Karnataka Migration: ಈ ಭಾಗಗಳಲ್ಲಿ ವಲಸಿಗರ ಹಾವಳಿ ಹೆಚ್ಚು: ಕೆಆರ್‌ಎಸ್ ಪಕ್ಷ ಕಳವಳ
ಪ್ರವಾಸಿಗರ ಸ್ವರ್ಗವಾಗಿದ್ದ ಕರ್ನಾಟಕವು ಇದೀಗ ವಲಸಿಗರ ಸ್ವರ್ಗವಾಗಿ ಬದಲಾಗಿದೆ. ದೇಶದ ಮೂಲೆ ಮೂಲೆಯಿಂದ ಜನ ಕರ್ನಾಟಕದತ್ತ ಬಂದು ನೆಲೆ ಕಾಣುತ್ತಿದ್ದಾರೆ. ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದವರು ದಿನೇ ದಿನೇ ದಬ್ಬಾಳಿಕೆ, ದರ್ಪವೂ ತೋರುತ್ತಿರುವ ಘಟನೆಗಳು ಇತ್ತೀಚೆಗೆ ದಿನಕ್ಕೊಂದು ಬೆಳಕಿಗೆ ಬರುತ್ತಲೇ ಇವೆ. ಇಲ್ಲಿನ ಕಾನೂನು ಹಾಗು ಪೊಲೀಸ್ ವ್ಯವಸ್ಥೆ ಬಿಗಿಯಾಗಿಲ್ಲದಿರುವುದೇ ಇದಕ್ಕೆಲ್ಲ ಕಾರಣ ಎನ್ನುವುದು ಇಲ್ಲಿನ ಮೂಲ ನಿವಾಸಿಗಳ ಆರೋಪ. ಈ ಬಗ್ಗೆ ಕರ್ನಾಟಕ ರಾಷ್ಟ್ರಸಮಿತಿ ಪಕ್ಷ (ಕೆಆರ್‌ಎಸ್) ಕೂಡ ಕಳವಳ ವ್ಯಕ್ತಪಡಿಸಿದೆ. ವಲಸಿಗರ ಅಟ್ಟಹಾಸ ಸಂಬಂಧಿಸಿ ಇತ್ತೀಚಿನ ಘಟನೆಗಳನ್ನು ಉಲ್ಲೇಖಿಸಿದೆ.
ಕರ್ನಾಟಕದಲ್ಲಿ ಯುಪಿ, ಬಿಹಾರಿ, ಅಸ್ಸಾಮಿ, ಬೆಂಗಾಲಿ ವಲಸಿಗ ಕಾರ್ಮಿಕ ಹಾವಳಿ ಜಾಸ್ತಿ ಆಗುತ್ತಿದೆ. ತುಮಕೂರು ಜಿಲ್ಲೆಯಲ್ಲೂ ಇವರ ಹಾವಳಿ ಜಾಸ್ತಿಯಾಗಿ ಸ್ಥಳೀಯರಿಗೆ ದಬಾಯಿಸಲು ಬರುತ್ತಾರೆ ಎಂದು ಆರೋಪಿಸಿದೆ. ಇದೀಗ ದೊಡ್ಡಬಳ್ಳಾಪುರ, ಕೊಡಗು ಕೆಲವು ಕಡೆ ತರಕಾರಿ ವ್ಯಾಪಾರಕ್ಕೂ ಇಳಿದು ಬಿಟ್ಟಿದ್ದಾರೆ. ಶಿರಾ ಕಡೆ ಕೂಡ ಕಾರ್ಖಾನೆ ಕೆಲಸಗಳಿಗೆ ಹಿಂಡು ಹಿಂಡಾಗಿ ಪ್ರತಿದಿನವೂ ವಲಸಿಗರು ಕಾಲಿಡುತ್ತಿದ್ದಾರೆ ಎಂದು ಹೇಳಿದೆ.

