ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಣ ಸಚಿವರ ಸಣ್ಣ ಐಡಿಯಾಗೆ ಶಿಕ್ಷಣ ಇಲಾಖೆ ಭ್ರಷ್ಟಾಚಾರ ಬಾಲ ಕಟ್ !

|
Google Oneindia Kannada News

ಬೆಂಗಳೂರು, ಮಾರ್ಚ್‌ 21: ಹೊಸ ಶಾಲೆಗಳಿಗೆ ಅನ್ವಯವಾಗುವ ಸುರಕ್ಷತಾ ನಿಯಮಗಳನ್ನು ಹಳೇ ಶಾಲೆಗಳು ಪಾಲಿಸಬೇಕೆಂಬ ನಿಯಮ ಅನುಷ್ಠಾನ ನೆಪದಲ್ಲಿ ಖಾಸಗಿ ರಾಶಾಲೆಗಳ ಸುಲಿಗೆಗೆ ನಾಂದಿ ಹಾಡಿತ್ತು. ಕೋವಿಡ್ ಸಂಕಷ್ಟ ಕಾಲದಲ್ಲಿ ಶಾಲಾ ಪರವಾನಗಿ ನವೀಕರಣಕ್ಕೂ ಲಂಚ ಕೊಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು. ಈ ಸಂಗತಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಗಮನಕ್ಕೆ ಹೋಗಿತ್ತು. ಅವರು ಮಾಡಿದ ಸಣ್ಣ ತಂತ್ರದಿಂದ ಶಿಕ್ಷಣ ಇಲಾಖೆ ಅಧಿಕಾರಿಗಳ ವಸೂಲಿ ಬಾಜಿ ದಂಧೆಗೆ ಸೈಲೆಂಟ್ ಆಗಿ ಬ್ರೇಕ್ ಬಿದ್ದಿದೆ. ಸುರೇಶ್ ಕುಮಾರ್ ಅವರ ಕಾರ್ಯವನ್ನು ನೆನೆದು ಖಾಸಗಿ ಶಿಕ್ಷಣ ಸಂಸ್ಥೆಗಳು ಸಂತಸಗೊಂಡಿವೆ.

ಕೋವಿಡ್ ನಿಂದ ಸುಮಾರು ಒಂದು ವರ್ಷದಿಂದ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ತೆರೆದಿಲ್ಲ. ಆರನೇ ತರಗತಿಯಿಂದ 10 ನೇ ತರಗತಿ ವರೆಗಿನ ಮಕ್ಕಳಿಗೆ ಅಷ್ಟೇ ಶಾಲೆ ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಶಾಲೆಗಳು ತೆರೆಯಲು ಆರಂಭವಾಗುತ್ತಿದ್ದಂತೆ ರಾಜ್ಯದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹೊಸ ನಿಯಮವೊಂದು ಪ್ರಸ್ತಾಪಿಸಿದ್ದರು. ಮಕ್ಕಳ ಸುರಕ್ಷತೆ ಕುರಿತು ಸುಪ್ರೀಂಕೋರ್ಟ್ ನ ತೀರ್ಪು ನೆಪ ಮುಂದಿಟ್ಟುಕೊಂಡು ಹೊಸ ನಿಯಮಗಳನ್ನು ಬರೀ ಖಾಸಗಿ ಶಾಲೆಗಳು ಪಾಲಿಸವುಂತೆ ಆದೇಶ ಹೊರಡಿಸಿದ್ದರು.

ಶಾಲಾ ಶುಲ್ಕದ ವಿಚಾರವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಚಿವ ಸುರೇಶ್ ಕುಮಾರ್ ಕೊಟ್ಟ ಅಂತಿಮ ಎಚ್ಚರಿಕೆ ಏನು?ಶಾಲಾ ಶುಲ್ಕದ ವಿಚಾರವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಚಿವ ಸುರೇಶ್ ಕುಮಾರ್ ಕೊಟ್ಟ ಅಂತಿಮ ಎಚ್ಚರಿಕೆ ಏನು?

ಅದರ ಪ್ರಕಾರ ಪ್ರತಿಯೊಂದು ಖಾಸಗಿ ಶಾಲಾ ಕಟ್ಟಡ ಗುಣಮಟ್ಟ ಕುರಿತು ಲೋಕೋಯಪೋಗಿ ಇಲಾಖೆ ಅಧಿಕಾರಿಗಳು ಪ್ರಮಾಣ ಪತ್ರ ನೀಡಬೇಕು. ಜತೆಗೆ ಅಗ್ನಿ ಸುರಕ್ಷತೆ ನಿಯಮ ಪಾಲನೆ ಜತೆಗೆ ಅಗ್ನಿ ಶಾಮಕ ದಳದಿಂದ ನಿರಪೇಕ್ಷಣಾ ಪ್ರಮಾಣ ಪತ್ರ ಹೊಂದಿರಬೇಕು. ಈ ಸುರಕ್ಷತಾ ಪ್ರಮಾಣ ಪತ್ರ ಇಲ್ಲದಿದ್ದರೆ ಶಾಲಾ ಪರವಾನಗಿ ನವೀಕರಣ ಮಾಡಲ್ಲ ಎಂಬ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿ ಮಾಡಲಾಗಿತ್ತು.

