Darshan Thoogudeepa: ಮೊದಲ ಬಾರಿಗೆ ಬಳ್ಳಾರಿ ಜೈಲಿಗೆ ಬಂದ ಮೀನಾ ತೂಗುದೀಪ: ದರ್ಶನ್ಗಾಗಿ ತಾಯಿ ಏನು ತಂದಿದ್ದಾರೆ ಗೊತ್ತಾ?
ಬಳ್ಳಾರಿ, ಸೆಪ್ಟೆಂಬರ್ 19: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದಾರೆ. ಬೆಂಗಳೂರಿನ ಜೈಲಿನಲ್ಲಿದ್ದಾಗ ನಟ ದರ್ಶನ್ ಭೇಟಿಗೆ ತಾಯಿ ಮೀನಾ ತೂಗುದೀಪ್ ಬಂದಿದ್ದರು. ಆದರೆ, ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ತಾಯಿ ಭೇಟಿಗಾಗಿ ದರ್ಶನ್ ಕನವರಿಸುತ್ತಿದ್ದರು.
ನಟ ದರ್ಶನ್ ಅವರು ಬಳ್ಳಾರಿ ಜೈಲಿಗೆ ಶಿಫ್ಟ್ ಆದ ನಂತರ ಅವರನ್ನು ಭೇಟಿ ಮಾಡೋಕೆ ಅವರ ತಾಯಿ ಬಂದಿರಲಿಲ್ಲ. ಆದರೆ ಈಗ ಕೊನೆಗೂ ದರ್ಶನ್ ಭೇಟಿಗೆ ತಾಯಿ ಮೀನಾ ತೂಗುದೀಪ ಬಳ್ಳಾರಿ ಜೈಲಿಗೆ ಬಂದಿದ್ದಾರೆ. ದರ್ಶನ್ ಭೇಟಿಯಾಗೋಕೆ ಪತ್ನಿ ವಿಜಯಲಕ್ಷ್ಮಿ ಅವರು ಭೇಟಿ ಕೊಡುತ್ತಿದ್ದರೂ ಕೂಡಾ ಬೇರೆ ಯಾರೂ ಕೂಡಾ ಅಷ್ಟು ಸುಲಭವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬೆಂಗಳೂರಿನಿಂದ ಬಳ್ಳಾರಿ ಜೈಲು ದೂರ ಇರುವ ಕಾರಣ ದರ್ಶನ್ ಅವರನ್ನು ಭೇಟಿ ಮಾಡುವುದು ಅವರ ಕುಟುಂಬಸ್ಥರಿಗೂ ಸಮಸ್ಯೆಯಾಗಿದೆ. ಹೀಗಿದ್ದರೂ ಕೂಡಾ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರು ನಿಯಮಿತವಾಗಿ ಬಂದು ಪತಿಯನ್ನು ಭೇಟಿ ಮಾಡಿ ಹೋಗುತ್ತಿದ್ದಾರೆ.

ಬೆಂಗಳೂರಿನಿಂದ ಬಳ್ಳಾರಿಗೆ 300ಕಿಮೀ ಅಂತರವಿರುವ ಕಾರಣ ತಾಯಿ ಮೀನಾ ತೂಗುದೀಪ್ ದರ್ಶನ್ರನ್ನು ಭೇಟಿ ಮಾಡಿರಲಿಲ್ಲ. ಇದೀಗ ದರ್ಶನ್ ಅವರನ್ನ ಭೇಟಿ ಮಾಡಲು ದರ್ಶನ್ ತಾಯಿ ಮೀನಾ ತೂಗುದೀಪ ಬಳ್ಳಾರಿ ಜೈಲಿಗೆ ಆಗಮಿಸಿದ್ದಾರೆ. ಅಕ್ಕ, ಭಾವ ಮತ್ತು ಅವರ ಮಕ್ಕಳ ಜೊತೆಗೆ ಕೇಂದ್ರ ಕಾರಾಗೃಹಕ್ಕೆ ಬಂದಿದ್ದಾರೆ. ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದಾಗ ದರ್ಶನ್ರನ್ನು ಕಾಣಲು ಮಗ ದಿನಕರ್ ತೂಗುದೀಪ ಜೊತೆ ಬಂದಿದ್ದರು. ಆದರೆ ಬಳ್ಳಾರಿ ಜೈಲಿಗೆ ಇದೇ ಮೊದಲ ಬಾರಿಗೆ ತಾಯಿ ಮೀನಾ ತೂಗುದೀಪ ಬಂದಿದ್ದಾರೆ. ಮಗನನ್ನು ಕಾಣುವ ತವಕದಲ್ಲಿ ತನ್ನ ಮಗಳ ಜೊತೆಗೆ ಕೇಂದ್ರ ಕಾರಾಗೃಹಕ್ಕೆ ಬಂದಿದ್ದಾರೆ.
ಇನ್ನೂ ದರ್ಶನ್ ನೋಡಲು ಮೊನ್ನೆಯಷ್ಟೇ ಪತ್ನಿ ವಿಜಯಲಕ್ಷ್ಮಿ ಬಳ್ಳಾರಿ ಜೈಲಿಗೆ ಬರುವಾಗ ದರ್ಶನ್ ಗಾಗಿ ಹೊಸ ಬಟ್ಟೆಯನ್ನ ತಂದಿದ್ದರು. ಇದೀಗ ದರ್ಶನ್ ನೋಡಲು ಬಂದ ವೇಳೆ ತಾಯಿ ಮೀನು ತೂಗುದೀಪ ಮತ್ತು ಕುಟುಂಬಸ್ಥರು ಕೈಯಲ್ಲಿ ಎರಡು ಬ್ಯಾಗ್ ತಂದಿದ್ದಾರೆ. ಸ್ವೀಟ್ಸ್, ಊಟದ ಬಾಕ್ಸ್, ಹಣ್ಣು ತಂದಿದ್ದಾರೆ.
ಕೊನೆಗೂ ದರ್ಶನ್ ಕೂಡ ತಾಯಿಯನ್ನು ನೋಡಬೇಕು ಎಂದು ಕೇಳುತ್ತಿದ್ದರಂತೆ. ಆದರೀಗ ಕೊಲೆ ಆರೋಪಿಯ ಆಸೆಯಂತೆ ಮೀನಾ ತೂಗುದೀಪರವರು ಬಳ್ಳಾರಿ ಜೈಲಿಗೆ ಬಂದಿದ್ದಾರೆ. ಬಳ್ಳಾರಿ ಜೈಲಿನಲ್ಲಿ ತಾಯಿ, ಅಕ್ಕ, ಭಾವ ಮತ್ತು ಅವರ ಮಕ್ಕಳ ಕಂಡ ನಟ ದರ್ಶನ್ ಕಣ್ಣೀರು ಹಾಕಿದ್ದಾರೆ. ಈ ವೇಳೆ ದರ್ಶನ್ ಅವರನ್ನ ಕುಟುಂಬದವರು ಆರೋಗ್ಯ ವಿಚಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ












Click it and Unblock the Notifications