ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿ ಊಟಕ್ಕೆ ಉಪ್ಪಿಟ್ಟು ಪೊಂಗಲ್ಲಿಗೆ ಬದಲು ಚಪಾತಿ

|
Google Oneindia Kannada News

ಬೆಂಗಳೂರು, ಮಾ.2 : ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ಬಿಸಿಯೂಟದ ಮೆನುವಿನಲ್ಲಿ ಬದಲಾವಣೆ ಮಾಡಲು ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ. ಮಕ್ಕಳಿಗೆ ಊಟದಲ್ಲಿ ಪೌಷ್ಠಿಕಾಂಶಯುಕ್ತ ಅಂಶಗಳನ್ನು ಸೇರಿಸಲು ಮೆನುವನ್ನು ಸಿದ್ಧಪಡಿಸಲಾಗಿದೆ.

ಸದ್ಯ, ನೀಡುತ್ತಿರುವ ಮಧ್ಯಾಹ್ನದ ಬಿಸಿಯೂಟದ ಮೆನುವಿನಲ್ಲಿ ವಾರದ 4 ದಿನ ಬೇಳೆ, ತರಕಾರಿ ಬಳಸಿದ ಅನ್ನ-ಸಾಬಾರ್ ನೀಡಲಾಗುತ್ತಿತ್ತು. ಇದರಲ್ಲಿ ಸ್ವಲ್ಪ ಬದಲಾವಣೆ ಮಾಡಿ, ಯಾವ ದಿನ ಯಾವ ಪದಾರ್ಥ ಬಳಸಿ ಸಾಂಬಾರ್ ಮಾಡಬೇಕು ಎನ್ನುವ ಪಟ್ಟಿಯನ್ನು ತಯಾರು ಮಾಡಲಾಗಿದೆ.

Mid Day Meal

ಶನಿವಾರ ನೀಡುತ್ತಿದ್ದ ಉಪ್ಪಿಟ್ಟು, ಪೊಂಗಲ್ ಬದಲಾಗಿ ಚಪಾತಿ ಸೇರಿದಂತೆ ಗೋಧಿ ಉತ್ಪನ್ನಗಳ ಆಹಾರವನ್ನು ನೀಡಲು ಚಿಂತನೆ ನಡೆಸಲಾಗಿದೆ. ಅಡುಗೆ ಮಾಡಲು ಬಳಸುವ ಸಾಂಬಾರ್ ಪುಡಿಗಳು ಪ್ರಮಾಣೀಕರಿಸಿದ್ದಾಗಿರಬೇಕು ಎಂದು ಸೂಚನೆ ನೀಡಲು ನಿರ್ಧರಿಸಲಾಗಿದೆ. [ಸಿಎಂ ತವರು ಜಿಲ್ಲೆಯಲ್ಲಿ ಸಮಸ್ಯೆ ತಂದ ಬಿಸಿಯೂಟ]

ಮಕ್ಕಳ ಆರೋಗ್ಯ, ಶಕ್ತಿ ವೃದ್ಧಿಗೆ ಸಹಾಯಕವಾಗುವಂತೆ ಕೋಳಿ ಮೊಟ್ಟೆ ಹಾಗೂ ಬಾಳೇಹಣ್ಣು ನೀಡಲು ಇಲಾಖೆ ಚಿಂತನೆ ನಡೆಸಿದೆ. ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಾದ ಮೊಹಮದ್ ಮೊಹಸಿನ್ ತಿಳಿಸಿದ್ದಾರೆ. [ಕಾಸರಗೋಡು: ಗಡಿನಾಡ ಮಕ್ಕಳಿಗೆ ಕೇರಳದ ಬಿಸಿಯೂಟ]

ಪರಿಷ್ಕೃತ ಮೆನು : ಪರಿಷ್ಕೃತ ಮೆನುವಿನ ಅನ್ವಯ ಶುಕ್ರವಾರ ಮಕ್ಕಳಿಗೆ ಬಿಸಿಬೇಳೆ ಬಾತ್, ಶನಿವಾರ ಚಪಾತಿ, ಗೋಧಿ ಉತ್ಪನನ್ನಗಳ ಅಡುಗೆ ನೀಡಲಾಗುತ್ತದೆ. ಬೇಳೆ ಬಳಸಿಕೊಂಡು ಪಾಲಕ್ ಸೊಪ್ಪು, ನುಗ್ಗೇಸೊಪ್ಪು, ಬೂದು ಕುಂಬಳ, ಕ್ಯಾರೆಟ್, ಬೀನ್ಸ್, ಎಲೆಕೋಸು, ನುಗ್ಗೇಕಾಯಿ, ಆಲೂಗಡ್ಡೆ, ಕುಂಬಳಕಾಯಿ, ಸೋರೆಕಾಯಿ, ಬೆಂಡೇಕಾಯಿ, ಮೂಲಂಗಿ ಸಾಂಬಾರ್ ಅನ್ನು ದಿನಕ್ಕೊಂದರಂತೆ ಮಾಡಬೇಕಾಗಿದೆ.

English summary
Karnataka Education Department may change the menu of Midday meal in school. Department prepared menu and submitted to the government for the approval.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X