ಡಿ.ಕೆ.ಶಿವಕುಮಾರ್ ಸದ್ಗುಣ ಗೊತ್ತಿತ್ತು, ಆದರೆ ಅವರ ದೊಡ್ಡಗುಣ ಗೊತ್ತಿರಲಿಲ್ಲ

ಬೆಂಗಳೂರು, ಏಪ್ರಿಲ್ 14: ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನಡುವೆ 'ಕೊರೊನಾ ಮಾತಿನ ಚಕಮಕಿ' ನಡೆಯುತ್ತಿದೆ.

ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಸಚಿವ ಸುಧಾಕರ್, "ನನಗೆ ಇದುವರೆಗೆ ಡಿ.ಕೆ.ಶಿವಕುಮಾರ್ ಅವರ ಸದ್ಗುಣಗಳು ಮಾತ್ರ ಗೊತ್ತಿತ್ತು. ಆದರೆ, ಅವರ ದೊಡ್ಡ ಗುಣ ಗೊತ್ತಿರಲಿಲ್ಲ" ಎಂದು ಹೇಳಿದರು.

ಕೆಲವು ದಿನಗಳ ಹಿಂದೆ, ಕುಟುಂಬದ ಸದಸ್ಯರ ಜೊತೆ, ಸ್ವಿಮ್ಮಿಂಗ್ ಪೂಲ್ ನಲ್ಲಿರುವ ಚಿತ್ರವನ್ನು ಸುಧಾಕರ್, ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದರು. ಈ ಬಗ್ಗೆ, ಡಿಕೆಶಿ ಟೀಕಿಸಿದ್ದರು.

Minister Dr.Sudhakar Reply To KPCC President DK Shivakumar Over His Swimming Pool Remark

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಧಾಕರ್, ನಾನು ಡಿ.ಕೆ.ಶಿವಕುಮಾರ್ ಅವರ ಹಾಗೇ ಕೀಳು ಮಟ್ಟದ ರಾಜಕಾರಣ ಮಾಡುವುದಿಲ್ಲ. ನನ್ನ ಜವಾಬ್ದಾರಿ ನನಗೆ ಅರಿತಿದೆ"ಎಂದು ಹೇಳಿದರು.

"ಇಡೀ ಜಗತ್ತು ಆರೋಗ್ಯ ಬಿಕ್ಕಟ್ಟಿನಲ್ಲಿರುವಾಗ ಕೊರೊನಾ ಉಸ್ತುವಾರಿ ವಹಿಸಿಕೊಂಡಿರುವವರು ಈಜುಕೊಳದಲ್ಲಿ ಕಾಲಹರಣ ಮಾಡುತ್ತಿದ್ದಾರೆ" ಎಂದು ಡಿಕೆಶಿ ಆರೋಪಿಸಿದ್ದರು.

"ಇದೊಂದು ನೈತಿಕತೆಯ ವಿಚಾರ. ಕೂಡಲೇ, ಸಚಿವ ಸುಧಾಕರ್ ಸ್ವಇಚ್ಚೆಯಿಂದ ರಾಜೀನಾಮೆ ನೀಡಲಿ" ಎಂದು ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+