Minister Suresh Kumars idea cuts Corruption in education department

ಈ ನಿಯಮಗಳು ಸರ್ಕಾರಿ ಶಾಲೆಗಳಿಗೆ ಅನ್ವಯಿಸುವುದಿಲ್ಲ. ಬದಲಿಗೆ ಖಾಸಗಿ ಶಾಲೆಗಳಿಗೆ ಮಾತ್ರ. ರಾಜ್ಯದಲ್ಲಿ ಮಕ್ಕಳ ಹಕ್ಕುಗಳ ಸುರಕ್ಷತೆ ಬಗ್ಗೆ ಈಗಾಗಲೇ ನ್ಯಾಯಾಲಯದ ನಿರ್ದೇಶನ ಪಾಲನೆ ಮಾಡಲಾಗಿದೆ. ಹೊಸದಾಗಿ ಆರಂಭವಾಗುವ ಶಾಲೆಗಳು ಪಾಲನೆ ಮಾಡಬೇಕಾಗಿರುವ ನಿಯಮಗಳು ಹಳೇ ಶಾಲೆಗಳು ಪಾಲಿಸುವಂತಹ ಸಂದಿಗ್ಧ ಪರಿಸ್ಥಿತಿ ಅಧಿಕಾರಿಗಳು ನಿರ್ಮಿಸಿದ್ದರು. ಈ ನಿಯಮಗಳನ್ನು ಪಾಲಿಸಲಾಗದ ಶಾಲೆಗಳ ಬಳಿ ಶಿಕ್ಷಣ ಇಲಾಖೆ ಅಧಿಕಾರಿಗಳು ಸುಲಿಗೆಗೆ ಇಳಿದರು. ಶಾಲಾ ಪರವಾನಗಿ ನವೀಕರಣಕ್ಕಾಗಿ ಸಾವಿರಾರು ರೂಪಾಯಿ ಪೀಕುವ ದಂಧೆ ಶುರುವಾಗಿತ್ತು. ಈ ಬಗ್ಗೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಉಲ್ಲೇಖಿಸಿ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದರು.

ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ; ವಿದ್ಯಾರ್ಥಿಗಳು 8 ಕಿ.ಮೀ. ನಡೆಯುವುದು ತಪ್ಪಿತು!ಶಿಕ್ಷಣ ಸಚಿವ ಸುರೇಶ್ ಕುಮಾರ್ ಮನವಿ; ವಿದ್ಯಾರ್ಥಿಗಳು 8 ಕಿ.ಮೀ. ನಡೆಯುವುದು ತಪ್ಪಿತು!

ಇದನ್ನು ಗಂಭೀರವಾಗಿ ಪರಿಗಣಿಸಿದ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಈ ವರ್ಷ ಯಾವುದೇ ಮಾನದಂಡಗಳನ್ನು ನಿಗದಿ ಮಾಡದೇ ಶಾಲೆಗಳು ನಡೆಯುವಂತೆ ಅವಕಾಶ ಕಲ್ಪಿಸಿದ್ದಾರೆ. ಮಾತ್ರವಲ್ಲ, ಅಗ್ನಿ ಸುರಕ್ಷತೆ, ಕಟ್ಟಡ ಸುರಕ್ಷತೆ ಕುರಿತು ಪರಿಶೀಲನಾ ಸಮಿತಿ ರಚಿಸಿದ್ದಾರೆ. ವಿಧಾನ ಪರಿಷತ್ ಸದಸ್ಯರನ್ನು ಒಳಗೊಂಡ ಈ ಪರಿಶೀಲನಾ ಸಮಿತಿ ನೆರೆ ರಾಜ್ಯಗಳಲ್ಲಿರುವ ಶಾಲಾ ಸುರಕ್ಷತಾ ನಿಯಮಗಳ ಬಗ್ಗೆ ಅಧ್ಯಯನ ಮಾಡಲಿದೆ. ಈ ಕರಿತು ನೀಡಲಿರುವ ಶಿಫಾರಸುಗಳನ್ನು ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಪಾಲಿಸಬೇಕಾಗುತ್ತದೆ.

