ಜೈನ ಸಮುದಾಯಕ್ಕೆ ಅಲ್ಪ ಸಂಖ್ಯಾತ ಪ್ರಮಾಣ ಪತ್ರ, ಸುತ್ತೋಲೆ
ಬೆಂಗಳೂರು, ಸೆಪ್ಟೆಂಬರ್ 17; ಕರ್ನಾಟಕದ ಸರ್ಕಾರ ಜೈನ ಸಮುದಾಯಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಪಮಾಣ ಪತ್ರವನ್ನು (Minority Certificate) ನೀಡುವ ಬಗ್ಗೆ ಪರಿಷ್ಕೃತ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಇನ್ನು ಮುಂದೆ ಪ್ರಮಾಣ ಪತ್ರ ನೀಡುವಾಗ ಈ ಅಂಶಗಳನ್ನು ಗಮನಿಸಬೇಕು ಎಂದು ಹೇಳಿದೆ.
ನಾಗರಾಜ, ಸರ್ಕಾರದ ಅಧೀನ ಕಾರ್ಯದರ್ಶಿ, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆ ಈ ಕುರಿತು ಸುತ್ತೋಲೆ ಹೊರಡಿಸಿದ್ದಾರೆ. ಸರ್ಕಾರದ ಸುತ್ತೋಲೆ ದಿನಾಂಕ 12/8/2022 ಉಲ್ಲೇಖ ಮಾಡಿದ್ದಾರೆ.

ಸುತ್ತೋಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮುಸ್ಲಿಂ, ಕ್ರಿಶ್ಚಿಯನ್, ಜೈನ, ಸಿಖ್, ಬೌದ್ಧರು ಮತ್ತು ಪಾರ್ಸಿ ಸಮುದಾಯದವರಿಗೆ ವಿವಿಧ ಕಾರ್ಯಕ್ರಮ/ ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಕಾರ್ಯಕ್ರಮ/ ಯೋಜನೆಗಳಲ್ಲಿ ಜೈನ ಫಲಾನುಭವಿಗಳು ಸಹ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಹೇಳಿದೆ. ಉಲ್ಲೇಖಿತ ಸುತ್ತೋಲೆಯಲ್ಲಿ ಜೈನ ದಿಗಂಬರ ಹಾಗೂ ಶ್ವೇತಾಂಬರ ಜೈನ ಸಮುದಾಯದವರಿಗೆ ಅಲ್ಪಸಂಖ್ಯಾತರ ಪಮಾಣ ಪತ್ರ/ ಜಾತಿ ಪಮಾಣ ಪತ್ರ ನೀಡುವ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಜಾರಿಗೊಳಿಸುತ್ತಿರುವ ಕಾರ್ಯಕ್ರಮ/ ಯೋಜನಗಳ ಪ್ರಯೋಜನ ಪಡೆಯಲು ಜೈನ ಸಮುದಾಯದವರು ಅಲ್ಪಸಂಖ್ಯಾತರ ಪ್ರಮಾಣ ಪತ್ರವನ್ನು ಕಂದಾಯ ಇಲಾಖೆಯ ತಹಶೀಲ್ದಾರ್ ಅವರಿಂದ ಪಡೆದು ನೀಡುತ್ತಿದ್ದಾರೆ. ಆದರೆ ಜೈನ ಸಮುದಾಯದವರಿಗೆ ಅಲ್ಪಸಂಖ್ಯಾತರ ಪಮಾಣ ಪತ್ರ ನೀಡುವ ಕುರಿತು ಉಂಟಾಗುತ್ತಿರುವ ಗೊಂದಲಗಳ ಬಗ್ಗೆ ಸರ್ಕಾರವು ಹಲವಾರು ದೂರುಗಳನ್ನು ಸ್ವೀಕರಿಸುತ್ತಿದೆ.
