ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಭಸ್ಮಾಸುರ ಇದ್ದಂಗೆ, ಕೈ ಇಟ್ರೆ ಭಸ್ಮ; ಶ್ರೀರಾಮುಲು

|
Google Oneindia Kannada News

ಬೆಂಗಳೂರು, ಮೇ. 09: 'ಬಿಜೆಪಿಯವರು ಸೀಳು ನಾಯಿ' ಇದ್ದಂಗೆ ಅಂತ ಹೇಳಿರುವ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಾರಿಗೆ ಸಚಿವ ಬಿ. ಶ್ರೀರಾಮುಲು ಹರಿಹಾಯ್ದಿದ್ದಾರೆ.

Recommended Video

ಎಲ್ಲರನ್ನ ತುಳಿಯೋದೇ ಸಿದ್ದು ಕೆಲಸ !! | Oneindia Kannada

"ಸಿದ್ದರಾಮಯ್ಯ ನಾಲಿಗೆ ಸೀಳು ನಾಯಿ ಥರ. ಅವರ ಬಾಯಲ್ಲಿ ಬರೋ ಮಾತಿಗೆ ಬೆಲೆಯಿಲ್ಲ. ಸಿದ್ದರಾಮಯ್ಯ ಭಸ್ಮಾಸುರ ಇದ್ದಹಾಗೆ. ಸಿದ್ದರಾಮಯ್ಯ ಕೈ ಇಟ್ಟವರೆಲ್ಲರೂ ಭಸ್ಮವಾಗುತ್ತಾರೆ" ಎಂದು ಟೀಕಿಸಿದ್ದಾರೆ.

ಕೊಪ್ಪಳದ ಪಂಪ ಸರೋವರದಲ್ಲಿ ಶ್ರೀ ವಿಜಯಲಕ್ಷ್ಮಿ ದೇವಸ್ಥಾನ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ಸಿದ್ದರಾಮಯ್ಯ ವಿವಾದಾತ್ಮಕ ಹೇಳಿಕೆಗೆ ತಿರುಗೇಟು ನೀಡಿದರು.

Minister B Sriramulu slams Congress Leader Siddaramaiah on his comments on BJP Leaders

"ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರ ಥರ ಮಾತನಾಡುತ್ತಾರೆ. ವಾಸ್ತವದಲ್ಲಿ ಸಿದ್ದರಾಮಯ್ಯ ನಾಲಿಗೆ ಸೀಳು ನಾಯಿ ಇದ್ದಹಾಗೆ. ಸಿದ್ದರಾಮಯ್ಯ ಎರಡು ತಲೆ ಹಾವು ಇದ್ದಂತೆ. ಅವರಿಗೆ ಖುರ್ಚಿ ಬಿಟ್ಟರೆ ಬೇರೇ ಏನೂ ಕಾಣುತ್ತಿಲ್ಲ" ಎಂದು ಸಚಿವರು ಟೀಕಿಸಿದರು.

"ಬಿಜೆಪಿ, ಹಿಂದುತ್ವ ಬಿಟ್ಟರೆ, ಬೇರೆ ಏನೂ ಕಾಣುತ್ತಿಲ್ಲ. ಸಿದ್ದರಾಮಯ್ಯ ಭಸ್ಮಾಸ್ಮುರ ಇದ್ದಹಾಗೆ ಯಾರ ತಲೆ ಇಟ್ಟರೂ ಅವರ ಕಥೆ ಮುಗೀತು. ಈಗಾಗಲೇ ಖರ್ಗೆಯನ್ನು ಮುಗಿಸಿದ್ದಾರೆ. ಡಾ. ಜಿ. ಪರಮೇಶ್ವರ ಅವರನ್ನು ಮುಗಿಸಿದ್ದಾರೆ. ಶೀಘ್ರದಲ್ಲಿಯೇ ಡಿ. ಕೆ. ಶಿವಕುಮಾರ್ ಅವರನ್ನು ಮುಗಿಸಲಿದ್ದಾರೆ" ಎಂದು ಭವಿಷ್ಯ ನುಡಿದರು.

Minister B Sriramulu slams Congress Leader Siddaramaiah on his comments on BJP Leaders

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ನೀವು ಎದುರಾಳಿಯಾಗುವಿರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, "ಬಾದಾಮಿಯಲ್ಲಿ ಚಿಮ್ಮಕಕಟ್ಟಿಯನ್ನು ಹೊರ ಹಾಕಿದರು. ಸಿ. ಎಂ. ಇಬ್ರಾಹಿಂರನ್ನು ಹೊರ ಹಾಕಿದರು. ದೇವೇಗೌಡರನ್ನು ಸೋಲಿಸಿದರು. ಸಿದ್ದರಾಮಯ್ಯ ವರ್ಚಸ್ಸಿಗೆ ತಕ್ಕಂತೆ ಮಾತನಾಡಬೇಕು. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರಿಗೆ ಸರಿಯಾದ ಪಾಠ ಕಲಿಸಲಿದ್ದಾರೆ. ಸಿದ್ದರಾಮಯ್ಯ ವರ್ಚಸ್ಸು ಬಾದಾಮಿಯಲ್ಲಿ ಕ್ಷೀಣಿಸಿದ್ದು, ಮುಂದೆ ಅವರು ಸೋಲು ಅನುಭವಿಸಲಿದ್ದಾರೆ" ಎಂದು ಶ್ರೀರಾಮುಲು ಹೇಳಿದರು.

English summary
Transport Minister B Sriramulu slams Congress Leader Siddaramaiah on his controversial comments on BJP Leaders. He said BJP leaders are dogs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X