ವಾರದಲ್ಲಿ ಒಂದೆರಡು ದಿನ ಹಾಲು ಖರೀದಿ ಸ್ಥಗಿತ?

ಬೆಂಗಳೂರು, ಮೇ 28; ಲಾಕ್‌ಡೌನ್ ಘೋಷಣೆ ಮಾಡಿದ ಬಳಿಕ ನಂದಿನಿ ಹಾಲಿನ ಮಾರಾಟ ಕುಸಿದಿದೆ. ಆದರೆ ಒಕ್ಕೂಟಗಳಿಗೆ ಬರುತ್ತಿರುವ ಹಾಲಿನ ಪ್ರಮಾಣ ಹೆಚ್ಚಾಗಿದೆ. ವಾರದಲ್ಲಿ ಒಂದೆರಡು ದಿನ ಹಾಲು ಖರೀದಿ ಸ್ಥಗಿತಗೊಳಿಸಲು ಚಿಂತನೆ ನಡೆದಿದೆ.

ಕರ್ನಾಟಕದಲ್ಲಿ ಲಾಕ್‌ಡೌನ್ ಘೋಷಣೆ ಬಳಿಕ ಹೋಟೆಲ್‌ಗಳಲ್ಲಿ ಹಾಲಿನ ಬಳಕೆ ತಗ್ಗಿದೆ. ಶುಭ ಸಮಾರಂಭಗಳಿಗೆ ಕಡಿವಾಣ ಬಿದ್ದಿದ್ದು, ಹಾಲು ಖರೀದಿ ಕಡಿಮೆಯಾಗಿದೆ.

ಮೇ ಮೊದಲ ವಾರದಲ್ಲಿ ದಿನಕ್ಕೆ ಸುಮಾರು 70 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಕಳೆದ ವಾರ ಇದು 82 ಲಕ್ಷ ಲೀಟರ್‌ಗೆ ಏರಿಕೆಯಾಗಿತ್ತು. ಈ ವಾರ 88 ಲಕ್ಷ ಲೀಟರ್ ಸಂಗ್ರಹವಾಗುತ್ತಿದೆ.

Milk Unions May Stop Purchase One Or Two Days

ಹಾಲಿನ ಪ್ಯಾಕೇಟ್ ಮಾರಾಟ, ಬೆಣ್ಣೆ, ತುಪ್ಪ, ಹಾಲಿನ ಉತ್ಪನ್ನಗಳು ಸೇರಿ ಸುಮಾರು 53 ಲಕ್ಷ ಲೀಟರ್ ಹಾಲು ಬಳಕೆಯಾಗುತ್ತದೆ. ಉಳಿದ ಹಾಲನ್ನು ಪುಡಿಯಾಗಿ ಪರಿವರ್ತನೆ ಮಾಡಲಾಗುತ್ತದೆ. ಆದರೆ ಈಗ ಅದರ ಮಿತಿಯೂ ಮೀರಿದ್ದು ಒಕ್ಕೂಟಗಳಿಗೆ ತಲೆನೋವಾಗಿದೆ.

ಹಾಲಿನ ಸಂಗ್ರಹ ಹೆಚ್ಚಿರುವುದರಿಂದ ವಾರದಲ್ಲಿ ಖರೀದಿಗೆ ಒಂದೆರಡು ದಿನ ಬಿಡುವು ನೀಡಲು ತೀರ್ಮಾನಿಸಲಾಗಿದೆ. ಲಾಕ್‌ಡೌನ್ ಘೋಷಣೆ ಬಳಿಕ ಹಾಲಿನ ಪುಡಿಯ ಸಂಗ್ರಹವೂ ಹೆಚ್ಚಾಗಿದೆ. ಆದರೆ ಬೇಡಿಕೆ ಕಡಿಮೆಯಾಗಿದೆ.

ಹಾಲನ್ನು ಖರೀದಿ ಮಾಡುವ ದರವನ್ನು ಜೂನ್ 1 ರಿಂದ 1.50 ರೂ. ಇಳಿಕೆ ಮಾಡಲು ಹಾಲು ಒಕ್ಕೂಟಗಳು ತೀರ್ಮಾನಿಸಿವೆ. ಇದರ ಜೊತೆಗೆ ಈಗ ಹಾಲು ಖರೀದಿಗೆ ಒಂದೆರಡು ದಿನ ರಜೆ ನೀಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+