ಉರಿಗೌಡ, ನಂಜೇಗೌಡ ಸಿನಿಮಾ ಕೈ ಬಿಟ್ಟ ಮುನಿರತ್ನ: ನಿರ್ಮಾಲಾನಂದ ಶ್ರೀಗಳು ಕೊಟ್ಟ ಎಚ್ಚರಿಕೆ ಏನು?
ಉರಿಗೌಡ ಹಾಗೂ ನಂಜೇಗೌಡ ಸಿನಿಮಾ ವಿವಾದ ಸೃಷ್ಠಿಯಾಗಿದ್ದು, ಶ್ರೀಗಳ ಕೊಟ್ಟ ಸೂಚನೆ ಮೇರೆಗೆ ಆ ಸಿನಿಮಾ ಮಾಡುವುದಿಲ್ಲ ಎಂದು ಮುನಿರತ್ನ ತಿಳಿಸಿದ್ದಾರೆ
ಬೆಂಗಳೂರು, ಮಾರ್ಚ್20: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಟಿಪ್ಪುವನ್ನ ಕೊಂದದ್ದು ಉರಿಗೌಡ ಹಾಗೂ ನಂಜೇಗೌಡ ಎಂಬ ವಿಚಾರ ರಾಜ್ಯ ರಾಜಕರಣದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ಇತ್ತ ರಾಜ್ಯ ರಾಜಕೀಯದಲ್ಲಿ ವಿವಾದ ಹುಟ್ಟು ಹಾಕಿರುವ ಉರಿಗೌಡ, ನಂಜೇಗೌಡ ಅವರುಗಳನ್ನು ಆಧರಿಸಿದ ಸಿನಿಮಾ ಮಾಡಲು ನಿರ್ಮಾಪಕ ಹಾಗೂ ಹಾಲಿ ಸಚಿವ ಮುನಿರತ್ನ ಟೈಟಲ್ ರಿಜಿಸ್ಟರ್ಗೆ ಅರ್ಜಿ ಹಾಕಿದ ಬೆನ್ನಲ್ಲೆ ಇದೀಗ ಸಿನಿಮಾದ ಮುಹೂರ್ತ ದಿನಾಂಕವನ್ನೂ ಘೋಷಿಸಿದ್ರು. ಆದರೆ ನಿರ್ಮಾಲಾನಂದ ಶ್ರೀಗಳು ಭೇಟಿಗೆ ಬುಲಾವ್ ನೀಡಿದ್ರು. ಇನ್ನೂ ಮಂಡ್ಯದಲ್ಲಿ ಶ್ರೀಗಳನ್ನ ಭೇಟಿ ಮಾಡಿ ಚರ್ಚೆ ನಡೆಸಿದ ಮುನಿರತ್ನ ಸಿನಿಮಾ ಮಾಡುವುದನ್ನ ಕೈ ಬಿಟ್ಟಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸಿನಿಮಾದ ಪೋಸ್ಟರ್ ಹಂಚಿಕೊಂಡಿರುವ ಮುನಿರತ್ನ, ಮೇ 18 ರಂದು ಉರಿಗೌಡ, ನಂಜೇಗೌಡ ಸಿನಿಮಾ ಮುಹೂರ್ತ ಮಾಡಲಾಗುವುದು ಎಂದು ನಿರ್ಧರಿಸಿದ್ರು. ಆದರೆ, ನಿರ್ಮಾಲಾನಂದ ಶ್ರೀಗಳು ಪದೇ ಪದೇ ಉರಿಗೌಡ ನಂಜೇಗೌಡ ಬಗ್ಗೆ ಮಾತ್ನಾಡ್ಬೇಡಿ, ಯಾರ ಮನಸ್ಸು ನೋಯಿಸುವ ಉದ್ದೇಶ ಮಾಡಬೇಡಿ ಎಂದು ತಾಕೀತು ಮಾಡಿದ್ದಾರೆ.
ಇನ್ನೂ ಇದೀಗ ಸಿನಿಮಾದ ಪೋಸ್ಟರ್ ಹಂಚಿಕೊಂಡ ಬೆನ್ನಲ್ಲೇ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ್ದು, ಸಚಿವ ಮುನಿರತ್ನ ಅವರಿಗೆ ನಿರ್ಮಾಲಾನಂದ ಶ್ರೀಗಳು ಸೂಚನೆ ನೀಡಿದ ಬೆನ್ನೆಲ್ಲೇ ಉರಿಗೌಡ ನಂಜೇಗೌಡ ಸಿನಿಮಾ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಇನ್ನೂ ನಿರ್ಮಾಲಾನಂದ ಶ್ರೀ ಗಳು ಭೇಟಿ ಮಾಡಿದ ಬಳಿಕ ಮಾತನಾಡಿದ ಅವರು, ಮೇ 14 ಚಿತ್ರೀಕರಣದ ಮೂರ್ತ ಮಾಡಬೇಕು ಅಂದುಕೊಂಡಿದ್ದೆ. ಮೈಸೂರು ಸಂಸ್ಥಾನಕ್ಕೆ ಸಂಬಂಧಿಸಿದಂತೆ ಬಹಳ ದೊಡ್ಡ ಸಿನಿಮಾ ಮಾಡಬೇಕು ಅಂತ ಪ್ಲಾನ್ ಮಾಡಿದ್ವಿ, ಟಿಪ್ಪು ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಚರ್ಚೆಯಾಗಿತ್ತು. ಕುಮಾರಸ್ವಾಮಿ ಅವರು ಮುನಿರತ್ನನಿಗೆ ಅಶ್ವತ್ಥ್ ನಾರಾಯಣ್ ಸಿನಿಮಾ ಮಾಡೋಕೆ ಹೇಳಿರ ಬೇಕು ಅಂದ್ರು. ಅಲ್ಲಿಯವರೆಗೆ ನನಗೆ ಆಲೋಚನೆ ಇರಲಿಲ್ಲ ಎಂದು ಹೇಳಿದರು.

