ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಕೆಶಿ ಯಾರ ಯಾರ ಸಿಡಿ ಮಾಡ್ತಿದ್ದಾರೋ .? ಇನ್ನು ಯಾವ ಸಿಡಿ,ಸಿನಿಮಾ,ಟ್ರೈಲರ್ ಇದೆ ಅವರನೇ ಕೇಳ್ಬೇಕು: ಅಶ್ವತ್ಥ ನಾರಾಯಣ್

ಕಾಂಗ್ರೆಸ್ ಬ್ಲಾಕ್ ಮೇಲರ್ ಪಕ್ಷ, ಸಿಡಿ ಪಕ್ಷ ಅಂತಾರೆ.ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷರು ಅದರಲ್ಲಿ ಪರಿಣಿತರು ಎಂದು ಸಚಿವ ಅಶ್ವತ್ಥ ನಾರಾಯಣ್ ಕಿಡಿಕಾರಿದರು.

|
Google Oneindia Kannada News

ರಾಮನಗರ,ಫೆಬ್ರವರಿ3: ಶಿವಕುಮಾರ್ ಯಾರ ಯಾರ ಸಿಡಿ ಮಾಡ್ತಿದ್ದಾರೋ ನನಗೇನು ಗೊತ್ತು.?ಇನ್ನು ಯಾವ ಯಾವ ಸಿನಿಮಾ ಇದೆ, ಟ್ರೈಲರ್ ಇದೆ, ಟೀಸರ್ ಇದೆ, ಯಾವಾಗ ಬಿಡುಗಡೆ ಆಗುತ್ತೆ ಅಂತ ಡಿ ಕೆ ಶಿವಕುಮಾರ್ ಕೇಳಬೇಕು ಎಂದು ಸಚಿವ ಅಶ್ವತ್ಥ ನಾರಾಯಣ್ ಹೇಳಿದರು.

ಈ ಕುರಿತು ರಾಮನಗರದಲ್ಲಿ ಶುಕ್ರವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಇದೊಂದು ಕೆಟ್ಟ ಬೆಳವಣಿಗೆ. ರಾಜಕಾರಣಗಳನ್ನ ಟ್ರ್ಯಾಪ್, ಫ್ಯಾಬ್ರಿಕೇಟ್ ಮಾಡಲಾಗ್ತಿದೆ. ಇಂತಹದ್ದೊಂದು ವ್ಯವಸ್ಥಿತ ನೆಟ್ವರ್ಕ್ ಬೆಳೆದಿದೆ. ಸಮಾಜದಲ್ಲಿ ಗೊಂದಲ ಸೃಷ್ಠಿಮಾಡಿ, ಚುನಾಯಿತ ಪ್ರತಿನಿಧಿಗಳ ಬದುಕು ಹಾಳು‌ಮಾಡ್ತಿದ್ದಾರೆ. ಇಂತಹ ರಾಕೇಟ್ ಗಳನ್ನ ನಡೆಸುವ ನಾಯಕರ ಬಂಡವಾಳ ಬಯಲಾಗಬೇಕು. ಈ ಬಗ್ಗೆ ತನಿಖೆ ಅಗತ್ಯ ಇದೆ. ರಮೇಶ್ ಜಾರಕಿಹೋಳಿ ಧೈರ್ಯ ತೋರಿ ಈ ಬಗ್ಗೆ ದೂರು ನೀಡಿದ್ದಾರೆ. ಈಗ ಕಾಂಗ್ರೆಸ್ ನಾಯಕರಿಗೆ ಆತಂಕ ಸೃಷ್ಠಿಯಾಗ್ತಿದೆ. ಈ ಬಗ್ಗೆ ತನಿಖೆ ಆಗಲಿ ಅಂತ ಕಾಂಗ್ರೆಸ್ ನ ಯಾವೊಬ್ಬ ನಾಯಕರೂ ಹೇಳುತ್ತಿಲ್ಲ ಎಂದು ಡಿ ಕೆ ಶಿವಕುಮಾರ್ ವಿರುದ್ದ ವಾಗ್ದಾಳಿ ನಡೆಸಿದರು.

 ಶೀಘ್ರದಲ್ಲೇ ರಾಮನಗರ ಜಿಲ್ಲೆಯ 2,500 ಕೆರೆಗಳಿಗೆ ನೀರು ತುಂಬಿಸಲಿದ್ದೇವೆ: ಅಶ್ವತ್ಥ್‌ ನಾರಾಯಣ್ ಶೀಘ್ರದಲ್ಲೇ ರಾಮನಗರ ಜಿಲ್ಲೆಯ 2,500 ಕೆರೆಗಳಿಗೆ ನೀರು ತುಂಬಿಸಲಿದ್ದೇವೆ: ಅಶ್ವತ್ಥ್‌ ನಾರಾಯಣ್

