾಹಿತಿ: ಹುಬ್ಬಳ್ಳಿಯಲ್ಲಿ ಉರುಳುಸೇವೆ

ಕರ್ನಾಟಕ ಬಂದ್ ಗೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವಾರು ಜಿಲ್ಲೆಗಳಲ್ಲಿ ಜನಜೀವನ ಸಾಮಾನ್ಯವಾಗಿದೆ.

|
Google Oneindia Kannada News

ಬೆಂಗಳೂರು, ಜೂನ್ 12: ಬಯಲು ಸೀಮೆಗಳಿಗೆ ಶಾಶ್ವತ ನೀರಾವರಿ ಹಾಗೂ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕರೆದಿರುವ ಕರ್ನಾಟಕ ಬಂದ್ ಗೆ ಬಯಲು ಸೀಮೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೋಲಾರ, ಹುಬ್ಬಳ್ಳಿ, ರಾಮನಗಗರ ಮುಂತಾದೆಡೆ ಪ್ರತಿಭಟನೆಯ ಬಿಸಿ ತಟ್ಟಿದ್ದರೆ, ಬಳ್ಳಾರಿ, ರಾಯಚೂರು, ಚಿತ್ರದುರ್ಗ, ಕೊಪ್ಪಳ, ದಾವಣಗೆರೆಗಳಲ್ಲಿ ಬಂದ್ ಗೆ ಸಾರ್ವಜನಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಕನ್ನಡಪರ ಸಂಘಟನೆಗಳು ರಂಪಾಟ ನಡೆಸಿ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿರುವ ಘಟನೆಗಳು ನಡೆದಿವೆ. ಕೋಲಾರದಲ್ಲಿ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ.

ಗಂಡು ಮೆಟ್ಟಿನ ನಾಡಿನಲ್ಲಿ ತಲ್ಲಣ

ಗಂಡು ಮೆಟ್ಟಿನ ನಾಡಿನಲ್ಲಿ ತಲ್ಲಣ

ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಬಸ್ ಸಂಚಾರ ವ್ಯತ್ಯಯವಾಗಿದೆ. ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಕರ್ನಾಟಕ ಭ್ರಷ್ಟಾಚಾರ ನಿರ್ಮುೂಲನಾ ಸಮಿತಿಯ ಹೋರಾಟಗಾರರು ಉರುಳು ಸೇವೆ ಮಾಡಿದರು.

ಚನ್ನಮ್ಮ ವೃತ್ತದಲ್ಲಿ ಒಂದು ಸುತ್ತು ಅರೆಬೆತ್ತಲೆಯಾಗಿ ಉರುಳು ಸೇವೆ ಮಾಡಿದ ಅವರು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹೊಸೂರು ಬಸ್ ಡಿಪೊ ಮುಂಭಾಗ ಹೋಗುತ್ತಿದ್ದ ವಾಹನಗಳನ್ನು ತಡೆದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಟೈರ್‌ಗಳನ್ನು ಸುಟ್ಟು ರಸ್ತೆಗೆ ಅಡ್ಡಲಾಗಿ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದರು. ನವಲಗುಂದದಲ್ಲಿ ಮುನ್ನೆಚ್ಚರಿಕೆಯಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಎಲ್ಲೆಲ್ಲೂ ಬಿಗಿಭದ್ರತೆ

ಎಲ್ಲೆಲ್ಲೂ ಬಿಗಿಭದ್ರತೆ

ಚಿಕ್ಕಮಗಳೂರು ನಗರದಲ್ಲಿ ವಾಣಿಜ್ಯ ವ್ಯವಹಾರ ಬಂದ್ ಆಗಿದ್ದು ಜನರಿಗೆ ಅಲ್ಪ ಸ್ವಲ್ಪ ತೊಂದರೆಯಾಗಿದೆ. ಬಂದ್ ಅಂಗವಾಗಿ ನಗರದ ಎಂಜಿ ರಸ್ತೆ, ಐಜಿ ರಸ್ತೆ ಸೇರಿದಂತೆ ವಿವಿಧೆಡೆ ಬಹುತೇಕ ಅಂಗಡಿಮುಂಗಟ್ಟಗಳು ಮುಚ್ಚಿವೆ. ವಾಹನಸಂಚಾರ ಎಂದಿನಂತೆ ಇದೆ. ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿವೆ. ನಗರದಲ್ಲಿ ಪೊಲೀಸ್ ಬಿಗಿ ಭದ್ರತೆ ಹಾಕಲಾಗಿದೆ.
ಬಂದ್ ಹಿನ್ನೆಲೆಯಲ್ಲಿ ಹಳೇ ಬಸ್‌ನಿಲ್ದಾಣದಲ್ಲಿ ಬಸ್ ಸಂಚಾರ ಸ್ಥಗಿತಗೊಂಡು ಭಣಗುಡುತ್ತಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ನವಲಗುಂದದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ರಾಮನಗರದಲ್ಲಿ ಬಲವಂತ

ರಾಮನಗರದಲ್ಲಿ ಬಲವಂತ

ಕನ್ನಡ ಪರ ಸಂಘಟನೆಗಳು ಇಲ್ಲಿ ಬಲವಂತಾಗಿ ನಗರದ ವಾಣಿಜ್ಯ ವ್ಯವಹಾರಗಳನ್ನು ಮುಚ್ಚಿಸಿದ ಪ್ರಸಂಗ ವರದಿಯಾಗಿವೆ. ತರಕಾರಿ ಮಾರುಕಟ್ಟೆಯಲ್ಲಿ, ಅಂಗಡಿ ಮುಂಗಟ್ಟುಗಳು, ಬೀದಿ ಬದಿಯ ವ್ಯಾಪಾರಿಗಳ ಮುಂದೆ ರೋಷಾವೇಷ ವ್ಯಕ್ತಪಡಿಸಿದ ಕನ್ನಡ ಸಂಘಟನೆಗಳು ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸಿದ್ದಾರೆ.