ಸರ್ಕಾರದ ಅಧಿಸೂಚನೆ ದಿನಾಂಕ 17/09/2007ರಂತೆ ಜೈನ ಸಮುದಾಯವನ್ನು ಅಲ್ಪಸಂಖ್ಯಾತರ ಸಮುದಾಯ ಎಂದು ರಾಜ್ಯ ಸರ್ಕಾರವು ಪರಿಗಣಿಸಿದೆ. ಶಾಲಾ ದಾಖಲಾತಿಗಳಲ್ಲಿ ಹಿಂದೂ ಎಂದು ನಮೂದಿಸಿರುವುದರಿಂದ, ಅಧಿಕೃತ ದಾಖಲೆಗಳು ಇಲ್ಲದಂತಾಗಿ ಅಲ್ಪಸಂಖ್ಯಾತರ ಪ್ರಮಾಣ ಪತ್ರ ಪಡೆಯಲು ತೊಂದರೆ ಉಂಟಾಗುತ್ತಿದೆ. ಆದ್ದರಿಂದ, ಇನ್ನು ಮುಂದೆ ಜೈನ ದಿಗಂಬರ ಹಾಗೂ ಶ್ವೇತಾಂಬರ ಜೈನ ಸಮುದಾಯದವರಿಗೆ ಅಲ್ಪಸಂಖ್ಯಾತರ ಪ್ರಮಾಣ ಪತ್ರ ನೀಡುವಾಗ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಲಾಗಿದೆ.
ಮಾರ್ಗಸೂಚಿಗಳು
* ಅಲ್ಪಸಂಖ್ಯಾತರ ಪ್ರಮಾಣ ಪತ್ರವು ಮತೀಯ ಅಲ್ಪಸಂಖ್ಯಾತರ ಸ್ಥಾನಮಾನಕ್ಕೆ ಸಂಬಂಧಿಸಿರುವುದರಿಂದಾಗಿ ಅಲ್ಪ ಸಂಖ್ಯಾತರ ಪ್ರಮಾಣ ಪತ್ರ ನೀಡಲು ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಅಗತ್ಯವಿರುವುದಿಲ್ಲ.
* ಶಾಲೆಯ ದಾಖಲೆಗಳಾದ Marks Card/ T.C ಯಲ್ಲಿ ನಮೂದಿಸಿರುವ ಹೆಸರು ಅಥವಾ ಉಪ ನಾಮದೊಂದಿಗೆ ಜೈನ್ ಎಂದು ಇದ್ದಲ್ಲಿ ಈ ದಾಖಲೆಗಳ ಆಧಾರದ ಮೇಲೆ ಅಲ್ಪಸಂಖ್ಯಾತರ ಪ್ರಮಾಣ ಪತ್ರವನ್ನು ತಹಶೀಲ್ದಾರ್ ಅವರು ನೀಡಬಹುದಾಗಿದೆ.
* ಶಾಲೆಯ ದಾಖಲೆಗಳಾದ Marks Card/ T.C ಯಲ್ಲಿ ನಮೂದಿಸಿರುವ ಹೆಸರು ಅಥವಾ ಉಪ ನಾಮದೊಂದಿಗೆ ಜೈನ್ ಎಂದು ಇಲ್ಲದಿದ್ದಲ್ಲಿ ಕರ್ನಾಟಕ ಸರ್ಕಾರದಿಂದ ನೀಡಿರುವ ಅಧಿಕೃತ ದಾಖಲೆಗಳಲ್ಲಿ ನಮೂದಿಸಿರುವ ಹೆಸರು ಮತ್ತು ಉಪನಾಮದೊಂದಿಗೆ ಜೈನ್ ಎಂದು ಇದ್ದಲ್ಲಿ ಈ ದಾಖಲೆಗಳ ಆಧಾರದ ಮೇಲೆ ಅಲ್ಪಸಂಖ್ಯಾತರ ಪ್ರಮಾಣ ಪತ್ರವನ್ನು ತಹಶೀಲ್ದಾರ್ ಅವರು ನೀಡಬಹುದಾಗಿದೆ.
* ಜೈನ್ ದಿಗಂಬರ ಸಮುದಾಯದವರಾಗಿದ್ದರೆ ಈ ಮೇಲ್ಕಂಡ ಕ್ರಮ ಸಂಖ್ಯೆ (1) ಮತ್ತು (2)ರ ದಾಖಲೆಗಳು ಲಭ್ಯವಿಲ್ಲದಿದ್ದಲ್ಲಿ ಅಭ್ಯರ್ಥಿಯು ರೂ.20/- ಗಳ Self Declared Affidavit (Notary Attested) ನೊಂದಿಗೆ ನೋಂದಾಯಿತ Karnataka Jain Association (R), Bengaluru. ಅವರಿಂದ ಜಾತಿಯ ಬಗ್ಗೆ ಶಿಫಾರಸ್ಸು ಪತ್ರ ನೀಡಿದ್ದಲ್ಲಿ ತಹಶೀಲ್ದಾರ್ ಅವರು ಅಲ್ಪಸಂಖ್ಯಾತರ ಪ್ರಮಾಣ ಪತ್ರ ನೀಡಬಹುದು.