ಸಿಡಿ ಪ್ರಕರಣ ಕುರಿತು ರಮೇಶ್ ಜಾರಕಿಹೋಳಿ ಅಮಿಶ್ ಶಾ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಬ್ಲಾಕ್ ಮೇಲರ್ ಪಕ್ಷ, ಸಿಡಿ ಪಕ್ಷ ಅಂತಾರೆ.ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷರು ಅದರಲ್ಲಿ ಪರಿಣಿತರು. ಎಲ್ಲರ ಸಿಡಿ ಮಾಡಿಸ್ತಿದ್ದಾರೆ ಅಂತ ರಮೇಶ್ ಜಾರಕಿಹೋಳಿ ಆರೋಪಿಸಿದ್ದಾರೆ. ಅವರ ಆರೋಪವನ್ನ ಎಲ್ಲರೂ ಒಪ್ಪುವಂತಹದ್ದು. ಇಂತಹ ಕೆಲಸಗಳಲ್ಲಿ ಡಿಕೆಶಿ ಹೆಸರುವಾಸಿಯಾಗಿದ್ದಾರೆ, ಕಾಂಗ್ರೆಸ್ ನಲ್ಲಿ ಇಂತಹ ನಾಯಕರು ಮತ್ತಷ್ಟು ಜನ ಇದ್ದಾರೆ. ಇದರ ಬಗ್ಗೆ ರಮೇಶ್ ಜಾರಕಿಹೋಳಿ ದೂರು ನೀಡಿದ್ದಾರೆ. ಇದರ ಮೇಲೆ ತನಿಖೆ ಆದ್ರೆ ಒಳ್ಳೆಯದು.ಇಂತಹ ಜಾಲ ಇರೋದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕಿಡಿಕಾರಿದರು.

Minister Ashwath Narayan Slams DK Shivakumar

ತಮ್ಮ ವಂಶ ಪಾರಂಪರಿಕವಾಗಿ ರಾಮನಗರ ಜಿಲ್ಲೆಯಲ್ಲಿ ಸ್ವಾರ್ಥಕ್ಕಾಗಿ ರಾಜಕೀಯ ಮಾಡಿದ್ದಾರೆ.ಅಭಿವೃದ್ಧಿ ಕಾರ್ಯಗಳನ್ನ ಮಾಡದೇ ಜನರನ್ನ ಮೋಡಿ ಮಾಡಿಕೊಂಡು ಬಂದಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಹಾಗೂ ಹೆಚ್ ಡಿ ಕುಮಾರಸ್ವಾಮಿ ಅವರ ವಿರುದ್ದ ಸಚಿವ ಅಶ್ವತ್ಥ ನಾರಾಯಣ್ ಕಿಡಿಕಾರಿದರು. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಗೆ ತಕ್ಕ ಪಾಠ ಆಗಬೇಕು ಎಂದು ಬಿಜೆಪಿ ವಿಜಯ ಸಂಕಲ್ಪ ಹಾಗೂ ಶಕ್ತಿಕೇಂದ್ರ ಪ್ರಮುಖರ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಸಚಿವ ಅಶ್ವಥ್ ನಾರಾಯಣ್ ಕಿವಿಮಾತು‌ ಹೇಳಿದರು.

ಪ್ರತಿಯೊಂದು ಮನೆ ಮನೆಗೂ ತಲುಪಿ ಜನಪರ ಕೆಲಸ ಬಗ್ಗೆ ತಿಳಿಸಬೇಕು. ಏನೂ ಕೆಲಸ ಮಾಡದ ಕಾಂಗ್ರೆಸ್ ಪಕ್ಷದವರು ಬೊಬ್ಬೆ ಹೊಡೆಯುವ ಕೆಲಸ ಮಾಡ್ತಿದ್ದಾರೆ. ಕುಡಿಯುವ ನೀರಿಗಾಗಿ ಈ ಜಿಲ್ಲೆ ಆಹಾಕಾರ ಇದೆ. ಆದರೆ ಬಿಜೆಪಿ ಸರ್ಕಾರ ಪ್ರತಿಯೊಂದು ಮನೆ ಮನೆಗೆ ನೀರು ಕೊಡುವ ಕೆಲಸ ಮಾಡ್ತಿದೆ. ಇಡೀ ಕರ್ನಾಟಕ ರಾಜ್ಯದಲ್ಲಿ ಗದಗ ಜಿಲ್ಲೆ ಬಿಟ್ರೆ ಜಲಜೀವನ್ ಮಿಷನ್ ಮೂಲಕ ಮನೆ ಮನೆಗೆ ನೀರು ನೀಡಲಾಗಿದೆ. ರಾಮನಗರದಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಆಗಿದೆ ಎಂದು ಹೇಳಿದರು.

English summary
Ashwattha Narayana said that It would be good if the CD issue is investigated
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X