ಬಿಜೆಪಿಯವರು ಹೆಣದ ಮೇಲೆ ಹಣ ಮಾಡಿದ್ದಾರೆ- ಯತ್ನಾಳ್ ಆರೋಪಕ್ಕೆ ಪ್ರಿಯಾಂಕ್ ಖರ್ಗೆ ಕಿಡಿ
ಹುಬ್ಬಳ್ಳಿ,ಡಿಸೆಂಬರ್ 27: ಕೋವಿಡ್ ಕಾಲದಲ್ಲಿ ಬಿಜೆಪಿಯವರು ಹಣದ ಮೇಲೆ ಹೆಣ ಮಾಡಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಆರೋಪಕ್ಕೆ ವಿಜಯೇಂದ್ರ ಉತ್ತರ ಕೊಡಬೇಕು ಎಂದು ಸಚಿವ ಪ್ರೀಯಾಂಕ್ ಖರ್ಗೆ ಅವರು ಹೇಳಿದರು.
ಈ ಕುರಿತು ಸುದ್ದಿಗೋಷ್ಟಿ ನಡೆಸಿದ ಅವರು, ವಿಜಯೇಂದ್ರ ಇವಾಗ ಯತೀಂದ್ರ ಮೇಲೆ ಶ್ಯಾಡೋ ಸಿಎಮ್ ಅಂತಾ ಆರೋಪ ಮಾಡಿದರು. ಕಳೆದ ಸರ್ಕಾರದಲ್ಲಿ ಶ್ಯಾಡೋ ಸಿಎಂ ಯಾರಿದ್ರು? ಯತ್ನಾಳ್ ದಾಖಲೆ ಬಿಡುಗಡೆ ಮಾಡ್ತೀವಿ ಅಂತಾರೆ. ಯತ್ನಾಳ್ ಅವರಲ್ಲಿ ನಾನು ಕರ್ನಾಟಕ ಜನರ ಪರ ಮನವಿ ಮಾಡ್ತೀನಿ, ನೀವು ದಾಖಲೆ ಕೊಡಿ. ನೀವು ಪ್ರಮಾಣಿಕರು ಅಂತಾ ಗೊತ್ತಿದೆ ಎಂದರು.

ಯಾವದೇ ದಾಖಲೆ ಇದ್ರೆ ನಾವು ಜಸ್ಟೀಸ್ ಮೈಕಲ್ ಕುನೋ ಅವರ ಸಮಿತಿ ಇದೆ. ಅವರಿಗೆ ದಾಖಲೆ ಕೊಡಿ, 40 ಸಾವಿರ ಕೋಟಿ ಹಗರಣ ಇದೆ, ಹೆಣದ ಮೇಲೆ ಹಣ ಮಾಡಿದ್ದಾರೆ ಎಂದ್ರೆ ಮನುಷ್ಯತ್ವ ಅಲ್ಲ. ಇದು ಕಾಂಗ್ರೆಸ್ ನಾಯಕರ ಆರೋಪ ಅಲ್ಲ. ಮಾಜಿ, ಕೇಂದ್ರ ಸಚಿವರು,ಹಾಲಿ ಶಾಸಕರ ಆರೋಪ. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಉತ್ತರ ಕೊಡಬೇಕು ಎಂದು ಹೇಳಿದರು.
ಕೋವಿಡ್ ಭ್ರಷ್ಟಚಾರದಲ್ಲಿ ಕೇಂದ್ರಕ್ಕೂ ಪಾಲ ಹೋಗಿರಬಹುದು. 40 ಪರ್ಸೆಂಟ್ ಸರ್ಕಾರ ಬಿರುದು ಬಂದಿರೋದು ಬಿಜೆಪಿಯವರಿಂದ, ಕೇಂದ್ರ ನಾಯಕರು, ರಾಜ್ಯ ನಾಯಕರಿಗೂ ಪಾಲು ಹೋಗಿದೆ ಎಂದು ಹೇಳಿದರು.
ಬ್ರಿಟಿಷರ ಬೂಟು ನೆಕ್ಕೋರು ಅನ್ನೋ ಹರಿಪ್ರಸಾದ್ ಹೇಳಿಕೆ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಅದರಲ್ಲಿ ತಪ್ಪೇನಿದೆ ಎಂದ ಪ್ರಿಯಾಂಕ್ ಖರ್ಗೆ ಅವರು ಪರೋಕ್ಷವಾಗಿ ಹರಿಪ್ರಸಾದ್ ಮಾತಿಗೆ ಧ್ವನಿಗೂಡಿಸಿದ್ದಾರೆ. ಕ್ಷಮಾ ಪತ್ರ ಬರೆದಿದ್ದು ಯಾರು, ಬ್ರಿಟಿಷರ ಬಳಿ ಪೆನ್ಶನ್ ತಗೊಂಡಿದ್ದು ಯಾರು? ಬಿಜೆಪಿ ಮತ್ತು RSS ಗೆ ಸ್ವಂತ ಇತಿಹಾಸ ಇಲ್ಲ.
ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಕೊಡುಗೆ ಇಲ್ಲ, ಅವರು ಸೃಷ್ಟಿಸಬೇಕಾಗಿದೆ, ಹಾಗಾಗಿ ವಾಟ್ಸಪ್ ಯುನಿವರ್ಸಿಟಿಯಲ್ಲಿ ಸುಳ್ಳು ಹಬ್ಬಸ್ತಾರೆ ಎಂದು ಕಿಡಿಕಾರಿದ ಅವರು, ಬಿಜೆಪಿಯವರು ಇತ್ತೀಚೆಗೆ ಹುಟ್ಟಿರೋದು. ಇವಾಗ ಯಾರ ಯಾರ ಬಿಜೆಪಿ ಶಾಸಕರು, ಸಂಸದರು ಪೂರ್ವಜರು ಕಾಂಗ್ರೆಸ್ ಗೆ ವೋಟ್ ಹಾಲಿರುತ್ತಾರೆಲ್ಲ. ಸಾವರ್ಕರ್ ಗೆ ಹೇಗೆ ವೀರ ಅನ್ನೋ ಬಿರುದು ಬಂತು. ಇದಕ್ಕೆಲ್ಲ ಉತ್ತರ ಕೊಡಲ್ಲ ಎಂದರು.
ಕಳೆದ ಬಾರಿ ರಾಜ್ಯದಲ್ಲಿ ಹಿಂದುತ್ವದ ಸರ್ಕಾರ ಇತ್ತು. ಇವಾಗ ಇರೋದು ಸಂವಿಧಾನದ ಸರ್ಕಾರ ಇದೆ, ದೇಶ ನಡಿತಿರೋದು ಭಗವದ್ಗೀತೆ ಮೇಲೆ ಅಲ್ಲ,ಕುರಾನ್ ಮೇಲೆ ಅಲ್ಲ,ಬೈಬಲ್ ಮೇಲೆ ಅಲ್ಲ. ದೇಶ ನಡಿತಿರೋದು ಸಂವಿಧಾನದ ಮೇಲೆ, ಯಾರ ಏನಾದರೂ ಅನ್ಲಿ ಕರ್ನಾಟಕದಲ್ಲಿ ನಡಿತಿರೋದು ಸಂವಿಧಾನದ ಸರ್ಕಾರ. ಸರ್ಕಾರಗಳು ನಡೆಯೋದು ಸಂವಿಧಾನ ಮೇಲೆ, ಬಸವ ತತ್ವ, ಅಂಬೇಡ್ಕರ್ ತತ್ವ ಮೇಲೆ ಸರ್ಕಾರ ನಡೀತಿದೆ. ಹಿಂದಿನ ಸರ್ಕಾರ ಹಿಂದೂತ್ವದ ಮೇಲೆ ನಡೀತಿತ್ತು/ ಪೀಠದ ಮೇಲೆ ಕುಳಿತು ಕಾಗೇರಿ ನಾನು RSS ನವರು ಎಂದಿದ್ರು.
ಕೋವಿಡ್ ಭ್ರಷ್ಟಾಚಾರದಲ್ಲಿ ಕೇಂದ್ರ ನಾಯಕರ ಮೌನವಾಗಿರುವ ವಿಚಾರವಾಗಿ ಮಾತನಾಡಿ, ಅವರಿಗೂ ಕೂಡ ಪಾಲು ಹೋಗಿರಬೇಕಲ್ಲ. ಬಿಜೆಪಿಗೆ 40% ಸರ್ಕಾರ ಅಂತ ಆರೋಪ ಬಂದಿದ್ದು, ನಮ್ಮಿಂದಲ್ಲ ಅವರ ಪಕ್ಷದವರಿಂದಲೇ, ಗುತ್ತಿಗೆದಾರರ ಸಂಘದಿಂದ ಬಂದಿದೆ ಅಲ್ವಾ? ನಾವು ಭ್ರಷ್ಟಾಚಾರ ಆಗಿದೆ ಅಂತ ಅಂದ್ರು ಅಂದಿನ ಸ್ಪೀಕರ್ ಸದನದಲ್ಲಿ ಇದನ್ನ ಮುಂದುವರಿಸಬಾರದು ಇದು ಕಾನೂನು ಬಾಹಿರ ಅಂತ ಪತ್ರ ಬರೆದರು.ಯಾವತ್ತಾದ್ರೂ ಪಬ್ಲಿಕ್ ಅಕೌಂಟ್ಸ್ ಕಮಿಟಿಗೆ ಸ್ಪೀಕರ್ ಪತ್ರ ಬರೆದದ್ದು ಕೇಳಿದ್ದೀರಾ ಎಂದು ಪ್ರಶ್ನಿಸಿದರು.












Click it and Unblock the Notifications