* ಜೈನ್ ಶ್ವೇತಾಂಬರ ಸಮುದಾಯದವರಾಗಿದ್ದರೆ ಈ ಮೇಲ್ಕಂಡ ಕ್ರಮ ಸಂಖ್ಯೆ (1) ಮತ್ತು (2) ರ ದಾಖಲೆಗಳು ಲಭ್ಯವಿಲ್ಲದಿದ್ದಲ್ಲಿ ಅಭ್ಯರ್ಥಿಯು ರೂ. 20 ಗಳ Self Declared Affidavit (Notary Attested) ನೊಂದಿಗೆ ಈ ಕೆಳಕಂಡ ನೋಂದಾಯಿತ ಸಂಘ ಸಂಸ್ಥೆಗಳಿಂದ ಶಿಫಾರಸ್ಸು ಪತ್ರ ನೀಡಿದ್ದಲ್ಲಿ ತಹಶೀಲ್ದಾರ್ ಅವರು ಅಲ್ಪ ಸಂಖ್ಯಾತರ ಪ್ರಮಾಣ ಪತ್ರ ನೀಡಬಹುದು.
* ತಾತ್ಕಾಲಿಕವಾಗಿ ಮೇಲ್ಕಂಡ 4 ಸಂಸ್ಥೆಗಳಿಂದ ಶಿಫಾರಸ್ಸು ಪತ್ರಗಳನ್ನು ಪಡೆದು ಅಲ್ಪಸಂಖ್ಯಾತರ ಪ್ರಮಾಣ ಪತ್ರವನ್ನು (Minority Certificate) ನೀಡುವುದು ಮುಂದಿನ ದಿನಗಳಲ್ಲಿ ನೋಂದಾಯಿತ ಸಂಘಗಳನ್ನು ಪರಿಷ್ಕರಿಸಿದಾಗ, ಆ ಸಂಸ್ಥೆಗಳನ್ನು ಪರಿಗಣಿಸಬಹುದಾಗಿದೆ.
* ಕರ್ನಾಟಕ ರಾಜ್ಯಕ್ಕೆ ಹಿಂದಿ ಭಾಷೆ ಮಾತನಾಡುವ ಹಾಗೂ ವಲಸೆ ಬಂದಿರುವ ಜೈನ್ ಸಮುದಾಯದವರಿಗೆ ಅಲ್ಪಸಂಖ್ಯಾತರ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಸದರಿಯವರ ದಾಖಲೆಗಳು ಹಿಂದಿ ಭಾಷೆಯಲ್ಲಿದ್ದರೆ ಅಂತಹವರ ದಾಖಲೆಗಳ ಅನುವಾದಿತ ಪತಿಯನ್ನು ರೂ.20 ಗಳ Self Declared Affidavit (Notary attested) ಯಿಂದ ಪ್ರಮಾಣಿಕರಿಸಿ ನೀಡಿದರೆ, ಸದರಿಯವರಿಗೆ ಅಲ್ಪಸಂಖ್ಯಾತರ ಪ್ರಮಾಣ ಪತ್ರ ನೀಡುವ ಕುರಿತು ಸಕ್ಷಮ ಪ್ರಾಧಿಕಾರವು ಪರಿಗಣಿಸಬಹುದು.
-
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
BMTC: ಉಚಿತ ಬಸ್ ಪ್ರಯಾಣದ ಹೊರೆ, ಆರ್ಥಿಕ ಸಂಕಷ್ಟದಲ್ಲಿ ಬಿಎಂಟಿಸಿ; ಸರ್ಕಾರದಿಂದ ₹850 ಕೋಟಿ ಪಾವತಿ ವಿಳಂಬ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ











Click it and Unblock the Notifications