ನೂತನ ಸಚಿವ ಸುರೇಶ್ ಅಂಗಡಿಯಿಂದ ಸಾರ್ವಜನಿಕರಿಗೆ ವಿಶೇಷ ಮನವಿ

ಬೆಂಗಳೂರು, ಜೂನ್ 01: ಹೊಸದಾಗಿ ಕೇಂದ್ರ ಮಂತ್ರಿಯಾಗಿ ಆಯ್ಕೆ ಆಗಿರುವ ಬಿಜೆಪಿಯ ಸುರೇಶ್ ಅಂಗಡಿ ಅವರು ಸಾರ್ವಜನಿಕರಲ್ಲಿ ಮನವಿಯೊಂದನ್ನು ಮಾಡಿದ್ದಾರೆ.

ಸಚಿವ ಸುರೇಶ್ ಅಂಗಡಿ ಅವರ ಹುಟ್ಟುಹಬ್ಬ ಇಂದು ಇದ್ದು ತಮ್ಮನ್ನು ಅಭಿನಂದಿಸಲು ಬರುವ ಪಕ್ಷದ ಮುಖಂಡರಾಗಲಿ, ಕಾರ್ಯಕರ್ತರಾಗಲಿ, ಸಾರ್ವಜನಿಕರಾಗಲಿ ಹೂಗುಚ್ಛವನ್ನು ತರಬೇಡಿರೆಂದು ಅವರು ಮನವಿ ಮಾಡಿದ್ದಾರೆ.

ಹೂಗುಚ್ಛದ ಬದಲಾಗಿ ನೋಟ್ ಪುಸ್ತಕವನ್ನು ತರಬೇಕೆಂದು ಸುರೇಶ್ ಅಂಗಡಿ ಅವರು ಮನವಿ ಮಾಡಿದ್ದಾರೆ. ನೋಟ್ ಪುಸ್ತಕಗಳನ್ನು ಒಟ್ಟು ಮಾಡಿ ಅವನ್ನು ಶಾಲೆಗಳಿಗೆ ವಿತರಿಸಿ ಮಕ್ಕಳ ನಗುವಿನಲ್ಲಿ ಆಶೀರ್ವಾದ ಪಡೆಯುವುದಾಗಿ ಸಚಿವರು ಹೇಳಿದ್ದಾರೆ.

Minister Suresh Angadi request not to bring flower bouquet to him

ಇದೇ ರೀತಿಯ ಪರಿಸರ ಸ್ನೇಹಿ ಮನವಿಯನ್ನು ಕೆಲವು ದಿನಗಳ ಹಿಂದಷ್ಟೆ ಸಚಿವ ಸದಾನಂದಗೌಡ ಅವರು ಮಾಡಿದ್ದರು. ಅವರು ಸಹ ಹೂಗುಚ್ಛವನ್ನು ಯಾರೂ ಭೇಟಿ ಸಮಯ ತರಬೇಡಿ ಅದರ ಬದಲಾಗಿ ಗಿಡವನ್ನು ನೀಡಿ ಎಂದು ಮನವಿ ಮಾಡಿದ್ದರು.

ಸದಾನಂದಗೌಡ ಅವರ ಮನವಿ ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದ ಬಿಜೆಪಿ ಉಪಾಧ್ಯಕ್ಷೆ ತೇಜಸ್ವಿನಿ ಅನಂತ್‌ಕುಮಾರ್, ಹಾಗೆ ಸಂಗ್ರವಾದ ಗಿಡಗಳನ್ನು ನಾವು ಭಾನುವಾರ ದಿನದಂದು ನೆಡುತ್ತೇವೆ ಎಂದು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+