ಕೆಲ ವರ್ಷಗಳ ಹಿಂದೆ ಹಾಸನದಲ್ಲಿ ಗಾರ್ಮೆಂಟ್ ಫ್ಯಾಕ್ಟರಿಯಲ್ಲಿ ಸ್ಥಳೀಯರ ಮೇಲೆ ಹಲ್ಲೆ ನಡೆಸಿದ್ದರು. ಇತ್ತೀಚೆಗೆ ನೆಲಮಂಗಲದಲ್ಲಿ ನಡೆದ ಅತ್ಯಾಚಾರ ಘಟನೆ, ಚಿಕ್ಕಮಗಳೂರು, ಕೊಡಗು ಹಾಗೂ ಮಲೆನಾಡು ಕಡೆ ಕಾಫಿ ಎಸ್ಟೇಟ್‌ನಲ್ಲಿ ಇವರ ಹಾವಳಿ ಹಾಗೂ ಅನಾಚಾರಗಳು ಮಿತಿಮೀರಿವೆ. ನಮ್ಮ ಕರ್ನಾಟಕದಲ್ಲಿರುವ ನಮ್ಮವರೇ ಇವರನ್ನು ಹಿಂಡು ಹಿಂಡಾಗಿ ಕರೆದುಕೊಂಡು ಬರುತ್ತಿದ್ದಾರೆ ಎಂದು ಆರೋಪಿಸಿದೆ.
ನಮ್ಮವರಿಂದಲೇ ವಲಸೆ ಹೆಚ್ಚಳ
ನಮ್ಮವರು ಮನೆ ಮಳಿಗೆ ಬಾಡಿಗೆ ಕೊಡುತ್ತಾರೆ. ಕಮ್ಮಿ ಸಂಬಳ ಅಂತ ನೇಮಿಸಿಕೊಳ್ಳುತ್ತಾರೆ. ಇವರು ಮಾಡಬಾರದನ್ನು ಮಾಡಿದ ಮೇಲೆ ಲಬೋ ಲಬೋ ಅಂಥ ಬಾಯಿ ಬಡೆದುಕೊಳ್ಳುತ್ತಾರೆ. ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆ ಹದಿಗೆಟ್ಟು ಹೋಗಿದೆ. ಈ ಜೆಸಿಬಿ ಪಕ್ಷಗಳು ಯಾವ ಕ್ರಮ ತಗೊಳ್ಳುವುದಿಲ್ಲ. ಇವರು ವಲಸಿಗರ ವೋಟ್ ಬ್ಯಾಂಕ್ ಮಾಡಿಕೊಂಡೇ ಇರುತ್ತಾರೆ. ಭ್ರಷ್ಟ ಪಕ್ಷಗಳು ಪುಕ್ಕಟೆ ಅಕ್ಕಿ ರಾಗಿ ಕೊಟ್ಟು ಸ್ಥಳೀಯರಿಗೆ ದುಡಿಯದಂತೆ ಮಾಡಿದ್ದಾರೆ ಎಂದು ಆರೋಪ ಮಾಡಿದೆ.
ದಯವಿಟ್ಟು ಮೊದಲು ನಮ್ಮವರಿಗೆ ಜಾಗೃತಿ ಕೊಡಿ. ಹಲವಾರು ರೀತಿ ತರಬೇತಿ ಕೊಟ್ಟು ಕೌಶಲ್ಯತೆಗಳನ್ನು ಬೆಳೆಸಿ. ಸ್ಥಳೀಯರಿಗೆ ಒಂದಿಷ್ಟು ಒಳ್ಳೆ ಸಂಬಳ ಸವಲತ್ತುಗಳನ್ನು ಕೊಡುವ ಮುಖಾಂತರ ವಲಸಿಗರನ್ನು ನಿಯಂತ್ರಿಸಬೇಕು. ಕನ್ನಡಿಗರು ಆಲಸ್ಯರು, ಕನ್ನಡಿಗರ ದುಡಿಯುವುದಿಲ್ಲ, ಈ ಮಾತುಗಳನ್ನು ಮಾತನಾಡುವುದು ಬಿಟ್ಟು ಯಾವ ರೀತಿ ಕರ್ನಾಟಕದಲ್ಲಿ ಸ್ಥಳೀಯ ಕಾರ್ಮಿಕರನ್ನು ತುಂಬಿಸಿ, ಅವರಿಗೆ ಭದ್ರತೆ ಉದ್ಯೋಗ ಸೃಷ್ಟಿ ಮಾಡುವುದರ ಬಗ್ಗೆ ಯೋಚಿಸಿ. ಈಗಿನಿಂದಲೇ ಎತ್ತುಕೊಳ್ಳಬೇಕು ಇಲ್ಲವಾದರೆ, ಎಲ್ಲ ಕಳೆದುಕೊಂಡ ಮೇಲೆ ಏನು ಮಾಡಲು ಸಾಧ್ಯವಿಲ್ಲ ಎಂದು ಕೆಆರ್‌ಎಸ್ ಎಚ್ಚರಿಸಿದೆ.












Click it and Unblock the Notifications