ಉರಿಗೌಡ ನಂಜೇಗೌಡ ವಿಚಾರದಲ್ಲಿ ಒಂದಷ್ಟು ದಾಖಲೆ ಸಿಗುತ್ತಿವೆ ಒಂದಷ್ಟು ಸಿಗುತ್ತಿಲ್ಲ. ನನಗ ಚಿತ್ರ ಮಾಡಬೇಕು ಅನ್ನಿಸಿತು. ನಿರ್ಮಾಲಾನಂದ ಸ್ವಾಮೀಜಿ ಅವರ ಜೊತೆ ಚರ್ಚೆ ಮಾಡಿದೆ.
ಆಗ ನನಗೆ ಅನ್ನಿಸಿತು, ಯಾರಿಗೂ ಮನಸ್ಸು ನೋಯಿಸಿ ಸಿನಿಮಾ ಮಾಡಬಾರದು. ಸಿನಿಮಾ ಮಾಡಲು ಕಥೆಗಳು ತುಂಬಾ ಸಿಗುತ್ತದೆ. ಸ್ವಾಮೀಜಿ ಅವರಿಗೆ ಹೇಳಿದ್ದೇನೆ, ಯಾರ ಮನಸ್ಸು ನೋಯಿಸುವ ಉದ್ದೇಶ ನನ್ನದಲ್ಲ. ನಾನು ಈ ಸಿನಿಮಾ ಇಲ್ಲಿಯೇ ಕೈ ಬಿಡುತ್ತೇನೆ ಎಂದು ಸ್ಪಷ್ಟ ಪಡಿಸಿದರು.
ಇನ್ನೂ ನಿರ್ಮಾಲಾನಂದ ಶ್ರೀಗಳು ನೈಜತೆ ಇದ್ದರೆ ಅದರ ಬಗ್ಗೆ ಯೋಜನೆ ಮಾಡಿ ಎಂದರು. ಗೊಂದಲ ಇರುವಾಗ ಯಾವುದು ಸೂಕ್ತ ಎಂದು ಕೇಳಿದ್ರು, ಶ್ರೀಗಳ ಮಾತಿನಂತೆ ನಾನು ಸಿನಿಮಾ ಮಾಡಲ್ಲ ಎಂದು ಮುನಿರತ್ನ ಸ್ಪಷ್ಟಪಡಿಸಿದರು.
ಉರಿಗೌಡ ಹಾಗೂ ನಂಜೇಗೌಡ ಟಿಪ್ಪುವನ್ನ ಕೊಂದಿದ್ದಾರೆ ಎಂಬ ಕುರಿತು ಬಿಜೆಪಿ ನಾಯಕರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತ ಪಡಿಸಿದ್ದು, ಇದು ಒಕ್ಕಲಿಗರಿಗೆ ಮಾಡಿದ ಅವಮಾನ ಎಂದು ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ರು.
ಇನ್ನೂ ಚುನಾವಣೆ ಹೊತ್ತಲಿ ಟಿಪ್ಪು ಅನ್ನು ಕೊಂದಿದ್ದು ಉರಿಗೌಡ ಹಾಗೂ ನಂಜೇಗೌಡ ಎಂಬ ವಾದವನ್ನು ಬಿಜೆಪಿ ಹುಟ್ಟು ಹಾಕಿದೆ. ಚುನಾವಣೆ ಸಮಯದಲ್ಲಿ ಒಕ್ಕಲಿಗ ಸಮುದಾಯವನ್ನು ಒಡೆಯಲು ಉರಿಗೌಡ-ನಂಜೇಗೌಡ ಪಾತ್ರಗಳನ್ನು ತಂದಿದ್ದಾರೆ ಎಂದು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನಾಯಕರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮುನಿರತ್ನ ಭೇಟಿ ಬಳಿಕ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಶ್ರೀಗಳು ಮಾತನಾಡಿ, ಸಚಿವ ಮುನಿರತ್ನ ಅವರ ಉರಿಗೌಡ, ದೊಡ್ಡ ನಂಜೇಗೌಡ ಚಿತ್ರ ನಿರ್ಮಾಣದ ವಿಚಾರದಲ್ಲಿ ಸಚಿವ ಮಾತುಕತೆ ನಡೆಸಿದ್ದೇನೆ. ಒಕ್ಕಲಿಗ ಜನಾಂಗದ ಅಸ್ಮಿತೆಯಿಂದಾಗಿ ಈ ಚಿತ್ರ ನಿರ್ಮಾಣ ಮಾಡದಂತೆ ಹೇಳಿದ್ದೇನೆ. ಈ ಚಿತ್ರ ನಿರ್ಮಾಣಕ್ಕೆ ಸರಿಯಾದ ಐತಿಹ್ಯ ದಾಖಲೆಗಳಿಲ್ಲ. ಇದರಿಂದ ನಮ್ಮ ಸಮಾಜದ ಅಸ್ಮಿತೆಗೆ ಧಕ್ಕೆಯಾಗಲಿದೆ ಎಂದು ತಿಳಿಸಿದ್ದೇನೆ. ಈ ವಿಚಾರದಲ್ಲಿ ಸಚಿವ ಮುನಿರತ್ನ ಕೂಡ ಚಿತ್ರ ನಿರ್ಮಾಣದಿಂದ ಹಿಂದೆ ಸರಿಯುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.












Click it and Unblock the Notifications