• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ; ವಿದೇಶಕ್ಕೆ ಹೋಗಿ ಬಂದವರ ಸನಿಹ ಹೋಗದಿರಲು ಎಚ್ಚರಿಕೆ

|

ಬೆಂಗಳೂರು, ಮಾರ್ಚ್ 5: ಕರ್ನಾಟಕದಲ್ಲಿ ಕೊರೊನಾ ವೈರಸ್ 695 ಶಂಕಿತ ರೋಗಿಗಳ ತಪಾಸಣೆ ಮಾಡಿದ್ದೇವೆ. 14 ದಿನಗಳ ಕಾಲ ಹೊರ ದೇಶಕ್ಕೆ ಹೋಗಿ ಬಂದವರು ಯಾರ ಸಂಪರ್ಕಕ್ಕೂ ಹೋಗಬಾರದು. ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ಗುರುವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ವಿದೇಶದಿಂದ ಯಾರೇ ಬಂದರೂ ಅವರ ತಪಾಸಣೆ ಮಾಡುತ್ತಿದ್ದೇವೆ. 28 ದಿನಗಳ ಕಾಲ ನಿಗಾ ಇಟ್ಟಿದ್ದ 225 ಜನ ಅವಧಿ ಮುಗಿದಿದೆ. ಮನೆಯಲ್ಲಿ 53 ಜನರ ಮೇಲೆ ನಿಗಾ ಇದಲಾಗಿದೆ. ಕರ್ನಾಟಕದಲ್ಲಿ 5 ಮಂದಿ ಒಳರೋಗಿಗಳಾಗಿ ಸೇರಿದ್ದಾರೆ. ಇದುವರೆಗೆ 321 ಜನರ ರಕ್ತ ಪರೀಕ್ಷೆಗೊಳಪಡಿಸಲಾಗಿದೆ. ಇದರಲ್ಲಿ 273 ಜನಕ್ಕೆ ನೆಗಟೀವ್ ಬಂದಿದೆ. ಎಲ್ಲಾ ಅಂತರಾಷ್ಟ್ರೀಯ ವಿಮಾನದ ಪ್ರಯಾಣಿಕರನ್ನ ತಪಾಸಣೆ ಮಾಡುತ್ತಿದ್ದೇವೆ' ಎಂದು ತಿಳಿಸಿದರು.

ಡೆಡ್ಲಿ ಕೊರೊನಾ ಹತ್ತಿಕ್ಕಲು ಸಫಲವಾಯಿತಾ ಡ್ರ್ಯಾಗನ್ ಚೀನಾ...?

'ತುಂಬಾ ಜನರು ನಮಗೆ ಸೋಂಕು ಇದೆಯಾ ಅಂತಾ ಭಯ ಭೀತರಾಗುತ್ತಿದ್ದಾರೆ. ಆದ್ರೆ ಸೋಂಕು ಹರಡಿರುವ 77 ದೇಶಗಳಿಂದ ಬಂದಿರುವವರು ಹಾಗೂ ಅವರ ಜೊತೆ ಸಂಪರ್ಕವಿರುವವರಷ್ಟೆ ತಪಾಸಣೆಗೆ ಒಳಪಡಬೇಕು. ಜ್ವರ ಕೆಮ್ಮು ಉಸಿರಾತದ ತೊಂದರೆ ಇರುವವರು ಹತ್ತಿರದ ವೈದ್ಯರನ್ನ ಸಂಪರ್ಕಿಸಿ. 104 ಸಹಾಯವಾಣಿಗೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಬಹುದು' ಎಂದರು.

'14 ದಿನಗಳ ಕಾಲ ಹೊರ ದೇಶಕ್ಕೆ ಹೋಗಿ ಬಂದವರು ಯಾರ ಸಂಪರ್ಕಕ್ಕೂ ಹೋಗಬಾರದು. 14 ದಿನಗಳ ನಂತರ ಯಾವುದೇ ಯಾವುದೇ ಕೊರೊನಾ ಲಕ್ಷಣಗಳು ಇಲ್ಲದಿದ್ರೆ ಸಂಪರ್ಕ ಹೊಂದಬಹುದು' ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಆರೋಗ್ಯ ಇಲಾಖೆ ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ, ನಿರ್ದೇಶಕರಾದ ಪಾಟೀಲ್ ಓಂ ಪ್ರಕಾಶ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

English summary
Minister Sudhakar Press Meet About Coronavirus In Karnataka. 695 patients check by health department ahead of coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X