Minister Suresh Kumars idea cuts Corruption in education department

ಸುರಕ್ಷತೆ ಹೆಸರಿನಲ್ಲಿ ಮಾಡುತ್ತಿದ್ದ ಸುಲಿಗೆ
ಸುರೇಶ್ ಕುಮಾರ್ ಅವರು ಒಂದು ತಿಂಗಳ ಹಿಂದೆ ಪರಿಶೀಲನಾ ಸಮಿತಿ ರಚನೆಗೆ ಆದೇಶಿದಿದ್ದರಿಂದ ಶಿಕ್ಷಣ ಇಲಾಖೆ ವಸೂಲಿಬಾಜಿಗೆ ಪೂರ್ಣ ಬ್ರೇಕ್ ಬಿದ್ದಿದೆ. ಆರ್‌. ಆರ್. ನವೀಕರಣ, ಅಗ್ನಿ ಸುರಕ್ಷತೆ ಹೆಸರಿನಲ್ಲಿ ಮಾಡುತ್ತಿದ್ದ ಸುಲಿಗೆ ಸದ್ದಿಲ್ಲದೇ ಸ್ಥಗಿತಗೊಂಡಿದೆ. ಕರೋನಾ ಸಂಕಷ್ಟಕ್ಕೆ ನಲುಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅಧಿಕಾರಿಗಳು ನೀಡುತ್ತಿದ್ದ ಕಿರುಕುಳ ಸಂಪೂರ್ಣ ನಿಂತು ಹೋಗಿದೆ.

Minister Suresh Kumars idea cuts Corruption in education department

ಹೊಸ ಶಾಲಾ ಕಟ್ಟಡಗಳು ಅನುಸರಿಸಬೇಕಾದ ಸುರಕ್ಷತಾ ನಿಯಮ ಹಳೇ ಶಾಲೆಗಳು ಪಾಲಿಸಬೇಕೆಂಬ ಷರತ್ತುಗಳನ್ನು ಅಧಿಕಾರಿಗಳು ವಿಧಿಸಿದ್ದರು. ಇದು ಖಾಸಗಿ ಶಾಲೆಗಳಿಗೆ ದೊಡ್ಡ ಪೆಟ್ಟು ನೀಡಿತ್ತು. ಆರ್‌ಟಿಐ ಕಾರ್ಯಕರ್ತರು ಹಾಗೂ ಅಧಿಕಾರಿಗಳು ಶಾಮೀಲಾಗಿ ಹೂಡಿದ್ದ ಷಡ್ಯಂತ್ರವನ್ನು ಶಿಕ್ಷಣ ಸಚಿವರು ತಪ್ಪಿಸಿದ್ದಾರೆ. ಇಲ್ಲದಿದ್ದರೆ, ಸುರಕ್ಷತಾ ನಿಯಮಗಳ ಮಾನದಂಡ ಪಾಲನೆ ಹೆಸರಿನಲ್ಲಿ ಸುಲಿಗೆ ಮಾಡುತ್ತಿದ್ದರು ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಣ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

Minister Suresh Kumars idea cuts Corruption in education department

ಇನ್ನು ಶಾಲೆಗಳ ಕಟ್ಟಡ ಸುರಕ್ಷತೆ ಕುರಿತು ಪರಿಶೀಲನಾ ಸಮಿತಿ ರಚನೆ ಮಾಡಿ ಅಧ್ಯಯನಕ್ಕೆ ಅವಕಾಶ ನೀಡಿರುವ ಶಿಕ್ಷಣ ಸಚಿವರ ಕ್ರಮ ಶ್ಲಾಘನೀಯ. ಶಿಕ್ಷಣ ನೀತಿಗಳು ಸಮಾನತೆಯಿಂದ ಕೂಡಿರಬೇಕು. ಶಾಲಾ ಕಟ್ಟಡ ಸುರಕ್ಷತೆ ನಿಯಮ ಖಾಸಗಿ ಹಾಗೂ ಸರ್ಕಾರಿ ಶಾಲೆಗಳಿಗೆ ಏಕ ರೂಪವಾಗಿರಬೇಕು. ಈ ನಿಟ್ಟಿನಲ್ಲಿ ಪರಿಶೀಲನಾ ಸಮಿತಿ ರಚನೆಯಾಗಿದ್ದು, ಮೊದಲ ಸಭೆ ಕೂಡ ಮಾಡಿದೆ. ಕೋವಿಡ್ ಕಾರಣದಿಂದ ಕಟ್ಟಡ ಸುರಕ್ಷತಾ ನಿಯಮ ಪಾಲನೆ ಬಗ್ಗೆ ಸಡಿಲಿಕೆ ಮಾಡಲಾಗಿದೆ. ಈ ವಿಚಾರದಲ್ಲಿ ಶಿಕ್ಷಣ ಸಚಿವರು ಮಹತ್ವದ ತೀರ್ಮಾನ ಕೈಗೊಂಡರು ಎಂದು ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.

English summary
Create a review committee to study the safety rules of private schools Suresh Kumar has taken great strides know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X