''ಕೋವಿಡ್ ಕಿಟ್: ಒಂದೇ ಒಂದು ರೂಪಾಯಿ ಭ್ರಷ್ಟಾಚಾರ ಆಗಿಲ್ಲ"

ಬೆಂಗಳೂರು, ಮೇ 30: ಪಿಪಿಇ ಹಾಗೂ ಕೋವಿಡ್- 19 ರ ಟೆಸ್ಟಿಂಗ್ ಕಿಟ್ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ವಿಪಕ್ಷಗಳಿಗೆ ಆರೋಗ್ಯ ಸಚಿವ ಬಿ ಶ್ರೀರಾಮುಲು ತಿರುಗೇಟು ನೀಡಿದ್ದಾರೆ.

ಪಿಪಿಇ ಕಿಟ್ ಸೇರಿ ಆರೋಗ್ಯ ಪರಿಕರಗಳ ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಎಲ್ಲವೂ ಸುಳ್ಳು. ಕೋವಿಡ್ ಕಿಟ್ ವಿಚಾರದಲ್ಲಿ ಒಂದೇ ಒಂದು ರೂಪಾಯಿ ಭ್ರಷ್ಟಾಚಾರ ಆಗಿಲ್ಲ ಎಂದಿದ್ದಾರೆ.

ಕಾಂಗ್ರೆಸ್ ಸೇರಿ ವಿಪಕ್ಷದ ನಾಯಕರಿಗೆ ಮಾಡಕ್ಕೇನೂ ಕೆಲಸ ಇಲ್ಲ, ಕೆಲಸ ಇಲ್ಲದ ಕಾಂಗ್ರೆಸ್ ನವ್ರು ಏನೇನೋ ಆರೋಪ ಮಾಡ್ತಿದ್ದಾರೆ. ಸರ್ಕಾರ ಎಲ್ಲ ಖರೀದಿಯನ್ನೂ ಪಾರದರ್ಶಕವಾಗಿಯೇ ನಡೆಸಿದೆ ಎಂದು ಸಚಿವ ರಾಮುಲು ಸ್ಪಷ್ಟನೆ ನೀಡಿದ್ದಾರೆ.

Minister B Sriramulu refutes corruption in PPE, Covid19 test kit purchase

ಪಿಪಿಇ ಹಾಗೂ ಕೋವಿಡ್- 19 ರ ಟೆಸ್ಟಿಂಗ್ ಕಿಟ್ ಖರೀದಿಯಲ್ಲಿನ ಭ್ರಷ್ಟಾಚಾರವನ್ನು ಸ್ವತಂತ್ರ ಉನ್ನತ ನ್ಯಾಯಾಂಗ ತನಿಖೆಗೊಳಪಡಿಸಬೇಕು ಎಂದು ಕಾಂಗ್ರೆಸ್, ಸಿಪಿಐಎಂ ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಕೋವಿಡ್- 19 ರ ಹೋರಾಟದಲ್ಲಿ ತೊಡಗಿದ ಆರೋಗ್ಯ ಸಿಬ್ಬಂದಿಗೆ ಕೊಡಲಾಗುವ ಸುರಕ್ಷಾ ಸಾಮಾಗ್ರಿಗಳಾದ ಪಿಪಿಇ ಕಿಟ್, ಕರೋನಾ ಟೆಸ್ಟಿಂಗ್ ಕಿಟ್, ಸ್ಯಾನಿಟೈಸರ್ ಗಳು ಕಳಪೆ ಗುಣಮಟ್ಟದ್ದಾಗಿದ್ದು ಮತ್ತು ಅಂತಹ ಕಳಪೆ ಸಾಮಗ್ರಿಗಳ ಖರೀದಿಸುವಲ್ಲಿಯೂ ದುಬಾರಿ ಬೆಲೆ ನೀಡಿ ಖರೀದಿಸಿ, ರಾಜ್ಯ ಸರಕಾರ ಅಕ್ರಮ ಎಸಗಿದೆ ಎಂದು ಎಚ್ ಕೆ ಪಾಟೀಲರ ನೇತೃತ್ವದ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ದೂರು ಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+