ಕೊಂಚ ಅಸ್ತವ್ಯಸ್ತ

ಕೊಂಚ ಅಸ್ತವ್ಯಸ್ತ

ಅಪ್ಪಟ ಬಯಲು ಸೀಮೆಯ ನಗರಗಳಾದ ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಬಂದ್ ಬಿಸಿ ನೀರಸವಾಗಿದೆ. ಶಾಲೆಗಳು ತೆರೆದಿದ್ದವು, ವ್ಯಾಪಾರ ವಹಿವಾಟು ಎಂದಿನಂತೆ ಉತ್ತಮವಾಗಿ ನಡೆಯುತ್ತಿದ್ದವು. ಮುಖ್ಯ ರಸ್ತೆಗಳಲ್ಲಿ ಸರ್ಕಲ್ ಗಳಲ್ಲಿ ಕನ್ನಡ ಚಳವಳಿಗಾರರು ಕೆಲ ಹೊತ್ತು ಪ್ರತಿಭಟನೆ ನಡೆಸಿದ್ದರಿಂದಾಗಿ ಸಂಚಾರ ವ್ಯವಸ್ಥೆ ಕೊಂಚ ಅಸ್ತವ್ಯಸ್ತವಾಗಿದ್ದು ಬಿಟ್ಟರೆ, ಮಿಕ್ಯಾವ ತೊಂದರೆಗೂ ಆಗಲಿಲ್ಲ.

ಜನಜೀವನ ಶಾಂತ

ಜನಜೀವನ ಶಾಂತ

ಇನ್ನು, ಚಿತ್ರದುರ್ಗದಲ್ಲಿ ಬಂದೂ ಇಲ್ಲ ಪ್ರತಿಭಟನೆಯೂ ಇಲ್ಲ. ಇಲ್ಲಿನ ಜನರಿಗೆ ಮೊದಲೇ ಗಲಭೆ, ಗೌಜುಗಳೆಂದರೆ ಅಷ್ಟಕ್ಕಷ್ಟೇ. ಚಿತ್ರದುರ್ಗದ ಮಂದಿ ಶಾಂತಿ ಪ್ರಿಯರು. ಹಾಗಾಗಿ, ಇಲ್ಲಿ ಪ್ರತಿಭಟನೆಗಳು ನಡೆದರೂ ಅಷ್ಟೊಂದಾಗಿ ಭೀಕರವಾಗಿರುವುದಿಲ್ಲ. ಇನ್ನು, ಈ ಕರ್ನಾಟಕ ಬಂದ್ ಬಗ್ಗೆ ಹೇಳುವುದಾದರೆ, ಇದು ಅಂಥಾ ಪರಿಣಾಮಕಾರಿಯಾಗಿ ಇಲ್ಲ.

ಎಂದಿನಂತೆ ಜನಜೀವನ

ಎಂದಿನಂತೆ ಜನಜೀವನ

ಗಡಿ ಜಿಲ್ಲೆಯಾದ ಬಳ್ಳಾರಿಯಲ್ಲಿ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲಿ ಎಂದಿನಂತೆ ಶಾಲಾ ಕಾಲೇಜುಗಳು ಆರಂಭವಾಗಿದ್ದು, ದೈನಂದಿನ ಜನಜೀವನಕ್ಕೆ ಯಾವುದೇ ತೊಂದರೆಯಾಗಿಲ್ಲ. ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಕರ್ನಾಟಕದಿಂದ ಆಂಧ್ರದ ಕಡೆಗೆ ಹಾಗೂ ಆಂಧ್ರದ ಕಡೆಯಿಂದ ಕರ್ನಾಟಕಕ್ಕೆ ಬರುವ ಬಸ್ಸುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಬಸ್ ಸಂಚಾರ ವ್ಯತ್ಯಯವಿಲ್ಲ

ಬಸ್ ಸಂಚಾರ ವ್ಯತ್ಯಯವಿಲ್ಲ

ಇನ್ನು, ಶಿರಸಿಯಲ್ಲಿ ಬಂದ್ ಅಷ್ಟು ಪರಿಣಾಮಕಾರಿಯಾಗಿರಲಿಲ್ಲ. ಶಾಲೆ-ಕಾಲೇಜುಗಳಿಗೆ ರಜೆ ಇರಲಿಲ್ಲ. ಅಂಗಡಿ, ಹೋಟೆಲ್ ಗಳು ಎಂದಿನಂತೆ ತೆರೆದಿದ್ದವು. ಸರ್ಕಾರಿ ಬಸ್ ಗಳು, ಖಾಸಗಿ ಬಸ್ ಗಳು ಎಂದಿನಂತೆ ಸಂಚರಿಸುತ್ತಿದ್ದವು.

English summary
Call for Karnataka Bandh in state has recieves mixed reaction across various parts of the state. Kolar, Chikmagaluru, Ramanagar and some of the districts recive massive heat from the protesters. In Hubli, Navalagunda and some other parts in is avarage. But, in Chitradurga, Bellary, Davanagere no effect of Bandh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X